ನಟರಾಗುವ ಮುನ್ನ ಈ ಸ್ಟಾರ್’ಗಳು ಮಾಡುತ್ತಿದ್ದ ಕೆಲಸ ಆದ್ರೂ ಏನು ನೋಡಿ…?

0
123

ನಟರ ಹೆಸರುಗಳ ಹಿಂದೆ ಬಂದಿರುವ ಸ್ಟಾರ್’ಗಿರಿ ಸುಮ್ಮನೆ ಒಂದೇ ಸಿನಿಮಾದಲ್ಲಿ ಅಭಿನಯಿಸಿದಕ್ಕಾಗಿ ಬಂದಿದ್ದಲ್ಲ ಅದರ ಹಿಂದೆ ಆ ನಟರ ಶ್ರಮ ಪರಿಶ್ರಮ ಇದೆ. ವಿಶೇಷ ಅಂದ್ರೆ ದರ್ಶನ್ ಗಣೇಶ್ ಯಶ್ ಸೇರಿದಂತೆ ಮತ್ತೆ ಕೆಲವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣುವುದಕ್ಕೂ
ಮುಂಚೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದರು ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದರು.

ಯಾವ ಧಾರಾವಾಹಿಗಳಲ್ಲಿ ಇವರೆಲ್ಲರೂ ನಟಿಸಿದ್ದರು ಎಂಬುದು ನಿಮಗೆಲ್ಲಾ ನೆನಪಿರಬಹುದು ಆದರೆ ನಿಮಗಾಗಿ ಮತ್ತೊಮ್ಮೆ ಅದನ್ನು ನೆನಪಿಸುವ ಪ್ರಯತ್ನ ನಮ್ಮದು.

1) ಚಂದ್ರಿಕಾ ದಲ್ಲಿ ದರ್ಶನ್

ಎಲ್ಲರಿಗೂ ಗೊತ್ತಿದೆ ದರ್ಶನ್ ನಾಯಕನಾಗುವ ಮೊದಲು ಹಲವು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ನಟಿಸಿದ್ದರು.
ಮೆಜೆಸ್ಟಿಕ್ ಚಿತ್ರಕ್ಕೂ ಮುಂಚೆ ದೇವರ ಮಗ, ಮಹಾಭಾರತ ಅಂತ ಸಿನಿಮಾದಲ್ಲಿ ನಟಿಸಿದ್ದರು ಆದರೆ ಅದಕ್ಕೂ ಮುಂಚೆ ಚಂದ್ರಿಕಾ ಎಂಬ ಧಾರಾವಾಹಿಯಲ್ಲಿ ದರ್ಶನ್ ಬಣ್ಣ ಹಚ್ಚಿದ್ದರು.

2 ) ನಂದಗೋಕುಲದಲ್ಲಿ ಯಶ್

ರಾಕಿಂಗ್ ಸ್ಟಾರ್ ಯಶ್ ಜಂಬದ ಹುಡುಗಿ, ಮೊಗ್ಗಿನ ಮನಸ್ಸು ಚಿತ್ರಗಳಲ್ಲಿ ಅಭಿನಯಿಸುವ ಮುಂಚೆ ಧಾರಾವಾಹಿಯಲ್ಲಿ ನಟಿಸಿದ್ದರು
ಅಶೋಕ್ ಕಶ್ಯಪ್ ನಿರ್ದೇಶನದ ನಂದಗೋಕುಲ ಸೀರಿಯಲ್ನಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು.

3) ಪಾಪ ಪಾಂಡು ಗಣೇಶ್

ಕಾಮಿಡಿ ಟೈಮ್ ಮೂಲಕ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಗಣೇಶ್ ನಂತರ ಇಂಡಸ್ಟ್ರಿಯಲ್ಲಿ ಗೋಲ್ಡನ್ ಸ್ಟಾರ್ ಆದರು
ಆದರೆ ಗಣೇಶ್ ಕೂಡ ಹಲವು ಸೀರಿಯಲ್ನಲ್ಲಿ ನಟಿಸಿದ್ದರು
ಸಿಹಿ ಕಹಿ ಚಂದ್ರು ನಿರ್ದೇಶನದ ಪಾಪ ಪಾಂಡು , ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಯದ್ವಾ ತದ್ವಾ ವಠಾರ ಅಂತ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

4 ) ಗುಡ್ಡದ ಭೂತದಲ್ಲಿ ಪ್ರಕಾಶ್ ರೈ

ಕನ್ನಡ ತೆಲುಗು ತಮಿಳು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಪ್ರಕಾಶ್ ರೈ
ತಮ್ಮ ಬಣ್ಣದ ವೃತ್ತಿ ಆರಂಭಿಸಿದ್ದೆ ಧಾರಾವಾಹಿ ಮೂಲಕ
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಿಸಿಲು ಕುದುರೆ, ಗುಡ್ಡದ ಭೂತದಲ್ಲಿ ಗಮನ ಸೆಳೆದಿದ್ದರೂ ತದನಂತರವೇ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದಿತ್ತು.

5 ) ಲಕ್ಷ್ಮಿ ಬಾರಮ್ಮದಲ್ಲಿ ಚಂದನ್

ಪ್ರೇಮ ಬರಹ ಚಿತ್ರದ ನಾಯಕ ಚಂದನ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ
ಈ ಚಂದನ್ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗಲು ವೇದಿಕೆಯಾಗಿದ್ದು ಕಿರುತೆರೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿ
ಈ ಧಾರಾವಾಹಿ ಮೂಲಕವೇ ಚಂದನ್ ಗೆ ಅದೃಷ್ಟ ಸಿಕ್ಕಿತ್ತು .

6 ) ಅಗ್ನಿಸಾಕ್ಷಿಯಲ್ಲಿ ವಿಜಯ್ ಸೂರ್ಯ

ಇಷ್ಟಕಾಮ್ಯ , ಕ್ರೇಜಿಸ್ಟಾರ್ ಅಂತಹ ಚಿತ್ರಗಳಲ್ಲಿ ಮಿಂಚಿದ ನಟ ವಿಜಯ್ ಸೂರ್ಯ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಮತ್ತು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ, ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡ ವಿಜಯ್ ಸೂರ್ಯ ಈಗ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾದ ಪ್ರೇಮಲೋಕ ಎಂಬ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ.

7 ) ಡಾರ್ಲಿಂಗ್ ಕೃಷ್ಣ

ಹುಚ್ಚಾಟ, ಮದರಂಗಿ, ಮುಂಬಯಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಡಾರ್ಲಿಂಗ್ ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕವೇ ಜನಪ್ರಿಯತೆ ಗಳಿಸಿಕೊಂಡಿರುವುದು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here