ಖಾಸಗಿ ವಾಹಿನಿಯಲ್ಲಿ ಈಗ ಹೊಸದಾಗಿ ಪ್ರಸಾರವಾಗುತ್ತಿರುವ ಪ್ರೇಮ ಲೋಕಕ್ಕೆ ವಿಶೇಷವಾಗಿ ಓಪನಿಂಗ್ ಸಿಕ್ಕಿದೆ ಅಂತಲೇ ಹೇಳಬಹುದು
ಇದೇ ಮೊದಲ ಬಾರಿಗೆ ಒಂದು ಧಾರಾವಾಹಿಗೆ ಲಾಂಚಿಂಗ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು
ದಾವಣಗೆರೆಯಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ
ನಾಯಕ ವಿಜಯ್ ಸೂರ್ಯ ಮತ್ತು ಅಂಕಿತ ಜೊತೆಗೆ ಇಡೀ ಧಾರಾವಾಹಿ ಬಳಗ ಹಾಜರಾಗಿತ್ತು
ಧಾರಾವಾಹಿಯ ಕೆಲವು ಎಪಿಸೋಡ್’ಗಳು ಪ್ರಸಾರವಾದ ಮೇಲೆ ಅಭಿಮಾನಿಗಳ ಜೊತೆ ಸೀರಿಯಲ್ ಸಂತೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ದೊಡ್ಡ ಕಟೌಟ್ ಮುಂದೆ ಧಾರಾವಾಹಿಯನ್ನು ಪ್ರೇಕ್ಷಕರ ಸಮ್ಮುಖದಲ್ಲಿ ಲಾಂಚ್ ಮಾಡಲಾಗಿದ್ದು.ಜುಲೈ 22 ರಂದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ಅಂದಹಾಗೆ ಈ ಸೀರಿಯಲ್’ನಲ್ಲಿ ವಿಜಯ್ ಸೂರ್ಯ ಅವರ ಸಂಭಾವನೆ ಎಷ್ಟು ಅಂತ ಜನರಿಗೆ ಕುತೂಹಲ ಇದ್ದೇ ಇರುತ್ತದೆ.ಅಗ್ನಿಸಾಕ್ಷಿಯಲ್ಲಿ ವಿಜಯ್ ಸೂರ್ಯ ಅವರು ಒಂದು ಎಪಿಸೋಡ್’ಗೆ 20 ರಿಂದ 30 ಸಾವಿರ ತನಕ ಸಂಭಾವನೆ ತೆಗೆದು ಕೊಟ್ಟಿದ್ದರು.
ವಿಜಯ್ ಸೂರ್ಯ ಅವರಿಗೆ ಸ್ವಲ್ಪ ಡಿಮ್ಯಾಂಡ್ ಹೆಚ್ಚಾಗಿದೆ, 30 ರಿಂದ 40 ಸಾವಿರ ತನಕ ಸಂಭಾವನೆ ತೆಗೆದುಕೊಳ್ಳುತ್ತಾರಂತೆ ಹೀಗೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಹಾಗೆ ಈ ಸೀರಿಯಲ್ ಕೂಡ ಗಳಿಸುವ ಕ್ಷಣಕ್ಕೆ ಚೆನ್ನಾಗಿ ಓಡಲಿ ಎಂಬುದು ನಮ್ಮೆಲ್ಲ ಆಶಯ.
ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಜ ಪೇಜ್ ಲೈಕ್ ಮಾಡಿ ಹಾಗೂ ನೀವು ಕೂಡ ಪ್ರೇಮಲೋಕ ಸೀರಿಯಲ್ ಅನ್ನು ನೋಡುತ್ತಿದ್ದರೆ ತಪ್ಪದೇ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ
ಧನ್ಯವಾದಗಳು.