ಸಾವಿರ ಕೋಟಿಯ ಒಡೆಯ ಬೀದಿಗೆ ಬಿದ್ದಿರುವ ರೋಚಕ ಕಥೆ.!

0
2379

ವರುಷನುವರುಷ ಕಷ್ಟಪಟ್ಟು ಬೆವರು ಸುರಿಸಿ ಕಠಿಣ ಪರಿಶ್ರಮದಿಂದ ವಿಶ್ವವೇ ಗುರುತಿಸುವ ಉದ್ಯಮಿಯಾಗಿ, ಭಾರತದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿ ಮೆರೆದು ಈಗ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಬೀದಿಗೆ ಬಿದ್ದಿದ್ದಾರೆ.

 

 

ಹೌದು, ಅವರೇ ವಿಜಯಪತ್ ಸಿಂಘಾನಿಯಾ.! ರೇಮೆಂಡ್ ಬಟ್ಟೆಗಳನ್ನು ಸ್ಥಾಪಿಸಿ, ರೇಮಂಡ್ ಗ್ರೂಪ್ ಆಫ್ ಬಟ್ಟೆ ಮತ್ತು ಜವಳಿಗಳ ಅಧ್ಯಕ್ಷರಾಗಿ, ಬಟ್ಟೆಗಳಲ್ಲು ಸಾವಿರಾರು ಕೋಟಿಗಳನ್ನು ದುಡಿಯಬಹುದು ಎಂದು ತೋರಿಸುಕೊಟ್ಟವರು. ಅಲ್ಲದೇ ತಮ 67 ನೇ ವಯಸ್ಸಿನಲ್ಲಿ highest altitude gained travelling in a hot air balloon ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 5,000 ಗಂಟೆಗಳ ಹಾರಾಟದ ಅನುಭವವಿರುವ ಅವರಿಗೆ 1998 ರಿಂದ ಯುಕೆಯಿಂದ ಭಾರತಕ್ಕೆ ತನ್ನ ಏಕವ್ಯಕ್ತಿ ಮೈಕ್ರೊಲೈಟ್ ಹಾರಾಟದ ಬಗ್ಗೆ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

 

 

1994 ರಲ್ಲಿ, ಅವರು ಫೆಡರೇಶನ್ ಏರೋನಾಟಿಕ್ ಇಂಟರ್ನ್ಯಾಷನಲ್ ಏರ್ ರೇಸ್ನಲ್ಲಿ ಚಿನ್ನದ ಪದಕವನ್ನು ಗೆದ್ದರು, ಇದು 24 ದಿನಗಳ ಅವಧಿಯಲ್ಲಿ 34,000 ಕಿ.ಮೀ ಪ್ರಯಣವಾಗಿತ್ತು. ಈ ಸಂದರ್ಭವನ್ನು ಗುರುತಿಸಿ ಅವರಿಗೆ ಗೌರವ ಹುದ್ದೆ ನೀಡಲಾಯಿತು. 2005 ರಲ್ಲಿ ಗೋಲ್ಡ್ ಮೆಡಲ್ ಆಫ್ ರಾಯಲ್ ಏರೋ ಕ್ಲಬ್ ಮತ್ತು 2006 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಸಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತು 1988 ರಲ್ಲಿ ಯುಕೆ ನಿಂದ ಭಾರತಕ್ಕೆ ಮೈಕ್ರೊಲೈಟ್ ವಿಮಾನದಲ್ಲಿ ಪ್ರಯಾಣಿಸಿದ ಬಗ್ಗೆ ಸಿಂಘಾನಿಯಾ ‘ಆನ್ ಏಂಜಲ್ ಇನ್ ದಿ ಕಾಕ್‌ಪಿಟ್’ ಎಂಬ ಪುಸ್ತಕವನ್ನೂ ಸಹ ಬರೆದಿದ್ದಾರೆ.!

 

 

ನಿಮಗೆ ಗೊತ್ತಿರಬಹುದು ಒಂದು ಕಾಲದಲ್ಲಿ ರೈಮಂಡ್ ಬಟ್ಟೆ ಎಲ್ಲ ಅಂಗಡಿಗಳಲ್ಲೂ ರಾರಾಜಿಸುತ್ತಿತ್ತು. ಈ ರೀತಿಯಾಗಿ ತಮ್ಮ ಕಂಪನಿಯನ್ನು ಉನ್ನತ ಸ್ಥಾನಕ್ಕೆ ತರಲು ಹಗಲು ರಾತ್ರಿ ಎನ್ನದೇ ಶ್ರಮಿಸಿ ತುಂಬಾ ಕಷ್ಟ ಪಟ್ಟು ಸಾವಿರಾರು ಕೋಟಿಯನ್ನು ಸಂಪಾದಿಸಿ 36 ಅಂತಸ್ತಿನ ಮನೆಯನ್ನು ಸಹ ಕಟ್ಟಿದರು. ಭಾರತದ ಟಾಪ್ ಟೆನ್ ಶ್ರೀಮಂತರಲ್ಲಿ ಇವರು ಸಹ ಒಬ್ಬರಾಗಿದ್ದಾರೆ.. ಆದರೆ ಇಂದಿನ ಅವರ ಸ್ಥಿತಿಯನ್ನು ನೋಡಿದರೆ ಬಹಳ ಬೇಸರವಾಗುತ್ತದೆ.

 

 

ಯಾರಿಗೇ ಆಗಲಿ ತನ್ನ ಪುತ್ರ ಮತ್ತು ಪುತ್ರಿ ಮೇಲೆ ಅತಿಯಾದ ಪ್ರೀತಿ ಮತ್ತು ಒಲವನ್ನು ಹೊಂದಿರುತ್ತಾರೆ. ಹಾಗೆಯೇ ವಿಜಯಪತ್ ಸಿಂಘಾನಿಯಾ ತನ್ನ ಮಗನ ಮೇಲೆ ಅತಿಯಾದ ಒಲವನ್ನು ಹೊಂದಿದ್ದರು. ತನಗೆ ವಯಸ್ಸಾಗುತ್ತಿದ್ದಂತೆ ತನ್ನ ಮನೆ, ಶೇರ್ ಮತ್ತು ಕಂಪನಿಯೆಲ್ಲಾ ಅವನ ಹೆಸರಿಗೆ ಬರೆದು ಬಿಟ್ಟರು. ಆಕೆಗೆ ರೈಮಂಡ್ ಕಂಪನಿಯ ಉಸ್ತುವಾರಿಯನ್ನು ಕೂಡ ತನ್ನ ಮಗ ಗೌತಮ್ ಅವರಿಗೆ ಕೊಟ್ಟುಬಿಟ್ಟರು.

 

 

ಆದರೆ ಅದೇನಾಯಿತೋ ಏನೋ ಮಗ ಗೌತಮ್ ತನ್ನ ತಂದೆಯನ್ನು ಕಂಪನಿ ಮತ್ತು ಮನೆಯಿಂದ ಹೊರಗೆ ಹಾಕಿದ್ದಾನೆ. ವಿಧಿ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿಜಯ್ ಪತ್ ಸಿಂಘಾನಿಯಾ ಅವರಿಗೆ ಮನೆಯ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೈಯಲ್ಲಿ ಬಿಡಿಗಾಸು ಇಲ್ಲದೇ ಪರೆದಾಡುತ್ತಿದ್ದಾರೆ. ವಿಧಿಯಿಲ್ಲದೆ ವಿಜಯ್ ಅವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ.

 

 

ಕೋರ್ಟ್ ಮೆಟ್ಟಿಲೇರಿರುವ ವಿಜಯ್ ಪತ್ ಸಿಂಘಾನಿಯಾ, ನನಗೆ 36 ಅಂತಸ್ತಿನ ಜೆಕೆ ಹೌಸ್ ನಲ್ಲಿ ಒಂದು ರಿಫ್ಲೆಕ್ಸ್ ಮನೆ ಮತ್ತು ಒಂದು ಕಾರು, ಪ್ರತಿ ತಿಂಗಳು ಮಗನಿಂದ ಏಳು ಲಕ್ಷ ಕೊಡುವುದಾಗಿ ಕೇಳಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದೇ ನೋಡಿ ಸಾವಿರಾರು ಕೋಟಿಯ ಒಡೆಯ ಬಿಡಿಗಾಸು ಇಲ್ಲದೆ ಬೀದಿಗೆ ಬಿದ್ದಿರುವುದನ್ನು ನೋಡಿದರೆ ಬೇಸರವಾಗುತ್ತದೆ.

LEAVE A REPLY

Please enter your comment!
Please enter your name here