ನಾಲ್ವರನ್ನು ಒಟ್ಟಿಗೆ ಪ್ರೀತಿಸುವ ಮೂಲಕ ವಲ್ರ್ಡ ಫೇಮಸ್ ಆದ ವಿಜಯ್ ದೇವರಕೊಂಡ…!

0
385

ಅರ್ಜುನ್ ರೆಡ್ಡಿ ಸಿನಿಮಾದಿಂದ ತಮ್ಮ ಇಮೇಜ್ ಹೆಚ್ಚಿಸಿಕೊಂಡ ನಟ ವಿಜಯ್ ದೇವರಕೊಂಡ. ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಲವರ್‍ಗಳು ವಿಜಯ್ ಅವರನ್ನು ಟಾಲಿವುಡ್ ಇಮ್ರಾನ್ ರಶ್ಮಿ ಎಂದು ಕೂಡಾ ಕರೆಯಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಅರ್ಜುನ್ ರೆಡ್ಡಿ, ಗೀತಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿನ ಲಿಪ್‍ಲಾಕ್ ಸೀನ್.

 

 

ಇದೀಗ ವಿಜಯ್ ದೇವರಕೊಂಡ ನಾಲ್ವರು ಹುಡುಗಿಯರನ್ನು ಒಟ್ಟೊಟ್ಟಿಗೆ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಹೌದಾ ಎಂದು ಹುಬ್ಬೇರಿಸಬೇಡಿ. ವಿಜಯ್ ದೇವರಕೊಂಡ ‘ವಲ್ರ್ಡ ಫೇಮಸ್ ಲವರ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ರಾಶಿ ಖನ್ನಾ, ಐಶ್ವರ್ಯ ರಾಜೇಶ್, ಕ್ಯಾಥರಿನ್ ತೆರೇಸಾ ಹಾಗೂ ಇಸಬೆಲ್ಲಾ ಲೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇವರೆಲ್ಲರೊಂದಿಗೆ ವಿಜಯ್ ರೊಮ್ಯಾನ್ಸ್ ಮಾಡುತ್ತಿದ್ದಾರೆ.

 

 

ನಾಲ್ಕೈದು ದಿನಗಳ ಹಿಂದೆ ಐಶ್ವರ್ಯ ರಾಜೇಶ್ ಜೊತೆ ಇರುವ ಪೋಸ್ಟರ್ ಬಿಡುಗಡೆ ಆಗಿತ್ತು. ನಿನ್ನೆ ಇಸಬೆಲ್ಲಾ ಜೊತೆ ಇರುವ ಪೋಸ್ಟರ್ ಬಿಡುಗಡೆಯಾಗಿದೆ. ಕ್ರಾಂತಿ ಮಾಧವ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಮುಂದಿನ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಹಿಂದಿನ ಸಿನಿಮಾಗಳಂತೆ ಈ ಸಿನಿಮಾದಲ್ಲಿ ಕೂಡಾ ನಾಯಕಿಯರೊಂದಿಗೆ ವಿಜಯ್ ಲಿಪ್‍ಲಾಕ್ ಸೀನ್ ಇರಲಿದೆಯಾ ಕಾದು ನೋಡಬೇಕು.

LEAVE A REPLY

Please enter your comment!
Please enter your name here