ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಅಂತರರಾಷ್ಟ್ರೀಯ ಸ್ಟಾರ್ ಆಗಿರುವುದು ತಮಗೆಲ್ಲರಿಗೂ ತಿಳಿದಿದೆ, ಭಾರತಾದ್ಯಂತ ಅವರ ಖ್ಯಾತಿ ಬೆಳೆದಿದ್ದು, ಕೊಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿ, ಕನ್ನಡದ ಕೀರ್ತಿಯನ್ನು ದೇಶಾದ್ಯಂತ ಹರಡುತ್ತಿದ್ದಾರೆ. ಅಲ್ಲದೆ ಸನ್ಮಾನಗಳ ಮೇಲೆ ಸನ್ಮಾನ ಮತ್ತು ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಳ್ಳುತ್ತಿದ್ದಾರೆ !
ಯಶ್ ಅವರ ಗುಣ ಹೇಗೆ ಎಂದರೆ, ತಮಗೇನು ಅನಿಸುತ್ತದೋ ಅದನ್ನು ನೇರವಾಗಿಯೇ ಹೇಳಿಬಿಡುತ್ತಾರೆ. ಮೊನ್ನೆಯಷ್ಟೇ ಸುದ್ದಿಗೋಷ್ಠಿಯೊಂದರಲ್ಲಿ ನನ್ನ ಮಗಳಿಗೆ ಸೆಲೆಬ್ರಿಟಿ ಮಗಳು ಎಂದು ಗೌರವ ನೀಡುವುದು ಬೇಡ,ಏನಾದರೂ ಸಾಧನೆ ಮಾಡಿದರೆ ಗೌರವ ನೀಡಿ ಮತ್ತು ಸಾಧನೆ ಮಾಡಿದವರಿಗೆ ಗೌರವ ನೀಡಿ ಎಂದು ಹೇಳುವ ಮೂಲಕ ಸರಳತೆಯನ್ನು ಮೆರೆದಿದ್ದರು.
ಈ ರೀತಿಯಾದ ಗುಣದಿಂದಲೇ ಅನಿಸುತ್ತದೆ ದೇಶದ ಮೂಲೆ ಮೂಲೆಯಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವುದು.. ಇದೀಗ ಇಂತಹದೊಂದೇ ಮತ್ತೊಂದು ಸನ್ನಿವೇಶ ನಡೆದಿದ್ದು, ಯಶ್ ಅವರ ಮಾತಿನಿಂದ ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಕಂಡು ಬರುತ್ತದೆ.. ಮತ್ತು ಅವರು ಆಡಿರುವ ಮಾತು ಅಕ್ಷರಶಃ ನಿಜ ಎಂದು ಒಪ್ಪಿಕೊಳ್ಳಲೇ ಬೇಕು.
ಯಶ್ ಅವರು ಯಾವುದೋ ಒಂದು ಕಾರ್ಯಕ್ರಮವನ್ನು ಮುಗಿಸಿ ವಿಮಾನ ನಿಲ್ದಾಣದಲ್ಲಿ ನಡೆದು ಬರುತ್ತಿದ್ದರು.ಅವರನ್ನು ನೋಡಿದ ವಿಮಾನದ ಸಿಬ್ಬಂದಿಗಳು ಮತ್ತು ಸೈನಿಕರು ತಮ್ಮ ನೆಚ್ಚಿನ ನಟನನ್ನು ಮಾತನಾಡಿಸಬೇಕು ಮತ್ತು ಸೆಲ್ಫಿಯನ್ನು ತೆಗೆದುಕೊಳ್ಳಬೇಕು ಎಂದು ಅವರ ಬಳಿ ಓಡೋಡಿ ಬಂದರು.
ಸೈನಿಕರು ಅವರನ್ನು ಮಾತನಾಡಿಸಿ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಮುಂದಾದಾಗ, ಯಶ್ ಅವರು “ಸರ್ ನಾವು ನಿಮ್ಮ ಜೊತೆ ಸೆಲ್ಫಿ ಕೇಳಬೇಕು. ನಿವ್ ಇದ್ದರೆ ನಾವೆಲ್ಲಾ ಎಂದು ಹೇಳಿದ್ದಾರೆ. ಅಲ್ಲದೇ ಸೈನಿಕರ ಕುರಿತಾಗಿ ನೀವು ನಮ್ಮ ದೇಶದ ವೀರರು, ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳೋದು ನಮ್ಮ ಅದೃಷ್ಟ ಎಂದಿದ್ದಾರೆ”.
ನಿಮ್ಮ ಮುಂದೆ ನಾವ್ ಏನೂ ಅಲ್ಲ ಎಂದು ಹೊಗಳಿದ ಯಶ್ ಅವರು ಸೈನಿಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅನಂತರ ಅವರೊಂದಿಗೆ ಬಹಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಅಲ್ಲಿಂದ ಹೊರಡುವ ಮುನ್ನ ಯಶ್ ಅವರು ಸೈನಿಕರಿಗೆ ಸೆಲ್ಯೂಟ್ ಮಾಡಿದ್ದಾರೆ. ಸೈನಿಕರು ಕೂಡ ಯಶ್ ಅವರ ಸೆಲ್ಯೂಟ್ ಗೆ ಪ್ರತಿ ಸೆಲ್ಯೂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಯಶ್ ಅವರು ಸೈನಿಕರೊಂದಿಗೆ ತೆಗೆಸಿಕೊಂಡ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.