ಡಿ-ಬಾಸ್ ದರ್ಶನ್ ಸಂಸಾರದ ಗಲಾಟೆ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿದೆ. ಇನ್ನು ಈ ಸುದ್ದಿಗೆ ಸ್ಪಷ್ಟಿಕರಣ ಕೊಟ್ಟಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿ “ನಮ್ಮ ಸಂಸಾರದ ಬಗ್ಗೆ ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು” ಎಂದಿದ್ದಾರೆ.
ಆದರೆ ಈ ಸುದ್ದಿಯ ಮಧ್ಯೆಯೇ ವಿಜಯಲಕ್ಷ್ಮಿ ಅವರ ಹೆಸರಿನ ಪಕ್ಕದಲ್ಲೆ ಇದ್ದ ದರ್ಶನ್ ಹೆಸರನ್ನು ತೆಗೆದುಹೊಕಿದ್ದಾರೆ. ಇದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಹಿಂದೆ ಟ್ವಿಟ್ಟರ್ ನಲ್ಲಿ ವಿಜಯಲಕ್ಷ್ಮಿ ಅವರ ಹೆಸರು ‘ವಿಜಯಲಕ್ಷ್ಮಿದರ್ಶನ್’ ಎಂದು ಇತ್ತು. ಆದರೆ ಈಗ ವಿಜಯಲಕ್ಷ್ಮಿ ಪಕ್ಕದಲ್ಲಿದ್ದ ದರ್ಶನ್ ಹೆಸರು ಮಾಯವಾಗಿದೆ. ದರ್ಶನ್ ಹೆಸರು ತೆಗೆದುಹಾಕಿದ್ದು ಎದ್ದ ಗಾಳಿಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಟ್ವೀಟ್ ಮಾಡುವ ಮೂಲಕ ಎದ್ದ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ವಿಜಯಲಕ್ಷ್ಮೀ ಆದರೆ ಅನುಮಾನ ಮಾತ್ರ ಡಿ-ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ.

ಇನ್ನು ಮೂಲಗಳ ಪ್ರಕಾರ ದರ್ಶನ್ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾದ ನಂತರ ತುಂಬ ಅಪ್ ಸೆಟ್ ಆಗಿದ್ದಾರೆ. ಚಿತ್ರದಲ್ಲಿ ದರ್ಶನ್ ನಿರೀಕ್ಷೆ ತಕ್ಕಂತೆ ಅವರ ಪಾತ್ರ ಮೂಡಿ ಬಂದಿಲ್ಲ ಎಂದು ಬುಸುಗುಟ್ಟುತ್ತಿದ್ದರಂತೆ. ಅದೇ ಸಿಟ್ಟನ್ನು ಪತ್ನಿ ಮೇಲೆ ಹೊಡೆದು ತೀರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಮಾತ್ರ ಇನ್ನು ನಿಗೂಢ.
