ನಾಲ್ಕು ಬಾರಿ ವಿವಾಹ ಮುರಿದ ಬಳಿಕ ಮಹಿಳೆ ಮಾಡಿದ್ದಾದರೂ ಏನು ?

0
107

ಪ್ರೀತಿ ಅನ್ನೋದೇ ಹಾಗೆ!ಯಾರಿಗೆ ,ಯಾವಾಗ, ಯಾರ ಮೇಲೆ ಆಗುತ್ತೆ ಹೇಳೋಕೆ ಆಗಲ್ಲ..ನಾವು ಇಷ್ಟಪಟ್ಟವರು ನಮ್ಮ ಜೊತೆಯಲ್ಲಿ ಇರಬೇಕು ಎಂಬುದು ಸಹಜ ಬಯಕೆಯಾಗಿದೆ ..ಆದರೆ ಇಲ್ಲೊಬ್ಬಳು ವಿಚಿತ್ರ ಪ್ರೇಯಸಿ ಇದ್ದಾಳೆ ..ಈಕೆ ಮದುವೆಯಾಗಿರುವುದು ತಾನು ಇಷ್ಟಪಟ್ಟ ನಾಯಿಯನ್ನ.. ಹೌದು ಇದು ಅಚ್ಚರಿ ಎಂದೆನಿಸಿದರೂ ಸತ್ಯ !
ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳು ನಾಯಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.. ಎಲಿಜಬತ್ ಹುಡ್ ಎಂಬುವ ಇಂಗ್ಲೆಂಡ್ ನ ಮಹಿಳೆ ತಾನು ಸಾಕಿರುವ ನಾಯಿ ಲೋಗೋನ್ ಅನ್ನು ಮದುವೆಯಾಗಿದ್ದಾಳೆ ..
ಇನ್ನು ಈಕೆ ನಾಯಿಯನ್ನು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾಳೆ.. ಈ ದೃಶ್ಯವನ್ನು ಇಂಗ್ಲೆಂಡ್ನ ಖಾಸಗಿ ಚಾನೆಲ್ ದ್ದಿಸ್ ಮಾರ್ನಿಂಗ್ ನಲ್ಲಿ ನೇರ ಪ್ರಸಾರವಾಗಿ ತೋರಿಸಲಾಗಿದೆ ..
ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.. ನಾಯಿ ಜೊತೆಗಿನ ಮದುವೆ ಕುರಿತು ಮಾತನಾಡಿದ ಎಲಿಜಬತ್ ಹುಡ್,ನನ್ನ ನಾಲ್ಕು ಎಂಗೇಜ್ ಮೆಂಟ್ ಗಳು ಮುರಿದು ಬಿದ್ದಿದ್ದವು.. ಆದುದರಿಂದ ನಾನು ಪುರುಷರ ಸಂಬಂಧ ಕುರಿತು ಬೇಸತ್ತಿದ್ದೇನೆ, ಆದರೆ ಈಗ ನನಗೆ ನಿಜವಾದ ಪ್ರೀತಿ ನನ್ನ ನಾಯಿ ಲೋಗೋನ್ ನಿಂದ ಸಿಕ್ಕಿದೆ ಎಂದು ಹೇಳಿದ್ದಾಳೆ ಒಟ್ಟಾರೆ ಪುರುಷರಿಂದ ದೂರವಿರಲು ನಿರ್ಧರಿಸಿರುವ ಇಂಗ್ಲೆಂಡ್ನ ಈ ಲೇಡಿ ನಾಯಿ ಜೊತೆಗಿನ ವಿವಾಹವನ್ನು ಸಮರ್ಥಿಸಿಕೊಂಡಿದ್ದಾಳೆ!
ಇನ್ನು ಈ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ

LEAVE A REPLY

Please enter your comment!
Please enter your name here