ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೆಂಡತಿಯನ್ನೇ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದು, ಆ ಬಳಿಕ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ ಗಂಡನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. 36 ವರ್ಷದ ಮಾಜಿ ಬ್ಯಾಂಕ್ ಮ್ಯಾನೇಜರ್ ಅಮಿತೇಶ್ ಪಟೇರಿಯಾ ಬಂಧಿತ ವ್ಯಕ್ತಿ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಡಿಸೆಂಬರ್ 1 ರಂದು ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆಗೈದಿದ್ದನು, ಇದಕ್ಕೆ ಕುಟುಂಬದ ಇತರ ಸದಸ್ಯರು ಕೂಡ ಕೈಜೋಡಿಸಿದ್ದರು. ಆ ಬಳಿಕ ಇಕ್ಕಳದಿಂದ ದೇಹದ ಮೇಲೆ ಹಾವು ಕಚ್ಚಿದಂತಹ ಗುರುತು ಮಾಡಿ ಆ ಬಳಿಕ ಹಾವಿನ ಕಡಿತದಿಂದ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ್ದನು.
ಹತ್ಯೆಗೈಯಲು ಸ್ಪೂರ್ತಿಯಾದ ಧಾರವಾಹಿ:
ಹೆಂಡತಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಬಳಿಕ ಅದನ್ನು ಮರೆಮಾಚಲು ಇಕ್ಕಳದಿಂದ ಎಡ ಕೈಗಳ ಮೇಲೆ ಹಾವಿನ ಕಡಿತದಂತೆ ಗುರುತು ಮಾಡಿದ್ದಾನೆ. ಧಾರವಾಹಿಯೊಂದರಲ್ಲಿ ತಾನು ಈ ದೃಶ್ಯವನ್ನು ನೋಡಿದಾಗಿ ತಪ್ಪೊಪ್ಪಿಕೊಂಡಿದ್ಧಾನೆ. ಆದರೇ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಆಕೆ ಉಸಿರುಗಟ್ಟಿಸಿ ಸಾವನ್ನಪ್ಪಿದ್ದು ಪೊಲಸರಿಗೆ ಸ್ಪಷ್ಟವಾಗಿದೆ. ತದನಂತರದ ತನಿಖೆಯ ವೇಳೆ ಗಂಡ ಅಮಿತೇಶ್ ಮೇಲೆ ಬಲವಾದ ಅನುಮಾನವುಂಟಾಗಿ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಹತ್ಯೆಯ ಭಾಗವಾಗಿ ರಾಜಸ್ಥಾನದಿಂದ ಕಾಳಿಂಗ ಸರ್ಪವನ್ನು ಖರೀದಿಸಿದ್ದು, ಹೆಂಡತಿಯನ್ನು ಹತ್ಯೆಗೈದ ಬಳಿಕ ಸಮೀಪವೇ ಹಾವನ್ನು ಹರಿಯಬಿಟ್ಟಿದ್ದಾನೆ. ಆ ಬಳಿಕ ಹಾವನ್ನು ಕೂಡ ಕೊಂದಿದ್ದ. ಸಾಕಷ್ಟು ಸಾಕ್ಷ್ಯಾಧಾರ ಸಂಗ್ರಹದ ಬಳಿಕ ಪೊಲೀಸರು ಅಮೀತೇಶ್ ಪಟೇರಿಯಾ ಮತ್ತು ಆತನಿಗೆ ಸಹಾಯ ಮಾಡಿದ ಕುಟುಂಬದ ಕೆಲ ವ್ಯಕ್ತಿಗಳನ್ನು ಬಂಧಿಸಿದ್ದಾರೆ.