‘ಶ್ರಾವಣ ಸೋಮವಾರ’ದ ವ್ರತ ಹೀಗಿರಲಿ..

0
191

ಹಿಂದೂ ಪುರಾಣಗಳ ಪ್ರಕಾರ ‘ಶ್ರಾವಣ ಸೋಮವಾರ’ ವಿಧಿ-ವಿಧಾನದಿಂದ ಶಿವನ ಪೂಜೆ ಮಾಡಿದರೆ, ಅವರಿಗೆ ವಿಶೇಷ ಫಲ ಲಭಿಸುತ್ತದೆ. ಈ ಫಲದ ಪ್ರಭಾವದಿಂದ ಸುಖಿ, ನಿರೋಗಿ ಹಾಗೂ ಸಮೃದ್ಧಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ಶ್ರಾಮಣ ಸೋಮವಾರದ ವ್ರತ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಅದರ ಮಾಹಿತಿ ಇಲ್ಲಿದೆ ನೋಡಿ.

• ಓಂ ನಮಃಶಿವಾಯ ಮಂತ್ರದ ಜೊತೆಗೆ ದೇವರಿಗೆ ಬಿಳಿ ಹೂವು, ಬಿಳಿ ಅಕ್ಕಿ, ಬಿಳಿ ಚಂದನ, ಪಂಚಾಮೃತ, ಅಡಿಕೆ, ಹಣ್ಣು ಹಾಗೂ ಗಂಗಾಜಲ ಅಥವಾ ಶುದ್ಧ ನೀರಿನಿಂದ ದೇವರ ಪೂಜೆ ಮಾಡಬೇಕು.

• ದಿನದಲ್ಲಿ ಒಂದು ಬಾರಿ ಮಾತ್ರ ಉಪ್ಪು ಸೇರಿಸಿದ ಆಹಾರ ಸೇವನೆ ಮಾಡಬೇಕು.

• ಪೂರ್ತಿ ದಿನ ವ್ರತ ಮಾಡಲು ಸಾಧ್ಯವಾಗದಿದ್ದಲ್ಲಿ ಸೂರ್ಯಾಸ್ತದವರೆಗೆ ಮಾಡಿ.

• ವ್ರತದ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಕಪ್ಪು ಎಳ್ಳನ್ನು ಹಾಕಿ ಸ್ನಾನ ಮಾಡಬೇಕು.

• ಭಗವಂತ ಶಿವನ ಅಭಿಷೇಕ ನೀರು ಹಾಗೂ ಗಂಗಾಜಲದಲ್ಲಾಗುತ್ತದೆ. ವಿಶೇಷ ಫಲ ಪ್ರಾಪ್ತಿಗಾಗಿ ಹಾಲು, ತುಪ್ಪ, ಮೊಸರು, ಜೇನು, ಸಾಸಿವೆ, ಕಪ್ಪು ಎಳ್ಳಿನಿಂದ ಮಾಡಬೇಕು.

• ದೇವರ ಪೂಜೆ ಮಾಡುವ ವೇಳೆ ಮಂತ್ರ ಜಪಿಸುವುದು ಬಹಳ ಮಹತ್ವ ಪಡೆದಿದೆ. ಶಿವ ಪಂಚಾಕ್ಷರಿ ಜಪವಿರಲಿ, ಗಾಯತ್ರಿ ಮಂತ್ರವಿರಲಿ ಇಲ್ಲ ಮೃತ್ಯುಂಜಯ ಜಪವಿರಲಿ ಪೂಜೆ ಮಾಡುವ ವೇಳೆ ಮಂತ್ರ ಪಠಿಸಬೇಕು.

• ಶಿವ-ಪಾರ್ವತಿ ಪೂಜೆ ಜೊತೆಯಲ್ಲಿ ಶ್ರಾವಣ ಮಾಸದ ಕಥೆಯನ್ನು ಓದಬೇಕು. ಇದಾದ ನಂತ್ರ ಮನೆ ಮಂದಿಗೆ ಪ್ರಸಾದ ಹಂಚಿ ನಂತ್ರ ನೀವು ತೆಗೆದುಕೊಳ್ಳಿ.

LEAVE A REPLY

Please enter your comment!
Please enter your name here