ಮಕ್ಕಳಿಗೆ ಎಣ್ಣೆ ಮಸಾಜ್ ಮಾಡುವುದರಿಂದಾಗುವ ಲಾಭಗಳೇನು..?!

0
420

ಸಾಮಾನ್ಯವಾಗಿ ಮಕ್ಕಳಿಗೆ ಹಳ್ಳಿಗಳಲ್ಲಿ ಪ್ರತಿನಿತ್ಯ ಎಣ್ಣೆಯಿಂದ ಮಜಾಜ್ ಮಾಡುತ್ತಾರೆ. ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುತ್ತಾರೆ. ಈ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿದೆ. ಆಧುನಿಕ ಜಗತ್ತಿನಲ್ಲಿ ಈ ರೀತಿಯ ಪದ್ದತಿಗಳು ನಶಿಸಿ ಹೋಗುತ್ತಿವೆ. ಆದರೆ ಮಗುವಿಗೆ ಎಣ್ಣೆ ಮಸಾಜ್‍ನಿಂದ ಎಷ್ಟೊಂದು ಲಾಭವಿದೆ ಗೊತ್ತಾ.

ಬಾಂಧವ್ಯ ಗಟ್ಟಿಯಾಗುತ್ತದೆ
ಚಿಕ್ಕವರಿದ್ದಾಗ ನಮಗೆ ಎಣ್ಣೆ ಮಸಾಜ್ ಮಾಡಿದ ಕೈಗಳನ್ನು ನಾವು ದೊಡ್ಡವರಾದ ಮೇಲೂ ಮರೆಯಲ್ಲ. ಅದೊಂಥರಾ ಭಾವನಾತ್ಮಕ ನಂಟು ಬೆಳೆಯುತ್ತದೆ. ಅಮ್ಮನ ಬೆಚ್ಚಗಿನ ಕೈಯಿಂದ ಮಸಾಜ್ ಮಾಡುತ್ತಿದ್ದರೆ, ಮಗುವಿಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ.

ಜೀರ್ಣಕ್ರಿಯೆ
ಒಂದು ನಿರ್ದಿಷ್ಟ ಕ್ರಮದಲ್ಲಿ ಮಸಾಜ್ ಮಾಡುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗುವುದಲ್ಲದೆ, ಜೀರ್ಣಕ್ರಿಯೆಯೂ ಸುಗಮವಾಗುತ್ತದೆ.

ನಿದ್ರೆ
ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ. ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ. ಹಾಗಾಗಿ ಸುಖ ನಿದ್ರೆ ಅವರ ಆರೋಗ್ಯದ ಗುಟ್ಟು.

ಉತ್ತಮ ಮೈಕಟ್ಟು
ಸಾಮಾನ್ಯವಾಗಿ ಎಣ್ಣೆಯಿಂದ ಸ್ನಾನ ಮಾಡಿಸಿದರೆ, ಮಕ್ಕಳು ಸದೃಡವಾಗಿ ಬೆಳೆಯುತ್ತಾರೆ. ಕೈ-ಕಾಲು ಸೇರಿದಂತೆ ದೇಹದ ಎಲ್ಲ ಭಾಗಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತವೆ.

ಮಾನಸಿಕ ಸ್ಥಿರತೆ
ಮಕ್ಕಳಿಗೆ ಎಣ್ಣೆಯಿಂದ ಸ್ನಾನ ಮಾಡಿಸುವುದರಿಂದ ಮಕ್ಕಳು ಮಾನಸಿಕ ಸ್ಥಿರತೆಯನ್ನು ಹೊಂದುತ್ತಾರೆ. ಮಾಸಾಜ್‍ನಿಂದ ಹಿತಕರ ಅನುಭವ ಮಕ್ಕಳನ್ನು ಮಾನಸಿಕವಾಗಿಯೂ ಸದೃಡರನ್ನಾಗಿ ಮಾಡುತ್ತವೆ.

LEAVE A REPLY

Please enter your comment!
Please enter your name here