ಜೀವನ ಎಂಬುದು ರೈಲಿನ ಹಾಗೆ, ನಮ್ಮ ವೃತ್ತಿ ಜೀವನದಲ್ಲಿ ಅನೇಕರು ಪ್ರಯಾಣಿಕರಾಗಿ ನಮ್ಮ ಜೀವನ ಎಂಬ ರೈಲಿಗೆ ಹತ್ತಿ ನಮ್ಮ ಜೊತೆ ಪ್ರಯಾಣ ಮಾಡುತ್ತಾರೆ. ಕೆಲವರು ಅವರ ನಿಲ್ದಾಣ ಬರುತ್ತಿದ್ದಂತೆ ನಮಗೆ ಗುಡ್ ಬಾಯ್ ಹೇಳಿ ಹೊರಟು ಹೋಗುತ್ತಾರೆ. ಆದರೆ ಇನ್ನು ಕೆಲವು ಜನರು ನಮ್ಮ ಪ್ರಯಾಣ ಮುಗಿಯುವ ತನಕ ನಮ್ಮ ಜೊತೆಯಲ್ಲೇ ಇದ್ದು, ಬೆನ್ನೆಲುಬಾಗಿರುತ್ತಾರೆ. ಅಂತಹವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಅಂತ್ಯದಲ್ಲಿ ನಮ್ಮನ್ನು ಬಿಟ್ಟು ಇಹ ಲೋಕ ತ್ಯಜಿಸಿದರು ಅವರ ನೆನೆಪು ನಮ್ಮಲ್ಲಿಯೇ ಇರುವಂತೆ ಇಟ್ಟುಕೊಂಡಿರುತ್ತೇವೆ.
ಹೀಗೆ ಬಡ ಕುಟುಂಬದಲ್ಲಿ ಜನಿಸಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಒರಿಯಾ ಭಾಷೆಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಭಾರತ ಚಿತ್ರರಂಗದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೇ 70-80 ರ ದಶಕದಲ್ಲಿ ಹೇಳಲಾರದ ಎತ್ತರಕ್ಕೆ ಬೆಳದು, ಟಾಪ್ ನಟಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ನಂತರ ಫೆಬ್ರವರಿ 12, 1996 ರಂದು ಮಾಧವಿ ಅವರು ರಾಲ್ಫ್ ಶರ್ಮ ಎಂಬುವವರ ಜೊತೆ ವಿವಾಹವಾಗುತ್ತಾರೆ. ರಾಲ್ಫ್ ಶರ್ಮ ಅವರು ದೊಡ್ಡ ಉದ್ಯಮಿಯಾಗಿದ್ದು, ಅಮೇರಿಕಾದಲ್ಲಿ ದೊಡ್ಡ ಔಷಧಿ ಕಂಪನಿ ನಡೆಸುತ್ತಿದ್ದಾರೆ. ವಿವಾಹವಾದ ನಂತರ ಸಿನಿಮಾರಂಗದಿಂದ ದೂರ ಉಳಿದಿರುವ ನಟಿ ಮಾಧವಿ, ಅಮೇರಿಕಾದಲ್ಲಿರುವ ತಮ್ಮ ಪತಿಯ ಸಂಪತ್ತನ್ನು ನೋಡುಕೊಳ್ಳುತ್ತಿದ್ದು, ಒಂದು ದೇಶವನ್ನೇ ಕೊಂಡುಕೊಳ್ಳುವಷ್ಟು ಹಣವನ್ನು ಸಂಪಾಧಿಸಿದ್ದಾರೆ.
ಮಾಧವಿ ಅವರು ತಮ್ಮ ವೈಯಕ್ತಿಕ ಹಾಗೂ ಸಿನಿ ಜೀವನದ ನೆನಪುಗಳು ಮತ್ತು ಅದರ ಫೋಟೋಗಳನ್ನು ಹಂಚಿಕೊಳ್ಳಲು ಮಾಧವಿ.ಕಾಮ್ ಎಂಬ ವೆಬ್ಸೈಟ್ ಅನ್ನು ರೂಪಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳ ಚಿತ್ರಗಳನ್ನು ಮೂವಿ ಗ್ಯಾಲರಿ ಎಂಬ ಪೇಜ್ ನಲ್ಲು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ತನ್ನದೇ ಆದ ಎಲ್ಲಾ ಚಿತ್ರಗಳನ್ನು ಅಪ್ಲೋಡ್ ಮಾಡಿರುವ ಅವರು ಡಾ.ರಾಜ್ ಅವರ ಜೊತೆಗಿನ ಒಂದು ಚಿತ್ರ ಮತ್ತು ಅಮಿತಾಬ್ ಬಚ್ಚನ್ ಅವರ ಜೊತೆ ಇರುವ ಒಂದು ಚಿತ್ರವನ್ನು ಮಾತ್ರ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ರಾಜ್ ಅವರ ಜೊತೆಗಿರುವ ಚಿತ್ರವನ್ನೇ ಮೊದಲು ಅಪ್ಲೋಡ್ ಮಾಡಿದ್ದಾರೆ. ಇವರಿಬ್ಬರನ್ನು ಬಿಟ್ಟರೇ ಮತ್ಯಾವ ನಟರ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿಲ್ಲ.
ಇದನ್ನು ನೋಡಿದರೇ ಕನ್ನಡಿಗರು ಆರಾಧಿಸುವ ಆರಾದ್ಯದೈವ ಡಾ.ರಾಜ್ ಕುಮಾರ್ ಅವರನ್ನು ಮಾಧವಿ ಅವರು ಎಷ್ಟು ಗೌರವಿಸುತ್ತಾರೆ ಮತ್ತು ಮರ್ಯಾದೆ ಕೊಡುತ್ತಾರೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಲ್ಲದೇ ಅಪ್ಪಾಜಿ ಅವರ ಬಗ್ಗೆ ತಮ್ಮ ವೆಬ್ಸೈಟ್ ನಲ್ಲಿ ಬರೆದುಕೊಂಡಿರುವ ಅವರು, ನನ್ನ ಜೀವನದಲ್ಲಿ ಅಂತಹಾ ಒಳ್ಳೆಯ ವ್ಯಕ್ತಿಯನ್ನು ಎಂದೂ ಬೇಟಿಯಾಗಿಲ್ಲ ಎಂದು ಬರೆದು ಕೊಂಡಿದ್ದಾರೆ.
ಇದರಲ್ಲೇ ಗೊತ್ತಾಗುತ್ತದೆ ಅಪ್ಪಾಜಿ ಅವರ ನಡುವಳಿಕೆ, ವೈಕ್ತಿತ್ವ ಎಂತಹದ್ದು ಎಂದು. ಕನ್ನಡಿಗರು ಮಾತ್ರವಲ್ಲದೇ ಬೇರೆ ರಾಜ್ಯದವರು ಅವರನ್ನು ಆರಾಧಿಸುತ್ತಾರೆ.