ಏನಿದು ‘ಹವಾಲಾ’, ಡಿಕೆಶಿ ಇದರ ಸುಳಿಗೆ ಸಿಲುಕಿದ್ದೇಗೆ..?!

0
424

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅಪರಾಧಗಳಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರು ‘ಹವಾಲ’. ಸಾಮಾನ್ಯ ಜನರಿಗೆ ಹವಾಲ ಎಂದರೇನು..? ಈ ಕುತಂತ್ರ ರಾಜಕಾರಣಿಗಳು ಅದರ ಬೆನ್ನು ಹತ್ತಿರುವುದೇಕೆ..? ಅದರೊಳಗೆ ಸಿಲುಕಿ, ಒದ್ದಾಡುತ್ತಿರುವುದೇಕೆ..? ಎಂಬ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ. ದೇಶದ ಅನೇಕ ರಾಜಕೀಯ ನೇತಾರರು, ಖ್ಯಾತ ಉದ್ಯಮಗಳು ಕೂಡಾ ಇದೀಗ ಹವಾಲ ಸುಳಿಗೆ ಸಿಲುಕಿದ್ದಾರೆ. ಅಚ್ಚರಿ ಎಂದರೆ ಇದೀಗ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹವಾಲ ದಂಧೆಯಲ್ಲಿ ಕೇಳಿ ಬಂದಿದೆ. ಡಿಕೆ ಶಿವಕುಮಾರ್ ಹವಾಲ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಹಾಗಾದ್ರೆ ಹವಾಲ ಅಂದ್ರೇನು ಎನ್ನುವ ಕುತೂಹಲದ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಈ ಹವಾಲ ದಂಧೆ ಸಾಮಾನ್ಯವಾಗಿ ನೂರಾರು ಕೋಟಿ ರೂ.ಗಳ ಲೆಕ್ಕದಲ್ಲೇ ನಡೆಯುತ್ತದೆ. ತೆರಿಗೆಯಿಂದ ಪಾರಾಗಲು ಈ ವಿಧಾನವನ್ನು ಉದ್ಯಮಿಗಳು ಮತ್ತು ರಾಜಕೀಯ ನಾಯಕರು ಬಳಸುತ್ತಾರೆ. ಉದಾಹರಣೆಗೆ ಬೆಂಗಳೂರಿನ ಒಬ್ಬ ಉದ್ಯಮಿಗೆ ತುರ್ತಾಗಿ ಹತ್ತು ಕೋಟಿ ರೂಪಾಯಿ ಹಣ ಬೇಕು. ಆದ್ರೆ ಬೆಂಗಳೂರಿನಲ್ಲಿ ಆತನಿಗೆ ಹಣ ಸಿಗುವುದಿಲ್ಲ. ಆದ್ರೆ ಉದ್ಯಮಿಗೆ ಬಹಳ ಬೇಕಾದ ಮತ್ತೊಬ್ಬ ವ್ಯಕ್ತಿ ಬೆಳಗಾವಿಯಲ್ಲಿ ಲೇವಾದೇವಿ ವ್ಯವಹಾರಸ್ಥನೊಬ್ಬನ ಸಂಪರ್ಕ ಸಂಖ್ಯೆ ಕೊಟ್ಟು, ಹಣದ ವ್ಯವಸ್ಥೆ ಮಾಡುತ್ತಾನೆ. ಬೆಳಗಾವಿಯ ಲೇವಾದೇವಿದಾರ ಕೋಡ್‍ವರ್ಡ್‍ಗಳನ್ನು ಬೆಂಗಳೂರಿನ ಉದ್ಯಮಿಗೆ ರವಾನಿಸುತ್ತಾನೆ ಮತ್ತು ಬೆಂಗಳೂರಿನಲ್ಲಿನ ತನ್ನ ವ್ಯಕ್ತಿಗೂ ಈ ಕೋಡ್‍ವರ್ಡ್‍ಗಳನ್ನು ತಿಳಿಸುತ್ತಾನೆ. ಈ ಮಾದರಿಯಲ್ಲೇ ವ್ಯವಹಾರ ನಡೆಯುತ್ತದೆ. ಅಚ್ಚರಿ ಎಂದರೆ ಅಷ್ಟು ವ್ಯವಹಾರ ಅಕ್ರಮವಾಗಿ ನಡೆಯುತ್ತದೆ. ಹಣದ ವರ್ಗಾವಣೆಯನ್ನು ಬ್ಯಾಂಕ್ ಖಾತೆ ಮೂಲಕ ತೋರಿಸದೆ, ತೆರಿಗೆ ರಹಿತವಾಗಿ ವ್ಯವಹಾರ ನಡೆಯುತ್ತದೆ. ಹೀಗೆ ಯಾವುದೇ ಬ್ಯಾಂಕ್, ಸರಕಾರ ಒಟ್ಟಾರೆ ಕಾನೂನು ವ್ಯಾಪ್ತಿಗೆ ಬಾರದಂತೆ ಮಾಡುವ ವ್ಯವಹಾರಕ್ಕೆ ಹವಾಲ ಎನ್ನಲಾಗುತ್ತದೆ. ಈ ವ್ಯವಹಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ನಿಗೂಢ ಕೋಡ್ ಬಳಸುತ್ತಾರೆ.

ಇನ್ನು ಹವಾಲ ದಂಧೆಯಲ್ಲಿ ತೆರಿಗೆ ಮೊತ್ತಕ್ಕಿಂತ ಕಮಿಷನ್ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಈ ರೀತಿಯಲ್ಲಿ ಅಕ್ರಮ ಹಣ ವರ್ಗಾವಣೆಯನ್ನು ನಂಬಿಕಸ್ತರಿಗಷ್ಟೇ ವರ್ಗಾವಣೆ ಮಾಡಿಕೊಡಲಾಗುತ್ತದೆ. ಸುಲಭವಾಗಿ ಹಲಾವ ದಂದೆಯ ತಿಳಿಯ ಬೇಕಿದ್ದರೆ, ತಮಿಳಿನ ರಜನೀಕಾಂತ್ ಅಭಿನಯದ ಶಿವಾಜಿ ಸಿನಿಮಾದಲ್ಲಿ ಭಾರತದಲ್ಲಿ ಒಟ್ಟು ಮಾಡಿದ ಹಣವನ್ನು ವಿದೇಶಕ್ಕೆ ಸಾಗಿಸುವ ದೃಶ್ಯವೊಂದಿದೆ. ಆ ದೃಶ್ಯಕ್ಕೆ ಬಳಸಿರುವುದು ಇದೇ ಹವಾಲ ತಂತ್ರ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹವಾಲ ದೊಡ್ಡ ಸದ್ದು ಮಾಡುತ್ತಿದೆ. ಉತ್ತರ ಭಾರತದಲ್ಲಿ ದೊಡ್ಡ ಮೊತ್ತವನ್ನು ಜತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಹೀಗಾಗಿ ವ್ಯಾಪಾರಿಗಳು ಮತ್ತು ರಾಜಕೀಯ ನಾಯಕರು ಹವಾಲ ವ್ಯವಹಾರ ಮಾಡುತ್ತಾರೆ.

ಇನ್ನು ವಿದೇಶಗಳಿಂದಲೂ ಹವಾಲ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣಗಳಿವೆ. ವಿದೇಶಗಳಲ್ಲಿ ಕೆಲಸ ಮಾಡುವ ವ್ಯಕ್ತಿ ಭಾರತಕ್ಕೆ ಹಣ ತಲುಪಿಸಬೇಕು ಆದರೆ ಅದಕ್ಕೆ ಒಂದಿಷ್ಟು ತೆರಿಗೆ ಬೀಳುತ್ತದೆ. ಹೀಗಾಗಿ ವಿದೇಶದಲ್ಲಿರುವ ಆ ವ್ಯಕ್ತಿ ಅಲ್ಲಿಯ ವ್ಯಾಪಾರಿಯೊಬ್ಬನಿಗೆ ಆ ಹಣ ನೀಡುತ್ತಾನೆ. ಆ ಹಣ ಪಡೆದ ವ್ಯಾಪಾರಿಯು ಭಾರತದಲ್ಲಿ ಇರುವ ತನ್ನ ವ್ಯಕ್ತಿ ಮೂಲಕ ಹಣ ಪಡೆದ ವ್ಯಕ್ತಿಯ ಕುಟುಂಬಕ್ಕೆ ಆ ಮೊತ್ತವನ್ನು ತಲುಪಿಸುತ್ತಾನೆ. ಅದಕ್ಕಾಗಿ ಕಮಿಷನ್ ತೆಗೆದುಕೊಳ್ಳುತ್ತಾನೆ. ಇದನ್ನೆ ಹವಾಲ ಎನ್ನುತ್ತಾರೆ.

LEAVE A REPLY

Please enter your comment!
Please enter your name here