ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಚೂಡಾಮಣಿ ದಕವರಪು ಕೂಚಿಪುಡಿ ನೃತ್ಯಗಾರ್ತಿ. 5 ವರ್ಷದವರಿರುವಾಗಲೇ ಸ್ಟೇಜ್ ಶೋ ನೀಡಿದ ಚೂಡಾಮಣಿ ಈಗ ಹೈದರಾಬಾದ್ನಲ್ಲಿ ನಟರಾಜ ಇನ್ಸ್ಟ್ಯೂಟ್ ಆಫ್ ಆಟ್ರ್ಸ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಸಹಜ ಸ್ಥಿತಿಯಲ್ಲಿರುವಾಗ ಭರತನಾಟ್ಯ ಮಾಡುವುದು ಕಷ್ಟ. ಅಂದರೆ, ಮುಖದ ಹಾವಭಾವ, ಚಲನೆ ಎಲ್ಲವೂ ಪರಿಪೂರ್ಣವಾಗಿರಬೇಕು.
ಅಂತದ್ದರಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದಾಗ ಕೂಡಾ ನೃತ್ಯಾಭ್ಯಾಸ ಮಾಡಿ ಸ್ಟೇಜ್ ಶೋ ನೀಡಿ ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದ್ದಾರೆ. ಚೂಡಾಮಣಿ ಪತಿ ಸಾಫ್ಟ್ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇದೆ.
ಆದರೆ ಚೂಡಾಮಣಿ ಅವರ ಈ ವಿಡಿಯೋ ಕೆಲವು ದಿನಗಳ ಮುನ್ನವೇ ರೆಕಾರ್ಡ ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಅವರಿಗೆ ಮತ್ತೊಂದು ಹೆಣ್ಣು ಮಗು ಜನಿಸಿದೆ ಎನ್ನಲಾಗಿದೆ. ಏನಾದರೂ ಈ ಸಾಹಸವನ್ನು ಬೇರೆ ಹೆಣ್ಣು ಮಕ್ಕಳು ಮಾಡದಿರಲಿ ಎಂಬುದು ನಮ್ಮ ಮನವಿ.