ಗಿಲ್ಲಿ ಹಾಗೂ ಭಜ್ಜಿಯ ಜಗಳಕ್ಕೆ ಕಾರಣವೇನು?

0
830

ಭಾರತೀಯರ ಭಾವನೆಯಲ್ಲಿ ಬೆರೆತಿರುವಂತಹ ಕ್ರೀಡೆ-ಕ್ರಿಕೆಟ್. ಭಾರತ ತಂಡ ಗೆಲುವು ಸಾಧಿಸಿದರೆ ಸಾಕು ಅಭಿಮಾನಿಗಳಲ್ಲಿ ಹರುಷ ಮುಗಿಲು ಮುಟ್ಟಿರುತ್ತದೆ. ಸದ್ಯ ಭಾರತ ತಂಡ ಬ್ಯಾಂಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಬಲಿಷ್ಟವಾಗಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳು ಬರೆಯುತ್ತ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ.ಇನ್ನು ವಿಶ್ವದ ಬ್ಯಾಂಟಿಂಗ್ Rankingನಲ್ಲಿ ಕೊಹ್ಲಿ ಅವರಿಗೆ ಅಗ್ರ ಸ್ಥಾನ.

ಇತ್ತೀಚೆಗೆ ಕೆರೆಬಿಯನ್ ಪ್ರವಾಸದಲ್ಲಿದ್ದ ಭಾರತ ತಂಡ ತವರು ನೆಲದಲ್ಲೇ ವೆಸ್ಟ್ ಇಂಡೀಸ್ ಪಡೆಯನ್ನು ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಮಾಡಿದೆ. ಬ್ಯಾಂಟಿಂಗ್ ಹಾಗೂ ಬೌಲಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿರುವ ಭಾರತ ತಂಡ,ಇಶಾಂತ್ ಶರ್ಮ,ಜಸ್ಪ್ರೀತ್ ಬುಮ್ರಾ,ಮೊಹಮ್ಮದ್ ಶಮಿ ಅವರ ಮಾರಕ ದಾಳಿಗೆ ಕೆರಿಬಿಯನ್ನರು ತಮ್ಮ ತವರು ನೆಲದಲ್ಲೇ ಸೋಲನ್ನು ಅನುಭವಿಸಿದರು. ಇನ್ನು ವಿಶ್ವದ ನಂಬರ್ ಒನ್ ಬೌಲರ್,ಮುಂಬೈ ಎಕ್ಸ್ ಪ್ರೆಸ್ ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಳ್ಳುವ ಸಾಧನೆ ಮಾಡಿದ್ದಾರೆ.

ಇದರ ಮಧ್ಯೆ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಅಡಮ್ ಗಿಲ್‍ಕ್ರಿಸ್ಟ್ ಮಧ್ಯೆ ಟ್ವಿಟರ್ ವಾರ್ ಶುರುವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಜ್ಜಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ವೀಡಿಯೋವೊಂದನ್ನು ಗಿಲ್‍ಕ್ರಿಸ್ಟ್ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ ಅಲ್ಲದೇ ಆ ವೀಡಿಯೋಗೆ ನೋ ಡಿಆರ್‍ಎಸ್ ಅಂತ ಕ್ಯಾಪ್ಶನ್ ಕೊಟ್ಟಿದ್ದಾರೆ ಜೊತೆಗೆ ಅಳುವ ಎಮೋಜಿಯನ್ನೂ ಹಾಕಿ ಪೋಸ್ಟ್ ಮಾಡಿದ್ದಾರೆ.

ವಿಷಯವೇನೆಂದರೆ 2001 ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಪಂದ್ಯ ನಡೆದಿತ್ತು. ಇನ್ನು ಈ ಪಂದ್ಯದಲ್ಲಿ ಭಾರತದ ಹಾಫ್ ಸ್ಪಿನ್ನರ್, ಟರ್‍ಬೊನೇಟರ್ ಹರ್ಭಜನ್ ಸಿಂಗ್ ಅವರು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.ಅಲ್ಲದೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬುವ ಹೆಗ್ಗಳಿಕೆಗೆ ಭಜ್ಜಿ ಪಾತ್ರರಾದರು. ಅಂದಿನ ಪಂದ್ಯದಲ್ಲಿ ಭಜ್ಜಿ,ರಿಕಿ ಪಾಂಟಿಂಗ್,ಶೇನ್ ವಾರ್ನ್,ಆಡಮ್ ಗಿಲ್‍ಕ್ರಿಸ್ಟ್ ಅವರ ವಿಕೆಟ್ ಕಬಳಿಸಿದ್ದರು. ಇದರಲ್ಲಿ ಮೊದಲು ಪಾಂಟಿಂಗ್ ಎಲ್‍ಬಿಡಬ್ಲೂ ಗೆ ಔಟ್ ಆದರೆ, ಗಿಲ್‍ಕ್ರಿಸ್ಟ್ ಅವರು ಸಹಿತ ಎಲ್‍ಬಿಡಬ್ಲೂ ಗೆ ಬಲಿಯಾಗಿದ್ದರು. ರಿಪ್ಲೆ ನೋಡಿದಾಗ ಗಿಲ್‍ಕ್ರಿಸ್ಟ್ ಅವರ ಬ್ಯಾಟಿಗೆ ಮೊದಲು ಚೆಂಡು ತಾಕಿದ್ದು ಗೊತ್ತಾಗಿತ್ತು. ಆದುದರಿಂದ ಗಿಲ್ಲಿ ಈ ವೀಡಿಯೋ ಶೇರ್ ಮಾಡಿ ಅಂದು ಡಿಆರ್‍ಎಸ್ ಇರಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದಕ್ಕೆ ಭಜ್ಜಿ ತಮ್ಮ ಮಾತಿನಿಂದಲೇ ಗೂಗ್ಲಿ ಬಿಟ್ಟಿದ್ದಾರೆ. ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿರುವ ಭಜ್ಜಿ ನೀನು ಮೊದಲ ಬಾಲ್‍ನಲ್ಲಿ ಔಟ್ ಆಗದಿದ್ದರೆ,ಇನ್ನು ಹೆಚ್ಚೊತ್ತು ಕ್ರೀಸ್‍ನಲ್ಲಿ ಇರುತ್ತಿದ್ದೆ ಅಂದುಕೊಂಡಿದ್ದಿಯಾ? ಗೆಳೆಯಾ,ಇದನೆಲ್ಲಾ ಹಾಕಿ ಅಳೋದನ್ನು ನಿಲ್ಲಿಸು. ನಿನ್ನ ಆಡುವ ದಿನಗಳು ಮುಗಿದ ಮೇಲಾದರೂ ನಿನ್ನ ಮಾತಿನ ಮೇಲೆ ಗಮನ ಹರಸಿ ಮಾತಾನಾಡುತ್ತಿಯಾ ಅಂದುಕೊಂಡಿದ್ದೆ. ಆದರೆ ಕೆಲವು ಸಂಗತಿಗಳು ಬದಲಾಗುವುದಿಲ್ಲ.ಆದಕ್ಕೆ ಬೆಸ್ಟ್ ಎಕ್ಸಾಂಪಲ್ ನೀನೇ,ಯಾವಾಗಲೂ ಅಳೋದೆ ಆಯ್ತು ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here