ವಿವೇಕ್ ಒಬೆರಾಯ್ ಮನೆ ರೇಡ್ ಗೆ ಕಾರಣ ಏನು..? ಬೆಂಕಿ ಇಲ್ದೇ ಹೊಗೆಯಾಡುತ್ತಾ..?

0
150

ಬೆಂಗಳೂರು: ಬೆಂಕಿ ಇಲ್ದೇ ಹೊಗೆ ಬರುತ್ತಾ.. ಹಾಗೇ ಕ್ಲೂ ಸಿಗ್ದೆ ಪೊಲೀಸ್ ಮನೆಯೊಳಗೆ ಬರೋದಕ್ ಆಗುತ್ತಾ.. ವಿವೇಕ್ ಒಬೆರಾಯ್ ಮನೆ ರೇಡ್ ಸುತ್ತಾ ಅನುಮಾನದ ಹುತ್ತ ಹಬ್ಬುತ್ತಿದೆ.

ನಾನೇನು ಮಾಡಿಲ್ಲ.. ನಂದು ತಪ್ಪಿಲ್ಲ ಅಂತಿದ್ದವರನ್ನೆಲ್ಲಾ ಸ್ವಲ್ಪ ಈ ಕಡೆ ಬರ್ತೀರಾ ಅಂತ ಸಿಸಿಬಿ ಪೊಲೀಸರು ಕರ್ದು ವಿಚಾರಿಸೋಕೆ ಸ್ಟಾರ್ಟ್ ಮಾಡಿದ್ದಾರೆ. ಡ್ರಗ್ಸ್ ಸಹವಾಸ ಮಾಡಿದ್ದೀರಾ.. ಇಲ್ಲಾ ಎಂದಾದ್ರು ನೋಡಿದ್ರಾ.. ನಿಮ್ ಹೆಸರೂ ಕೇಳಿ ಬರ್ತಿದ್ಯಲ್ಲಾ ಅಂತ ವಿಚಾರಿಸಿ ಕಂಬಿ ಹಿಂದೆ ತಳ್ತಿದ್ದಾರೆ. ಆದ್ರೆ ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ, ಡ್ರಗ್ಸ್ ಪೆಡ್ಲರ್ ಆದಿತ್ಯ ಆಳ್ವ ನಾಪತ್ತೆಯಾಗಿದ್ದ.. ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿತ್ತು.

ಯಾವಾಗ ಮಾಹಿತಿ ಸಿಗ್ತೋ ಆಗಿನಿಂದಲೇ ಆತನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಆದರೆ ಇದುವರೆಗೆ ಆಳ್ವ ಪತ್ತೆಯಾಗಿಲ್ಲ. ಹಾಗೇ ಹೀಗೆ ವಿಚಾರಿಸ್ತಾ ವಿಚಾರಿಸ್ತಾ ಅದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯತ್ತ ಕರ್ಕೊಂಡ್ ಬಂದು ಬಿಟ್ಟಿದೆ.

ಆದಿತ್ಯ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿತ್ತು. ಬಾಲಿವುಡ್ ನಟ ವಿವೇಕ್ ಎಲ್ಲಿ, ಡ್ರಗ್ಸ್ ಪೆಡ್ಲರ್ ಆದಿತ್ಯ ಆಳ್ವ ಎಲ್ಲಿ.. ಅಂತ ಜಾಲ ಹುಡುಕ್ತಾ ಹೋರಟಾಗ ಆಳ್ವನ ಸಹೋದರಿಯನ್ನು ನಟ ವಿವೇಕ್ ಒಬೆರಾಯ್ ಗೆ ಕೊಟ್ಟು ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬಾಮೈದನ ರಕ್ಷಣೆಗಾಗಿ ನಟ ವಿವೇಕ್ ಒಬೆರಾಯ್ ನಿಂತಿರುವ ಶಂಕೆ ವ್ಯಕ್ತವಾಗಿದೆ. ಯಾವಾಗ ಸಣ್ಣ ಕ್ಲೂ ಸಿಗ್ತೋ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದ ಸಿಸಿಬಿ ಪೊಲೀಸರ ತಂಡ ಮುಂಬೈಗೆ ತೆರಳಿ ವಿವೇಕ್ ಮನೆಯಲ್ಲಿ ಶೋಧ ನಡೆಸಿದ್ದಾಗಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪೊಲೀಸರ ಕೈಗೆ ಆಳ್ವಾ ಸಿಗ್ತಿಲ್ವಾ.. ಅಥವಾ ರಾಜಕಾರಣಿಯ ಮಗ ಅಂತ ತಪ್ಪಿಸ್ಕೊಳ್ತಿದ್ದಾನಾ ಅನ್ನೋದು ತನಿಖೆ ನಡೆದ ನಂತರವೇ ಬೆಳಕಿಗೆ ಬರ್ಬೇಕಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜೈಲು ಸೇರಿದ್ದು, ಸಿಸಿಬಿ ಪೊಲೀಸರು ಹಲವು ನಟ, ನಟಿಯರನ್ನು ವಿಚಾರಣೆ ನಡೆಸಿ ಬಲೆ ಬೀಸುತ್ತಿದ್ದಾರೆ.

LEAVE A REPLY

Please enter your comment!
Please enter your name here