2ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ ಜೋಡಿ.!

0
134

ತಾರಾ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿರುಷ್ಕಾ ಜೋಡಿ ಇಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷಗಳಾಗಿದೆ. ಈ ಸಂಭ್ರಮ, ಸಂತಸದಲ್ಲಿರುವ ವಿರುಷ್ಕಾ ಜೋಡಿ ಸುಂದರವಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪರಸ್ಪರ ಪ್ರೀತಿಯಿಂದ ಶುಭಕೋರಿದ್ದಾರೆ.

 

ಇಬ್ಬರು ಇನ್ ಸ್ಟಾಗ್ರಾಂ ನಲ್ಲಿ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿದೆ. ಇವರಿಬ್ಬರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅನುಷ್ಕಾ ಮದುವೆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವೊಂದನ್ನು ಶೇರ್ ಮಾಡಿ, ಫ್ರಾನ್ಸ್​ನ ಪ್ರಖ್ಯಾತ ಕವಿ ವಿಕ್ಟರ್​ ಹುಗೋ ಅವರ ‘ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ದೇವರ ಮುಖವನ್ನು ನೋಡಿದಂತೆ’ ಎಂಬ ಸಾಲುಗಳನ್ನು ವಿರಾಟ್​ ಕೊಹ್ಲಿಗೆ ಸಮರ್ಪಿಸಿದ್ದಾರೆ.

 

ಇದರೊಂದಿಗೆ ಪ್ರೀತಿ ಎಂಬುದು ಕೇವಲ ಭಾವನೆ ಮಾತ್ರವಲ್ಲ. ಅದಕ್ಕಿಂತ ದೊಡ್ಡದಾದದ್ದು. ಪ್ರೀತಿಯೊಂದು ಮಾರ್ಗದರ್ಶಿ, ಉತ್ತೇಜಕ ಮತ್ತು ಸತ್ಯದೆಡಗಿನ ನಿಜವಾದ ದಾರಿ. ಅದನ್ನು ಹುಡುಕಿಕೊಳ್ಳಲು ನನಗೆ ದೇವರು ಸಂಪೂರ್ಣ ಆಶೀರ್ವದಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಪ್ರೀತಿಯ ಪತ್ನಿ ಅನುಷ್ಕಾರ ಹಣೆಗೆ ಚುಂಬಿಸುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿ, ವಾಸ್ತವವಾಗಿ ಪ್ರೀತಿಯೊಂದೆ ಇರುವುದು. ಅದು ಬಿಟ್ಟು ಬೇರೆನೂ ಇಲ್ಲ.

 

ಪ್ರತಿದಿನ ಪ್ರೀತಿಯ ಅರಿವು ಮೂಡಿಸುವವರೊಟ್ಟಿಗೆ ದೇವರು ನಿಮಗೆ ಆಶೀರ್ವದಿಸಿದಾಗ ನೀವು ಅವನಿಗೆ ಕೃತಜ್ಞತಾ ಭಾವವನ್ನು ಹೊಂದಿರಬೇಕು ಎಂದು ಕೊಹ್ಲಿ ಭಾವಾನಾತ್ಮಕವಾಗಿ ಬರೆದುಕೊಂಡಿದ್ದಾರೆ. ವಿರುಷ್ಕಾ ಜೋಡಿ 2017ರ ಡಿಸೆಂಬರ್​ 11ರಂದು ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು. ಸದ್ಯ ವಿರಾಟ್​ ಕೊಹ್ಲಿ ವೆಸ್ಟ್​ಇಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here