ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕೀಯದ ವ್ಯಕ್ತಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿರುವ ವ್ಯಕ್ತಿ. ತಮ್ಮ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ಎದುರಾಳಿಯನ್ನು ಗುಡುಗಿಸುವ ಸಿದ್ದರಾಮಯ್ಯನವರು ತಮ್ಮದೇ ವಿಶೇಷ ಮ್ಯಾನರಿಸಂನಿಂದಲೇ ಜನರನ್ನು ಸೆಳೆಯುವ ವ್ಯಕ್ತಿತ್ವ.
ಹಳ್ಳಿಯ ಭಾಷೆಯಲ್ಲಿ ಹೆಚ್ಚು ಮಾತನಾಡುವ ಸಿದ್ದರಾಮಯ್ಯನವರು ಇನ್ನು ಮುಂದೆ ಮೌನವಾಗಿ ಇರಲಿದ್ದಾರ.? ಎಂಬ ಪ್ರಶ್ನೆ ಎದುರಾಗಿದೆ. ಕಳೆದ ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರ ತಪಾಸಣೆಯ ನಂತರ ಅದು ಹೃದಯ ಸಂಬಂಧಿತ ಸಮಸ್ಯೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಕಾರಣ ಇನ್ನು ಆರು ತಿಂಗಳು ಕಾಲ ಏರು ಧ್ವನಿಯಲ್ಲಿ ಜೋರಾಗಿ ಮಾತನಾಡುವ ಹಾಗಿಲ್ಲ, ಭಾಷಣ ಮಾಡಬಾರದು ಎಂಬ ಸಲಹೆಯನ್ನು ವೈದ್ಯರು ನೀಡಿರುವುದು ತಿಳಿದುಬಂದಿದೆ.
ಸಾಮಾನ್ಯವಾಗಿ ಸಣ್ಣ ಧ್ವನಿಯಲ್ಲಿ ಮಾತನಾಡಬಹುದು ಆದರೆ, ಗಟ್ಟಿ ಧ್ವನಿಯಲ್ಲಿ ಇನ್ನೂ ಆರು ತಿಂಗಳ ಕಾಲ ಮೌನವಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಸಿದ್ದರಾಮಯ್ಯನವರು ಒತ್ತಡವನ್ನು ತೆಗೆದುಕೊಳ್ಳುವ ಆಗಿಲ್ಲ. ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಸಿದ್ದು ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಹೂಗುಚ್ಛ ಕೊಟ್ಟು ಆರೋಗ್ಯ ವಿಚಾರಿಸಿಕೊಂಡರು. ಇದರ ಮಧ್ಯೆಯೇ ಈಶ್ವರಪ್ಪ ಸಿದ್ದು ಅವರ ಕಾಲೆಳೆದು ಮಾತನಾಡಿಸಿ ಕೆಲ ಸಮಯ ನಗುವನ್ನು ಮೂಡಿಸಿದರು. ಸಿದ್ದರಾಮಯ್ಯ ಅವರ ಅನಾರೋಗ್ಯದ ಕುರಿತು ಮಾತನಾಡಿದ ಸಿಎಂ ಸಂಪೂರ್ಣ ಗುಣಮುಖರಾಗುವವರೆಗೆ ಇಲ್ಲೇ ಇದ್ದು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದರು.