ಆರು ತಿಂಗಳು ಗಂಡು, ಇನ್ನಾರು ತಿಂಗಳು ಹೆಣ್ಣಂತೆ ಈ ಸ್ವಾಮೀಜಿ

0
233

ಹೆಣ್ಣಿನ ವೇಷ ಧರಿಸಿರುವ ಗಂಡು ಸ್ವಾಮೀಜಿಯೊಬ್ಬರು ಸದ್ಯ ಕಾಣಿಸಿಕೊಂಡಿದ್ದಾರೆ. ಚಾತುರ್ಮಾಸ ಆಚರಿಸಲು ಇವರು ಬೀಳಗಿ ತಾಲೂಕಿಗೆ ಆಗಮಿಸಿ, ಸ್ಥಳೀಯರೆಲ್ಲರನ್ನೂ ಚಕಿತಗೊಳಿಸಿದ್ದಾರೆ. ಚಕಿತಗೊಳ್ಳೋದಕ್ಕೆ ಕಾರಣ ವಿಚಿತ್ರವಾಗಿದೆ. ಈ ಸ್ವಾಮೀಜಿ ವರ್ಷದ ಆರು ತಿಂಗಳು ಗಂಡು, ಇನ್ನಾರು ತಿಂಗಳು ಹೆಣ್ಣಾಗಿ ಇರುತ್ತಾರಂತೆ. ಈ ವಿಷಯ ಕೇಳಿ ಇಲ್ಲಿನ ಜನ ಸುಸ್ತಾಗಿ ಹೋಗಿದ್ದಾರೆ. ಸದ್ಯ ಹೆಣ್ಣಿನ ರೂಪದ ವಿಚಿತ್ರ ವೇಷದಲ್ಲಿ ಈ ಸ್ವಾಮೀಜಿ ಕಾಣಿಸಿಕೊಂಡಿದ್ದಾರೆ.

ಈ ಭಾಗಕ್ಕೆ ಬಂದಿರುವ ಈ ಅಪರೂಪದ ಸ್ವಾಮೀಜಿ ಬಗ್ಗೆ ಇಲ್ಲಿನ ಭಕ್ತರಿಗೆ ಈಗ ತೀವ್ರ ಕುತೂಹಲ ಮೂಡಿದೆ. ಈ ಸ್ವಾಮಿಜಿ ಮೈಸೂರು ಜಿಲ್ಲೆ ಪಾಂಡವಪುರ ತಾಲೂಕಿನ ಚಂದ್ರ ಗ್ರಾಮದವರು. ಇಲ್ಲಿನ ತ್ರಿಧಾಮ ಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠಾಧ್ಯಕ್ಷ ವಿದ್ಯಾಹಂಸ ಭಾರತಿ ಸ್ವಾಮೀಜಿ. ಈ ಸ್ವಾಮೀಜಿ ಮೊದಲಿಗೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇವರ ವಿಚಿತ್ರ ವೇಷ ಮತ್ತು ಹಾವಭಾವ ಕಂಡು ಇಲ್ಲಿನ ಜನ ಹೌಹಾರಿದ್ದಾರೆ. ಬಳಿಕ ಕೂಡಲಸಂಗಮ ಕ್ಷೇತ್ರದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಇಲ್ಲಿ ತಂಗಲು ಸ್ವಾಮಿಝಿಗೆ ಅವಕಾಶ ನಿರಾಕರಿಸಿದ್ದಾರೆ. ಬಳಿಕ ಸ್ವಾಮೀಜಿ ಸದ್ಯ ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ಶಿವಾನಂದ ನಿಂಗನೂರು ಅವರಿಗೆ ಸೇರಿದ ಜಾಗದಲ್ಲಿ ನೆಲೆಸಿ ಪೂಜಾ ಕಾರ್ಯ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here