ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಎಂಬುದು ವ್ಯಾಪಾರದ ಮೂಲವಾಗಿದೆ. ಹಣಕ್ಕಾಗಿ ನಕಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ದೇಶದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅದರಲ್ಲೂ ಉನ್ನತ ಶಿಕ್ಷಣದ ಆಸೆ ತೋರಿಸಿ, ಅನೇಕರನ್ನು ಮೋಸ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಗೆ ಮಾನ್ಯತೆ ಇದೆ ಎಂದು ನಂಬಿಕೆ ಲಕ್ಷಾಂತರ ರೂ. ಫೀಸ್ ತೆಗೆದುಕೊಳ್ಳುತ್ತಿರುವ ಅನೇಕ ಸಂಸ್ಥೆಗಳಿಗೆ ಮಾನ್ಯತೆಯೇ ಇಲ್ಲ. ಇದರಿಂದಲೇ ನಕಲಿ ಯೂನಿವರ್ಸಿಟಿಗಳು ಹುಟ್ಟಿಕೊಳ್ತಿವೆ. ನಕಲಿ ಮಾಕ್ರ್ಸ್ ಕಾರ್ಡ್ಗಳೂ ಸಿಗ್ತಿವೆ.
ಇದೀಗ ಭಾರತದಲ್ಲಿರುವ ನಕಲಿ ವಿವಿಗಳ ಪಟ್ಟಿಯನ್ನ ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಬಿಡುಗಡೆ ಮಾಡಿದೆ. ಯುಜಿಸಿ ನೀಡಿರುವ ಪಟ್ಟಿ ಪ್ರಕಾರ ಸದ್ಯ ಭಾರತದಲ್ಲಿ 23 ನಕಲಿ ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಉತ್ತರಪ್ರದೇಶದಲ್ಲಿ 7 ನಕಲಿ ವಿವಿಗಳಿವೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿದ್ದು, ತಲಾ ಎರಡೆರಡು ನಕಲಿ ವಿವಿಗಳಿವೆ. ಇನ್ನೂ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪುದುಚೇರಿ ತಲಾ ಒಂದೊಂದು ನಕಲಿ ವಿಶ್ವವಿದ್ಯಾಲಯಗಳನ್ನ ಹೊಂದಿವೆ ಅಂತ ಯುಜಿಸಿ ಹೇಳಿದೆ.