ಕರ್ತವ್ಯದ ನಡುವೆಯೂ ದರ್ಶನ್‍ ಸುದೀಪ್‍ ಮಾಡಿದ್ದೇನು?

0
270

ಉತ್ತರ ಕರ್ನಾಟಕದಿಂದ ಪ್ರಾರಂಭವಾದ ಪ್ರವಾಹ ಮಲೆನಾಡು, ಕರಾವಳಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳನ್ನು ವ್ಯಾಪಿಸಿದೆ. ಭೀಕರ ಪ್ರವಾಹಕ್ಕೆ ಸಿಲುಕಿ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದ ನೆರೆ ಸಂತ್ರಸ್ತರ ನೆರವಿಗೆ ಇಡೀ ಕರ್ನಾಟಕವೇ ಸ್ಪಂದಿಸುತ್ತಿದೆ.

ನೆರೆ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಎಲ್ಲಾ ಮೂಲೆಗಳಿಂದಲೂ ಅಗತ್ಯವಾಗಿ ಬೇಕಾದ ಬೆಡ್‍ಶೀಟ್‍ಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಇದರ ನಡುವೆ ಟಾಪ್‍ ನಟರುಗಳಾದ ಸುದೀಪ್‍ ಮತ್ತು ದರ್ಶನ್‍ ಅವರಿಗೆ ಕೊಂಚ ಆಘಾತವಾಗಿದ್ದು, ಆದರೂ ಅವರ ಕಾರ್ಯ ಶ್ಲಾಘನೆಯನ್ನು ಪಡೆದುಕೊಂಡಿದೆ.

ರಾಜ್ಯದ ಬಹುತೇಕ ಪ್ರದೇಶ ನೆರೆಗೆ ತುತ್ತಾಗಿರುವುದರಿಂದ ರಾಜಕಾರಣಿಗಳು ಮಾತ್ರ ಕೆಲಸ ಮಾಡಬೇಕೆಂದು ಕೂತರೆ ಆಗುವುದಿಲ್ಲ. ಸಾಮಾನ್ಯ ಜನರೂ ತಮ್ಮ ಕೈ ಜೋಡಿಸುವ ಕೆಲಸ ಮಾಡಬೇಕಿದೆ. ಇದೇ ವೇಳೆ ಸ್ಯಾಂಡಲ್‍ವುಡ್‍ ನ ನಟರು ಕೂಡ ಕೋಟಿ ಕೋಟಿ ಹಣವನ್ನು ಸಹಾಯ ಮಾಡಿದ್ದಾರೆ. ಇದೇ ವೇಳೆಗೆ ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಅವರ ಕುರುಕ್ಷೇತ್ರ ಬಿಡುಗಡೆಯಾಗಿದ್ದರೂ ಕೂಡ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ, ತಮ್ಮ ಸ್ನೇಹಿತರನ್ನು ಸೇರಿಸಿಕೊಂಡು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದಾರೆ.

ಪ್ರಾಥಮಿಕವಾಗಿ ನಟ ದರ್ಶನ್‍ ಅವರು 5 ಕೋಟಿ ರೂಪಾಯಿ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದ್ದು, ಕುರುಕ್ಷೇತ್ರ ಚಿತ್ರದ ಕೆಲ ಲಾಭಾಂಶವನ್ನು ಕೂಡ ನೆರೆ ಸಂತ್ರಸ್ತರ ಸಹಾಯಕ್ಕೆ ನೀಡಲಾಗುತ್ತಿದೆ. ಪ್ರವಾಹ ಉಂಟಾದ ಪ್ರದೇಶಗಳಲ್ಲೂ ಸಾಕಷ್ಟು ಜನರು ಅಭಿಮಾನಿಗಳಿದ್ದು ಚಿತ್ರವನ್ನು ನೋಡಿ ಕಣ್ತುಂಬಿಕೊಳ್ಳಿ ಎಂದು ಹೇಗೆ ತಾನೆ ಹೇಳಲು ಸಾಧ್ಯ? ಚಿತ್ರವನ್ನು ಆಮೇಲಾದರೂ ನೋಡಿಕೊಳ್ಳಬಹುದು. ಮೊದಲು ನಮ್ಮ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಅಲ್ಲದೇ ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಡಿ ಬಾಸ್‍ ಮತ್ತು ಅವರ ತಂಡ.

ಇತ್ತ ಕಿಚ್ಚ ಸುದೀಪ್‍ ಅವರ ನಟನೆಯ ಪೈಲ್ವಾನ್‍ ಚಿತ್ರದ ಆಡಿಯೋ ಬಿಡುಗಡೆಯಾಗಬೇಕಿತ್ತು. ಇದಕ್ಕೆ ಬೆಂಬಲ ಸೂಚಿಸಿ ಪುನೀತ್‍ ರಾಜ್‍ಕುಮಾರ್‍ ಕೂಡ ಭಾಗವಹಿಸುತ್ತಿದ್ದರು. ಆದರೆ ನೆರೆ ಬಂದಿರುವುದರಿಂದ ಸುದೀಪ್‍ ಹೇಗೆ ತಾನೇ ಸಂಭ್ರಮಾರಣೆ ಮಾಡಲು ಸಾಧ್ಯ? ಮೊದಲು ಕಷ್ಟದಲ್ಲಿರುವವರನ್ನು ರಕ್ಷಿಸೋಣ. ಆ ನಂತರ ಆಡಿಯೋ ಲಾಂಚ್‍ ಕಾರ್ಯಕ್ರಮವನ್ನು ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಸುದೀಪ್ ಹಾಗೂ ಅವರ ಬಳಗ ಧಾವಿಸಿದೆ. ತಮಗಿರುವ ಸಂತಸದ ನಡುವೆಯೂ ಪ್ರವಾಹ ಪೀಡಿತರ ನೆರವಿಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here