ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿ ವಾರ್ ಗಳು ನಡೆಯುತ್ತಲೇ ಇವೆ. ಸಮಾಜದಲ್ಲಿ ಆಗುವ ಹಾಗು- ಹೋಗುಗಳನ್ನು ಕುರಿತು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡುತ್ತಿರುತ್ತಾರೆ.. ಸಾಮಾಜಿಕ ಜಾಲತಾಣದ ಶೆಕ್ತಿಯೇ ಹಾಗೆ, ಪ್ರಪಂಚದಲ್ಲಿ ನಡೆಯುವ ಅಂಕು – ಡೊಂಕುಗಳು ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹರಡುತ್ತವೆ!
ಈಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಾಗೂ ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ರವರ ಟ್ವಿಟ್ಟರ್ ವಾರ್ ಜೋರಾಗಿಯೇ ನಡೆದಿದೆ..
ಅಲ್ಲದೆ ಗಂಭೀರ್, ಪಿಒಕೆ (ಪಾಕ್ ಆಕ್ಯುಪೈಡ್ ಕಾಶ್ಮೀರ್) ಬಗ್ಗೆ ಅಫ್ರಿದಿಗೆ ಎಚ್ಚರಿಕೆ ನೀಡಿದ್ದಾರೆ ..
ಇನ್ನು ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ವಿಶೇಷ ಪ್ರಾಧಿಕಾರ ನೀಡುವ ಸಂವಿಧಾನದ ಕಲಂ 370,35 ಎ ಅನ್ನು ರದ್ದುಗೊಳಿಸಿದೆ ಇನ್ನು ಭಾರತ ಸರ್ಕಾರದ ಈ ನಿರ್ಧಾರವನ್ನು ಕುರಿತು ಅಫ್ರಿದಿ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ !
“ಕಾಶ್ಮೀರಕ್ಕೆ ಅದರ ಹಕ್ಕು ಸಿಗಬೇಕು,ಅಪ್ರಚೋದಿತ ಆಕ್ರಮಣಶೀಲತೆ ಅಪರಾಧಗಳು ಕಾಶ್ಮೀರದಲ್ಲಿ ಹೆಚ್ಚಾಗುತ್ತಿವೆ” ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ ! ಇಷ್ಟು ಮಾತ್ರವಲ್ಲದೆ “ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆ ಕಣ್ಣು ಮುಚ್ಚಿಕೊಂಡು ಕುಳಿತಿದೆ, ಕಾಶ್ಮೀರದಲ್ಲಿ ಮಾನವೀಯತೆಯ ಮೇಲೆ ದಾಳಿ ಆಗುತ್ತಿದೆ.ಅಮೆರಿಕ ಅಧ್ಯಕ್ಷರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು” ಎಂದು ಅಫ್ರಿದಿ ಹೇಳಿದ್ದಾರೆ ..
ಇನ್ನು ಅಫ್ರಿದಿಯ ಒತ್ತಾಯದ ಟ್ವಿಟ್ಟರ್ ಗೆ ಗಂಭೀರ್ ಪ್ರತಿಕ್ರಿಯಿಸಿದ್ದಾರೆ !
“ಮಾನವೀಯತೆಯ ಪ್ರಚೋದಿತ ಆಕ್ರಮಣಶೀಲತೆ ಮತ್ತು ಅಪರಾಧಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಾಗುತ್ತಿವೆಯೇ ಹೊರತು ಕಾಶ್ಮೀರದಲ್ಲಲ್ಲ “, ಹಾಗೆಯೇ ‘ಚಿಂತೆ ಬೇಡ ಮಗ ಪಾಕ್ ಆಕ್ರಮಿತ ಕಾಶ್ಮೀರದ ವಿಷಯವನ್ನು ಆದಷ್ಟು ಬೇಗ ಪರಿಹರಿಸುತ್ತೇವೆ’ ಎಂದು ಗಂಭೀರ್ ,ಗಂಭೀರವಾಗಿ ಟಾಂಗ್ ನೀಡಿದ್ದಾರೆ !
ಇದೇನು ಮೊದಲ ಬಾರಿ ಏನಲ್ಲ! ಈ ಹಿಂದೆಯೂ ಗಂಭೀರ್ ಮತ್ತು ಅಫ್ರಿದಿ ಕಾಶ್ಮೀರದ ವಿಷಯದಲ್ಲಿ ಜೋರಾಗಿಯೇ ಟ್ವಿಟ್ಟರ್ ಮೂಲಕ ಜಗಳವಾಡಿದ್ದರು