ಬಯಲಾಯ್ತು ವಿನೋದ್ ರಾಜ್ ಮ್ಯಾರೆಜ್ ಸೀಕ್ರೇಟ್ : ಮದುವೆ ಯಾಕೆ ಆಗಿಲ್ಲ ಗೊತ್ತಾ?

0
1555

ವಿನೋದ್ ರಾಜ್, ಕನ್ನಡ ಚಿತ್ರರಂಗ ಕಂಡ ಅಭಿನಯ ಚತುರ ಮತ್ತು ಡ್ಯಾನ್ಸ್ ಕಿಂಗ್! ಅವರ ವ್ಯಕ್ತಿತ್ವ ಮತ್ತು ನಡುವಳಿಕೆಗೆ ಚಿತ್ರರಂಗದವರು ಮತ್ತು ಅಭಿಮಾನಿಗಳು ಮಾರು ಹೋಗಿದ್ದಾರೆ. ಖ್ಯಾತ ನಟಿ ಲೀಲಾವತಿ ಅಮ್ಮನವರ ಏಕೈಕ ಪುತ್ರರಾದ ಇವರು, ತನ್ನ ಅಮ್ಮನಂತೆಯೇ ಒಳ್ಳೆಯ ಮನಸ್ಸನ್ನು ಹೊಂದಿದ್ದಾರೆ. 1987 ರಲ್ಲಿ ದ್ವಾರಕೀಶ್ ನಿರ್ಮಾಣದ  ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು, ತನ್ನ ನೃತ್ಯದ ಮೂಲಕ ಡ್ಯಾನ್ಸ್ ಕಿಂಗ್ ಎಂದೇ ಹೆಸರುವಾಸಿಯಾಗಿದ್ದಾರೆ.

 

 

ನಟ ವಿನೋದ್ ರಾಜ್ ಅವರು ರೆಬಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ರಮೇಶ್ ಅರವಿಂದ್, ಶ್ರೀನಿವಾಸ್ ಮೂರ್ತಿ ಅವರ ಜೊತೆ ಅಭಿನಯಿಸುವುದಲ್ಲದೇ, ಕೃಷ್ಣ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾ ಭಾರತ, ಸ್ನೇಹಲೋಕ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ಅವರನ್ನು  ಕನ್ನಡದ ಮೈಕಲ್ ಜಾಕ್ಸನ್ ಎಂದೇ ಕರೆಯಲಾಗುತ್ತಿತ್ತು.

 

 

ವಿನೋದ್ ರಾಜ್ ಅವರು ಮಾಡಿದ್ದು, ಕೇವಲ ಕೆಲವೇ ಕೆಲವು ಸಿನಿಮಾಗಳಾಗಿದ್ದರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಈ ಅಭಿನಯ ಚತುರ, ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದು, ತನ್ನ ತಾಯಿಯ ಜೊತೆ ತೋಟವೊಂದನ್ನು ಮಾಡಿ ಖುಷಿಯಿಂದ ಜೀವನ ಸಾಗಿಸುತ್ತಿದ್ದರೆ. ಹೀಗೆ ಒಂದು ಕಾಲದಲ್ಲಿ ಡ್ಯಾನ್ಸ್ ಕಿಂಗ್ ಎಂದೇ ಹೆಸರುವಾಸಿಯಾಗಿದ್ದ ನಟ ವಿನೋದ್ ರಾಜ್ ಅವರು ಇಂದಿಗೂ ಕೂಡ ವಿವಾಹವಾಗಿಲ್ಲ. ಅದೆಷ್ಟೋ ಅಭಿನಿಮಾನಿಗಳಿಗೆ ಇವರು ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಕಾಡುತ್ತಲೇ ಇದ್ದು, ಇದೀಗ ಇದಕ್ಕೆ ತೆರೆಬಿದ್ದಿದ್ದೆ. ವಿನೋದ್ ರಾಜ್ ಅವರು ಯಾಕೆ ತಾನು ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

 

 

ಇತ್ತೀಚಿಗೆ ನಟ ವಿನೋದ್ ರಾಜ್ ಅವರು ತಮ್ಮ ಆಪ್ತರ ಬಳಿ ಈ ವಿಚಾರವನ್ನು ಪ್ರಸ್ಥಾಪಿಸಿದ್ದು, ತಾನು ಯಾಕೆ ವಿವಾಹವಾಗಿಲ್ಲ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಈ ಮಾತುಗಳನ್ನು ಕೇಳಿದರೆ, ಇವರೆಂತಹ ಹೃದಯವಂತರು ಎಂಬುದು ಗೊತ್ತಾಗುತ್ತದೆ. ಹೌದು, ವಿನೋದ್ ರಾಜ್ ಅವರ ಪ್ರಕಾರ ತನ್ನ ತಾಯಿಯನ್ನು ತನಗಿಂತ ಚೆನ್ನಾಗಿ ನೋಡಿಕೊಳ್ಳುವವರು ಈ ಪ್ರಪಂಚದಲ್ಲಿ ಮತ್ಯಾರು ಇರಲು ಸಾಧ್ಯವಿಲ್ಲ! ತನಗೆ ಮಡದಿಯಾಗಿ ಬರುವವಳು ಹೇಗೆ ಇರುತ್ತಾಳೋ ಎಂಬುದು ಗೊತ್ತಿಲ್ಲ. ಆದುದರಿಂದ ಬದುಕಿರುವವರೆಗೂ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂಬುದು ವಿನೋದ್ ರಾಜ್ ಅವರ ಇಚ್ಛೆಯಂತೆ.

 

 

ನಿಜಕ್ಕೂ ಈ ರೀತಿಯಾದಂತಹ ಹೃದಯವಂತಿಕೆಯ ನಟರು ಸಿಗುವುದು ತುಂಬಾ ಅಪರೂಪ. ಪತ್ನಿ ಬಂದ ಮೇಲೆ ತನ್ನ ತಾಯಿಯನ್ನು ದೂರ ಮಾಡುವ ನಟರು ಇರುವ ಈ ಸಮಾಜದಲ್ಲಿ, ತನ್ನ ತಾಯಿಗೋಸ್ಕರ ವೈವಾಹಿಕ ಜೀವನವನ್ನೇ ತ್ಯಜಿಸಿದ ವಿನೋದ್ ರಾಜ್ ಅವರನ್ನು ನೋಡಿದ್ರೆ ಹೆಮ್ಮೆ ಅನಿಸುತ್ತದೆ ಅಲ್ಲವೇ.?
ಕೋಟಿ ಜನ್ಮ ಪಡೆದು ಹುಟ್ಟಿ ಬಂದರು ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. 9 ತಿಂಗಳುಗಳ ಕಾಲ ನೋವನ್ನು ಅನುಭವಿಸಿ ನಮ್ಮನ್ನು ಹೆತ್ತು-ಹೊತ್ತು ಲೋಕ ಜ್ಞಾನವನ್ನು ತಿಳಿಸಿ, ನಮ್ಮ ಖುಷಿಯಲ್ಲಿ ಅವಳ ನೋವನ್ನು ಮರೆಯುವ ತಾಯಿಯ ಸೇವೆ ಮಾಡುವುದು ನಮ್ಮ ಪುಣ್ಯ.. ಈ ಪುಣ್ಯದ ಕೆಲಸವನ್ನು ವಿನೋದ್ ರಾಜ್ ಅವರು ಮಾಡುತ್ತಿದ್ದಾರೆ.

 

 

ಸುಮಾರು 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಕನ್ನಡ ಚಿತ್ರರಂಗಕ್ಕೆ ಅಪಾರ ಗೌರವವನ್ನು ತಂದು ಕೊಟ್ಟ ನಟಿ ಲೀಲಾವತಿ ಅಮ್ಮನವರು! ನಿಜ ಜೀವನದಲ್ಲಿ ಕಣ್ಣೀರಿಂದ ಕೈ ತೋಳೆಯುತ್ತಿದ್ದರು. ಅವರ ನೋವನ್ನು ಅಳಿಸಲು ಬಂದಿದ್ದೆ ಅವರ ಮಗ, ಮಗನನ್ನು ನೋಡುತ್ತಾ ತನ್ನ ನೋವನ್ನು ಮರೆಯುತ್ತಿದ್ದ ಲೀಲಾವತಿ ಅಮ್ಮನವರು, ತನ್ನ ಮಗನನ್ನು ವಿಧ್ಯಾವಂತ ಮತ್ತು ಉತ್ತಮ ನಟರನ್ನಾಗಿ ಮಾಡಲು ಶ್ರಮಿಸಿದ್ದಾರೆ. ಅಂತೆಯೇ ವಿನೋದ್ ರಾಜ್ ಅವರು ತನ್ನ ತಾಯಿಯ ಕಷ್ಟದ ದಿನಗಳನ್ನು ನೋಡಿ ಬೆಳೆದವರು.
ಆದುದರಿಂದ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಬಿಟ್ಟರೆ ಮತ್ಯಾವ ಲೋಕದ ಖುಷಿಯೂ ಅವರಿಗೆ ಬೇಡ. ಈ ತಾಯಿ ಮತ್ತು ಮಗನ ಸಂಬಂಧವನ್ನು ಕುರಿತು ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಮುಖಾಂತರ ತಿಳಿಸಬಹುದು.

LEAVE A REPLY

Please enter your comment!
Please enter your name here