ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಸಂಪುಟ ಸಭೆಯ ಮುಖ್ಯಾಂಶಗಳೇನು..?

0
42

ಬೆಂಗಳೂರು: ಇಂದು ವಿಜಯನಗರವನ್ನು ನೂತನ ಜಿಲ್ಲೆಯಲಾಗಿ ಅಧಿಕೃತವಾಗಿ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಯಿತು. ಮುಂಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು.

ಸಭೆ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ. ಮಾಧುಸ್ವಾಮಿ, ವಿಜಯನಗರವನ್ನು ನೂತನ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆ, ಕೊಟ್ಟೂರು, ಹರಪ್ಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಗಿ 6 ತಾಲೂಕುಗಳನ್ನು ಸೇರ್ಪಡೆ ಮಾಡಲಾಯಿತು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದರ ಸಚಿವ ಆನಂದ್ ಸಿಂಗ್, ವಿಜಯನಗರ ಜಿಲ್ಲೆ ಆಗಬೇಕು ಅನ್ನೋದು ಬಹುಕಾಲದ ಬೇಡಿಕೆ. ಈ ಬೇಡಿಕೆಯನ್ನು ಸಾಕಾರಗೊಳಿಸಲು ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಮಾಧುಸ್ವಾಮಿ, ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಗೆ ಸೇರ್ಪಡೆಗೆ ಶಿಫಾರಸ್ಸು ಮಾಡಲು ಚಿಂತನೆ ಇತ್ತು. ಆದರೆ ಒಕ್ಕಲಿಗರ ಕುಂಚಟಿಗರು ಸೇರಿದಂತೆ ಹಲವು ಸಮುದಾಯಗಳು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಜತೆ ಚರ್ಚಿಸಿ ಬಳಿಕ ನಂತರ ತೀರ್ಮಾನಿಸಲು ನಿರ್ಧರಿಸಿ ಇಂದು ಕ್ಯಾಬಿನೆಟ್ ನಲ್ಲಿ ಈ ವಿಷಯವನ್ನು ಡಿಫರ್ ಮಾಡಲಾಯ್ತು. ವೀರಶೈವ ಲಿಂಗಾಯಿತರ 16 ಉಪಜಾತಿಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಹಾಗಾಗಿ ಬಿಟ್ಟು ಹೋಗಿರುವ ಉಳಿದ ಉಪಜಾತಿಗಳನ್ನೂ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು 36 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸುವಂತೆ ವೀರಶೈವ ಲಿಂಗಾಯಿತ ಮಹಾಸಭಾ ಕೂಡ ಸರ್ಕಾರಕ್ಕೆ ಮನವಿ ಮಾಡಿತ್ತು. ಮೇಲಾಗಿ ನಾವು ರಾಜ್ಯದ ಮೀಸಲು ಪಟ್ಟಿ ಬದಲಾವಣೆಗೆ ಉದ್ದೇಶಿಸಿಲ್ಲ. ಕೇಂದ್ರ ಸರ್ಕಾರದ ಮೀಸಲು ಪಟ್ಟಿಗೆ ಸೇರ್ಪಡೆಗೆ ಶಿಫಾರಸ್ಸು ಮಾಡಲು ಉದ್ದೇಶಿದ್ದೆವು. ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಕೇಂದ್ರದ ವರಿಷ್ಟರು ವಿಳಂಬ ಮಾಡಿರುವುದಕ್ಕೂ ವೀರಶೈವ ಲಿಂಗಾಯಿತರನ್ನು ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವುದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

ಸಭೆಯ ಮುಖ್ಯಾಂಶ

ಧಾರವಾಡ ರೈಲ್ವೆ ಸ್ಟೇಷನ್ ಯಾರ್ಡ್ ನಲ್ಲಿ 16.48 ಕೋಟಿ ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ
ಹುಬ್ಬಳ್ಳಿ ಧಾರವಾಡ ರೈಲು ಸ್ಟೇಷನ್ ನಲ್ಲಿ ಮೇಲ್ ಸೇತುವೆ ೧೬ ಕೋಟಿ , ರಾಜ್ಯದ್ದು ೮ ಕೋಟಿ ಅನುಮೋದನೆ
ಕರ್ನಾಟಕ ಗೃಹ ಮಂಡಳಿಯ 98 ವಸತಿ ಯೋಜನೆಗಳನ್ನು 2275 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮತಿ
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಗೆ ಕಟ್ಟಡಗಳ ನಿರ್ಮಾಣಕ್ಕೆ 42.93 ಕೋಟಿ ಕಾಮಗಾರಿಗಳಿಗೆ ಅನುಮತಿ
ಎಸ್ ಸಿ/ಎಸ್ ಟಿ ಬ್ಯಾಕಲಾಗ್ ಹುದ್ದೆ ಭರ್ತಿಗೆ ಸಚಿವ ಸಂಪುಟ ಉಪಸಮಿತಿ ಪುನಾರಚನೆ.ಶ್ರೀರಾಮುಲುಗೆ ಉಪಸಮಿತಿ ಸಮಿತಿ ಅಧ್ಯಕ್ಷತೆ

ಕರ್ನಾಟಕ ಗೆಜೆಟೆಡ್ ಪ್ರೊಭೆಷನರಿ ನೇಮಕಾತಿ 1:15 ಅನುಪಾತ ನಿಗದಿ ಪಡಿಸಿ ನಿಯಮಾವಳಿ ತಿದ್ದುಪಡಿ
ಮೆಟ್ರೋ ರೈಲು ಅನುಷ್ಠಾನ ಸಮಿತಿಗೆ ಮೂವರು ಸದಸ್ಯರ ನೇಮಕ.ಪೋಲೀಸ್ ಅಯುಕ್ತರು,ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಮತ್ತು ಕೆಆರ್ ಐಡಿಎಲ್ ನಿರ್ದೇಶಕರ ನೇಮಕ
ಬೆಂಗಳೂರು ಗ್ರಾಮಾಂತರ ದ ಬಾಶಟ್ಟಳ್ಳಿಯನ್ನು ಪಟ್ಟಣ ಪಂಚಾಯತಿ ಯಾಗಿ ಮೇಲ್ದರ್ಜೆಗೆ, ಹೊನ್ನಾಳಿಯನ್ನು ಪುರಸಭೆ ಮಾಡುತ್ತಿದ್ದೇವೆ. 20138 ಜನ ಇದ್ದಾರೆ ಅದಕ್ಕೆ ಪುರಸಭೆ ಮಾಡುತ್ತಿದ್ದೇವೆ
ಮಲ್ಲಸಂದ್ರ ಮತ್ತು ಮನೆವಾರ್ತೆ ಕಾವಲ್,ಶೆಟ್ಟಿಹಳ್ಳಿ ಗ್ರಾಮಪಂಚಾಯ್ತಿಗಳನ್ಮು ಬಿಬಿಎಂಪಿಗೆ ಸೇರ್ಪಡೆ
ಬೆಂಗಳೂರು ಯಲಹಂಕ ಹುಣಸಮಾರನಹಳ್ಳಿ ಪುರಸಭೆಯಾಗಿ ಮೇಲ್ದರ್ಜೆಗೆ
ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ 220 ರಿಂದ 384 ಕೋಟಿಗೆ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ
ಜಿಂದಾಲ್ ಅವರಿಗೆ 2000 ಎಕ್ಕರೆ ಜಮೀನು ಕೊಡುವುದನ್ನು ಮತ್ತೆ ಪರಿಶೀಲನೆ

 

ಸಭೆಗೆ ಹಲವು ಸಚಿವರ ಗೈರು

ಡಿಸಿಎಂ ಲಕ್ಷ್ಮಣ ಸವದಿ, ಆರ್ ಅಶೋಕ್, ರಮೇಶ್ ಜಾರಕಿಹೊಳಿ ದೆಹಲಿಯಲ್ಲಿದ್ದಾರೆ. ಅಶ್ವಥ್ ನಾರಾಯಣ ಪಕ್ಷದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಉಡುಪಿ ಪ್ರವಾಸದಲ್ಲಿದ್ದಾರೆ. ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಕೆ ಸುಧಾಕರ್ ಹೈದ್ರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬ್ಯುಸಿ ಇರೋದ್ರಿಂದ ಇಂದಿನ ಸಂಪುಟ ಸಭೆಗೆ ಕೆಲ ಸಚಿವರು ಗೈರಾಗಿದ್ದರು. ಇತ್ತ ಬೆಂಗಳೂರಿನಲ್ಲಿದ್ರು ಜಗದೀಶ್ ಶೆಟ್ಟರ್ ಸಭೆಗೆ ಹಾಜರಾಗಿರಲಿಲ್ಲ. ಅಬಕಾರಿ ಸಚಿವ ನಾಗೇಶ್ ಕೂಡ ಗೈರಾಗಿದ್ದು, ಕೆಲವೇ ಸಚಿವರಿಂದ ಇಂದು ಸಂಪುಟ ಸಭೆ ನಡೆಸಲಾಯಿತು.

LEAVE A REPLY

Please enter your comment!
Please enter your name here