ಪಿ.ಚಿದಂಬರಂ `ಸೆ.2 ರವರೆಗೂ ಸಿಬಿಐ ಕಸ್ಟಡಿಯಲ್ಲೇ ಇರುತ್ತೇನೆ’ ಎಂದು ಹೇಳಲು ಕಾರಣವೇನು..?

0
266

ಐಎನ್‍ಎಕ್ಸ್ ಹಗರಣ ಕುರಿತು ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಆಗಸ್ಟ್ 21 ರಂದು ಹೊಸದಿಲ್ಲಿಯ ಪೋಲಿಸರಿಂದ ಬಂಧನಕ್ಕೆ ಒಳಗಾಗಿದ್ದ ಚಿದಂಬರಂ, ಪ್ರಕರಣ ಕುರಿತು ನಡೆಯುವ ವಿಚಾರಣೆಗೆ ಸಿಬಿಐ ಕಸ್ಟಡಿಯಲ್ಲಿ ಇರಬೇಕಾಗಿತ್ತು. ಈಗ ವಿಚಾರಣಾ ಅವಧಿ ಮುಗಿಯುವ ಮುನ್ನವೇ ಚಿದಂಬರಂ ಸೆಪ್ಟಂಬರ್ 02ರವರೆಗೂ ಸಿಬಿಐ ಕಸ್ಟಡಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಚಿದಂಬರಂ ಈ ರೀತಿ ಕೇಳಿರುವುದು ಎಲ್ಲರಲ್ಲೂ ಸಾಕಷ್ಟು ಕೂತೂಹಲ ಮೂಡಿಸಿದೆ ಎನ್ನಬಹುದು.

ಅಕ್ರಮ ಹಣ ವರ್ಗಾವಣೆಯಲ್ಲಿ ಸಿಲುಕಿಕೊಂಡಿರುವ ಪಿ.ಚಿದಂಬರಂ ಅವರ ಕೋರಿಕೆಗೆ ಕೋರ್ಟ್ ಯಾವುದೇ ರೀತೀಯ ಪ್ರತಿಕ್ರಿಯೇ ನೀಡದೆ, ಸೆಪ್ಟಂಬರ್ 05 ರಂದು ಪ್ರಕಟಣೆ ಮಾಡುವುದಾಗಿ ತಿಳಿಸಿದೆ. ಚಿದಂಬರಂ ಕೋರಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಸೆಪ್ಟಂಬರ್ 02 ರವರೆಗೂ ಸಿಬಿಐ ಕಸ್ಟಡಿಯಲ್ಲೇ ಇರಲು ಬಯಸಿದ ಚಿದಂಬರಂ ಅವರ ಕೋರಿಕೆಯನ್ನು ಅನುವು ಮಾಡಿಕೊಡಬೇಕೆಂದು ಅವರ ಪರ ವಕೀಲರಾದ ಕಪಿಲ್ ಸಿಬಲ್ ಕೋರ್ಟ್‍ನಲ್ಲಿ ವಾದ ಮಂಡಿಸಿದರು.

ಸದ್ಯ ಇ.ಡಿ ಬಂಧನದಿಂದ ಪಿ.ಚಿದಂಬರಂ ಅವರನ್ನು ಸೆ.05 ರವರೆಗೂ ಮಧ್ಯಂತರ ರಕ್ಷಣೆ ನೀಡಿ ಎಂದು ಕೋರ್ಟ್ ಆದೇಶ ಹೊರಡಿಸಿ

LEAVE A REPLY

Please enter your comment!
Please enter your name here