ಏನಿದು “ಯುದ್ಧವೇ ಜಗತ್ತಿನ ಹಾದಿ”?

0
115

ಕೆ.ಜಿ.ಎಫ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತಹ ಸಿನಿಮಾ.. ದಿನದಿಂದ ದಿನಕ್ಕೆ ಕೆಜಿಎಫ್ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ.. ಹಾಗೆಯೇ ಚಿತ್ರತಂಡ ಸಿನಿಮಾದ ಒಂದೊಂದೆ ವಿಚಾರಗಳನ್ನು ಬಿಚ್ಚಿಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳುವಂತೆ ಮಾಡುತ್ತಿದೆ.

.
ಕೆಜಿಎಫ್ ಚಾಪ್ಟರ್ ೧ ಪ್ರೇಕ್ಷಕರಲ್ಲಿ ಗರುಡನ ಅಣ್ಣಾ ಅಧೀರಾ ಯಾರೆಂಬುದು ತಿಳಿದಿರಲಿಲ್ಲ.. ನಿರ್ದೇಶಕ ಪ್ರಶಾಂತ್ ನೀಲ್ ,ಅದೀರ ಮುಖವನ್ನು ತೋರಿಸದೆ ಪ್ರೇಕ್ಷಕರಲ್ಲಿ ಊಹಾಪೋಹವನ್ನು ಉಂಟು ಮಾಡಿದ್ದರು.. ಅಷ್ಟಲ್ಲದೆ ಇತ್ತೀಚೆಗೆ ಚಿತ್ರತಂಡ ಕೇವಲ ಅಧೀರ, ಉಂಗುರ ತೊಟ್ಟ ಕೈ ಮುಷ್ಟಿ ಇರುವ ಪೋಸ್ಟರನ್ನು ಮಾತ್ರ ಬಿಡುಗಡೆ ಮಾಡಿ ಅಧೀರ ಪಾತ್ರಧಾರಿಯನ್ನು ಜುಲೈ 29ನೇ ತಾರೀಕು ರಿವಿಲ್ ಮಾಡುತ್ತೇವೆ ಎಂದು ಹೇಳಿದ್ದರು..
ಯಾರಿರಬಹುದು ಎಂಬ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.. ಚಿತ್ರತಂಡ ವಿಲನ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದ್ದು ಆ ಪಾತ್ರದಲ್ಲಿ ಬಿ ಟೌನ್ನ ಖಳನಾಯಕ ಸಂಜಯ್ ದತ್ ಮಾಡಿರುವುದನ್ನು ನೋಡಿ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟುತ್ತಿದೆ..

ಪೋಸ್ಟರ್ ನಲ್ಲಿ ಸಂಜಯ್ ದತ್ ಅವರ ನೋಟ, ಕಣ್ಣಲ್ಲಿರುವ ಸಿಟ್ಟು ನಿಜಕ್ಕೂ ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ..

ರಾಕಿ ಮೀಟ್ಸ್ ರಾಕಿ !

ರಾಖಿ ಮಿಟ್ಸ್ ರಾಖಿ ಏನಿದು ಅಂತೀರಾ ? ಸಂಜಯ್ ದತ್ ಅವರ ಮೊದಲ ಸಿನಿಮಾ ರಾಕಿ , ಹಾಗೆಯೇ ಯಶ್ ಅವರು ಸಹಿತ ಪರಿಪೂರ್ಣ ನಾಯಕನಟನಾಗಿ ಕಾಣಿಸಿಕೊಂಡ ಚಿತ್ರ ರಾಕಿ!
ಹೀಗೆ ಬಾಲಿವುಡ್ ರಾಕಿ ಹಾಗೂ ಸ್ಯಾಂಡಲ್ ವುಡ್ ರಾಕಿಯನ್ನು ನೋಡಲು ಎಲ್ಲಾ ಚಿತ್ರರಂಗ ವರ್ಗದವರು ಕಾದು ಕೊಡುತ್ತಿದ್ದಾರೆ !

ಇನ್ನು ಸಂಜಯ್ ದತ್ ಅವರು ಎ೦ಟ್ರಿಯಿಂದಾಗಿ ಬಾಲಿವುಡ್ ನಲ್ಲಿ ಕೆಜಿಎಫ್ ಹೊಸದೊಂದು ಅಲೆ ಎಬ್ಬಿಸಿದೆ… ಹಿಂದಿ ಸಿನಿರಸಿಕರಲ್ಲಿಯೂ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕುತ್ತಿದೆ !

‘ಪ್ರಸ್ತಾನ೦’ ಸಂಜಯ್ ದತ್ ಅಭಿನಯಿಸುತ್ತಿರುವ ಬಾಲಿವುಡ್ ಸಿನಿಮಾ.. ಈ ಸಿನಿಮಾದ ಟೀಸರ್ ಸಮಾರಂಭದಲ್ಲಿ ಸಂಜು ಅಧೀರನ ಪಾತ್ರದ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ದತ್, ಅಧೀರಾ ಒಂದು ಪವರ್ ಫುಲ್ ಪಾತ್ರ, ಥೇಟ್ ಅವೆಂಜರ್ಸ್ ನ ಥಾನೋಸ್ ಪಾತ್ರವನ್ನು ಅಧೀರ ನೆನೆಸುತ್ತದೆ..

ಅಧೀರ ಪಾತ್ರ ಕೆಜಿಎಫ್ ಚಾಪ್ಟರ್ ಒಂದರ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ.. ಇದೊಂದು ಖತರ್ನಾಕ್ ಪಾತ್ರವಾಗಿದ್ದು ಖತರ್ನಾಕ್ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ !

ಈ ಮೂಲಕ ಮುನ್ನಾಭಾಯ್ ಚಂದನವನಕ್ಕೆ ಕಾಲಿಟ್ಟಿದ್ದಾರೆ..

ಪ್ರೇಕ್ಷಕರಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಕಾಡುತ್ತಿದೆ.. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಕಾಮೆಂಟ್ಗಳ ಮೂಲಕ ಚರ್ಚೆ ನಡೆಯುತ್ತಲೇ ಇದೆ ..

ಅಧೀನ ಪಾತ್ರದಲ್ಲಿರುವ ಸಂಜಯ್ ದತ್ ಅವರ ಮುಖದ ಮೇಲಿನ ಟ್ಯಾಟೂವಿನ ಅರ್ಥವೇನು ಎಂದು ?

ಈಗ ಈ ಕುತೂಹಲಕ್ಕೂ ಫುಲ್ ಸ್ಟಾಪ್ ಬಿದ್ದಿದೆ..
ನಿರ್ದೇಶಕ ಪ್ರಶಾಂತ್ ಇಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.. ಆ ಪೋಸ್ಟರ್ ನಲ್ಲಿ ಸಂಜು ಅವರ ಮುಖದ ಮೇಲಿನ ಅರ್ಥವೇನೆಂಬುದನ್ನು ತಿಳಿಸಿದ್ದಾರೆ ..

“ಯುದ್ಧವೇ ಜಗತ್ತಿನ ಹಾದಿ “

ಹೌದು ಮುಖದ ಮೇಲೆ ಯುದ್ಧವೇ ಜಗತ್ತಿನ ಹಾದಿಯೆಂದು ಹಾಕಿಸಿದ್ದಾರೆ ಈ ಮೂಲಕ ಕೆಜಿಎಫ್ ಚಾಪ್ಟರ್ ೨ ಅ೦ತು ಪ್ರೇಕ್ಷಕರ ನಿರೀಕ್ಷೆಯನ್ನು
ಹೆಚ್ಚಿಸಿ, ಕನ್ನಡ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ

LEAVE A REPLY

Please enter your comment!
Please enter your name here