ಈ ತರಕಾರಿಗಳಿಂದ ಏನೆಲ್ಲಾ ಉಪಯೋಗ ? ತಿಳಿದುಕೊಳ್ಳಿ…

0
293

ನಮ್ಮ ಹಿರಿಯರು, ಆಚಾರ್ಯರು, ಗುರುಗಳು, ಯತಿಗಳು, ಮಹರ್ಷಿಗಳು ಹಲವಾರು ಸಂಸ್ಕಾರ, ವೇದ, ಪುರಾಣ, ಆಯುರ್ವೇದ ಇನ್ನಿತರ ಹಲವಾರು ವಿಚಾರಧಾರೆಗಳನ್ನು ತಮ್ಮ ಅನುಭವಪೂರ್ವಕವಾಗಿ ನಮಗೋಸ್ಕರ ಬಿಟ್ಟು ಹೋಗಿದ್ದಾರೆ . ಅಂತಹ ಗುರುಗಳ ಮಾರ್ಗದರ್ಶನದಲ್ಲಿ ಬಂದಿರುವಂತಹ ಹಲವಾರು ಆಯುರ್ವೇದ –  ಮನೆ ಮದ್ದಿನ ವಿಚಾರಗಳನ್ನು ಕ್ರೋಢೀಕರಿಸಿ ಮನೆ ಮದ್ದು –  ಗೃಹ ಸಂಜೀವಿನಿ ಎಂಬ ಬರಹಗಳ ಸರಣಿಯನ್ನು ಶ್ರೀ. ಶ್ರೀ. ರವಿಶಂಕರ್ ಗುರೂಜಿರವರು ನಿಮ್ಮ ಮುಂದೆ ಪುಟ್ಟದಾಗಿ  ಸಮರ್ಪಿಸುತ್ತಿದ್ದಾರೆ. ಈ ಬರಹಗಳ ಸರಣಿಯು ನಿಮ್ಮ ಮನೆಗೊಂದು – ಬದುಕಿಗೊಂದು – ಆರೋಗ್ಯ ಜೀವನಕ್ಕೊಂದು ಯಶೋಗಾಥೆಯಾಗಲಿ. ನಮ್ಮ ಹಿರಿಯರು ನಮಗೆ ಕೊಟ್ಟಿರುವ ಈ ಮನೆಮದ್ದು ಸಂಜೀವಿನಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅದನ್ನು  ಸಮರ್ಪಕವಾಗಿ  ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ನಿಮ್ಮ ಜೀವನವನ್ನು ಹಾಲು – ಸಕ್ಕರೆಯಂತಾಗಿಸಿಕೊಂಡರೆ ಅದುವೇ  ಬಹು ದೊಡ್ಡ ಸಂತಸ.

೧. ಸಿಹಿಗುಂಬಳಕಾಯಿ ಬಹುಪಯೋಗಿ ತರಕಾರಿ. ತರತರದ ಅಡುಗೆಯನ್ನು ಈ ತರಕಾರಿಯಿಂದ ಮಾಡುತ್ತಾರೆ . ಪಲ್ಯ, ಹುಳಿ, ಕೂಟು, ಪಾಯಸ, ಬರ್ಫಿ, ಕೇಕ್, ರೊಟ್ಟಿ, ಗೊಜ್ಜು, ಬಜ್ಜಿ ಮುಂತಾದ ತಿಂಡಿಗಳನ್ನು ತಯಾರಿಸಬಹುದು.

೨. ಪಿತ್ತದ ಗಂಧೆ ನಿವಾರಣೆಗಾಗಿ : ಹಾಗಲಕಾಯಿ ಎಲೆಗಳನ್ನು ಮೊಸರಿನಲ್ಲಿ ಅರೆದು ಮೈಗೆ ಸವರಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡಬೇಕು.

೩. ಪಡವಲಕಾಯಿ ಒಂದು ಸ್ವಾದಿಷ್ಟಕರವಾದ ತಿಂಡಿ ತಿನಿಸುಗಳನ್ನು ಮಾಡುವ ತರಕಾರಿ. ಪಡುವಲದ ಪಲ್ಯ, ಬಜ್ಜಿ, ಗೊಜ್ಜು, ಹುಳಿ, ಕೂಟು ಮುಂತಾದವುಗಳನ್ನು ಮಾಡುತ್ತಾರೆ. ಶರೀರದಲ್ಲಿ ಹೆಚ್ಚಿನ ಉಷ್ಣ ಸಂಗ್ರಹ ಹೊರಟು ಹೋಗುತ್ತದೆ. ಅಂಗೈ – ಹಂಗಾಲು ಉರಿ, ಕಣ್ಣುರಿ  ಹಾಗೂ ಮೂತ್ರದ ಉರಿ ತೊಲಗುತ್ತವೆ. ನಿಶ್ಯಕ್ತಿ ದೂರವಾಗುವುದಕ್ಕೆ ಇದೊಂದು ಉತ್ತಮ ತರಕಾರಿ. ಕ್ಷಯರೋಗಿಗಳು ಇದನ್ನು ಸೇವಿಸಬೇಕು.

೪. ಕುಂಬಳ ಬೀಜ ಮತ್ತು ಬಾದಾಮಿ ಬೀಜವನ್ನು ಅರೆದು ಹಸುವಿನ ಹಾಲಿನ ಮತ್ತು  ಜೇನುತುಪ್ಪ ಸೇರಿಸಿ ಸೇವಿಸಿದರೆ ದೈಹಿಕ ತೂಕ ಹೆಚ್ಚುತ್ತದೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

೫. ಸೋರೆಕಾಯಿಯಿಂದ ತೆಗೆದ ಎಣ್ಣೆಯನ್ನು ತಲೆಗೆ ಹಚ್ಚಲು ಉಪಯೋಗಿಸುವುದರಿಂದ ಕೂದಲುಗಳು ಸುಂದರವಾಗಿ ಬೆಳೆಯುತ್ತವೆ. ಇದರ ತಿರುಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಹೊಳೆಯುತ್ತದೆ. ಮಲಬದ್ಧತೆ ಗೊಂದು ಉತ್ತಮ ತರಕಾರಿ ಇದ್ದಾಗಿದೆ. ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಮೂತ್ರ ದೋಷ ನಿವಾರಣೆಯಾಗುತ್ತದೆ. ಇದರ ತಿರುಳನ್ನು ಕಾಲಿಗೆ ಹಚ್ಚಿ ಉಜ್ಜುವುದರಿಂದ ಚರ್ಮ ಮೃದುವಾಗುತ್ತದೆ. ಉರಿ ಇದ್ದರೆ ನಿವಾರಣೆಯಾಗುತ್ತದೆ.

೬. ಬೆಳ್ಳುಳ್ಳಿ ಭಾರತ ಹಾಗೂ ಅನ್ಯ ಪ್ರದೇಶಗಳಲ್ಲಿ ಭೋಜನ ಪದಾರ್ಥಗಳಲ್ಲಿ ಒಂದು ಪ್ರಿಯ ವಸ್ತು. ಇತ್ತೀಚೆಗಿನ ಸಂಶೋಧನೆಗಳಿಂದ ಬೆಳ್ಳುಳ್ಳಿ ಸೊಳ್ಳೆ, ನುಸಿ, ನೊಣ ಹಾಗೂ ಬೆಳೆಗಳನ್ನು ಪೀಡಿಸುವ ಇತರ ಕ್ರಮ ಚಿಟ್ಟೆಗಳ ನಾಶಕ್ಕಾಗಿ ಉಪಯೋಗಿಸಲಾಗುವ ಕ್ರಿಮಿನಾಶಕ ಎಂದು ಪರಿಗಣಿಸಲ್ಪಟ್ಟಿದೆ.

೭. ಬೀಟ್ರೂಟ್ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಕರುಳು ಹುಣ್ಣು ವಾಸಿಯಾಗುತ್ತದೆ. ರಕ್ತ ವೃದ್ಧಿಯಾಗುತ್ತದೆ. ಇದೇ ರಸಕ್ಕೆ ಮಾಲ್ಟ್ ಮತ್ತು ವಿನಿಗರ್ ಸೇರಿಸಿ ಒಡೆದ ಚರ್ಮದ ಮೇಲೆ ಹಚ್ಚಿದರೆ, ಚರ್ಮ ನಯವಾಗುತ್ತದೆ.

೮. ನಸುಕಿನಲ್ಲಿ ಹಲ್ಲು ತಿಕ್ಕಿದ ನಂತರ  ೧ – ೨ ಗೋರೆ ಕಾಯಿಯನ್ನು ಅಗಿದು ತಿನ್ನುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಇದರ ಪಲ್ಯದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ದೇಹದಲ್ಲಿ ಸಾಕಷ್ಟು ಉಷ್ಣ ಉತ್ಪತ್ತಿಯಾಗುತ್ತದೆ. ಅಲ್ಲದೆ ರಕ್ತ ವೃದ್ಧಿಯಾಗುತ್ತದೆ. ಎಲೆಗಳನ್ನು ಅರೆದು ಸಕ್ಕರೆ ಬೆರೆಸಿ ನವೆ ಇರುವ ಜಾಗಕ್ಕೆ ಹಚ್ಚಿ, ಒಂದು ಗಂಟೆಯ ನಂತರ ಹಿತವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ನವೆ ನಿವಾರಣೆಯಾಗುತ್ತದೆ. ಸ್ತ್ರೀಯರ ಎದೆ ಹಾಲು ಹೆಚ್ಚುತ್ತದೆ. ಸ್ತ್ರೀಯರಲ್ಲಿ ಆಗುವ ಅತಿಯಾದ ಋುತುಸ್ರಾವ ನಿಲ್ಲುತ್ತದೆ. ಗರ್ಭಕೋಶದ ದೋಷವನ್ನು ನಿವಾರಿಸುತ್ತದೆ.

೯. ವಿಂಗ್ಡ್  ಬೀನ್ ನಲ್ಲಿ ಎಣ್ಣೆ ಮತ್ತು ಪ್ರೊಟೀನ್ ಅಂಶಗಳು ಹೆಚ್ಚಾಗಿರುತ್ತವೆ. ಈ ಸಸ್ಯದ ಉತ್ತಮ ಬೀಜಗಳಲ್ಲಿ ಶೇ ೩೪ ರಷ್ಟು ಪ್ರೊಟೀನ್ ಹಾಗೂ ಶೇ ೧೮ ರಷ್ಟು ಎಣ್ಣೆಯ ಅಂಶಗಳು ಇವೆ.

೧೦. ಎಲೆಕೋಸಿನ ಸೇವನೆಯಿಂದ ಕರುಳು ಹುಣ್ಣುಗಳನ್ನು ಹೋಗಲಾಡಿಸಿಕೊಳ್ಳಬಹುದು. ಅಲ್ಲದೆ ವಾಯು ಬಾಧೆ, ಎದೆ ನೋವುಗಳು ಇಲ್ಲವಾಗುತ್ತವೆ.

೧೧. ಸಿಹಿ ಕುಂಬಳಕಾಯಿ ಸೇವನೆಯಿಂದ ದೇಹದಲ್ಲಿನ ಅಧಿಕ ಉಷ್ಣತೆ, ಪಿತ್ತ ಮಾಯವಾಗುತ್ತದೆ.

೧೨.ಆಲೂಗಡ್ಡೆಯನ್ನು ಹಸಿಯಾಗಿ ಸಿಪ್ಪೆ ಸಹಿತ ಅಗಿದು  ನಿತ್ಯ ತಿನ್ನುತ್ತಿದ್ದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

೧೩. ನುಗ್ಗೆ ಎಲೆಗಳನ್ನು ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ಮೊಳಕೆಗಳು ನಶಿಸಿ ಹೋಗುವುದು.

೧೪. ಕಂದು ಬಣ್ಣದ ಎಳೆ ಬದನೆಕಾಯಿ ಬೇಯಿಸಿ ಆಹಾರದಲ್ಲಿ ಸೇವಿಸುತ್ತಿದ್ದರೆ ಕಫ ಕಡಿಮೆಯಾಗುತ್ತದೆ.

‍‍೧೫. ಹೆಚ್ಚು ತೂಕವಿರುವ ವ್ಯಕ್ತಿಗಳು ತರಕಾರಿಯನ್ನು ಹೆಚ್ಚು ತಿನ್ನುವುದರಿಂದ ದೇಹದ ಅನವಶ್ಯಕ ತೂಕ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ.

 

೧೬. ಹಸಿ ಶುಂಠಿಯು ಗಂಟಲು ನೋವಿಗೆ ಉತ್ತಮ ಪರಿಹಾರ.  ಹಸಿ ಶುಂಠಿಯನ್ನು ಜಗಿದು  ಅದರ ರಸ ನುಂಗುವುದರಿಂದ ಗಂಟಲು ನೋವು ನಿವಾರಣೆಯಾಗುವುದು.

೧೭. ತಲೆ ನೋವಿನಿಂದ ನರಳುತ್ತಿದ್ದರೆ ಹಸಿ ಶುಂಠಿಯನ್ನು ಅರೆದು ತಲೆನೋವಿರುವ ಭಾಗದಲ್ಲಿ ಪಟ್ಟು ಕಟ್ಟಿದ್ದರೆ ತಲೆನೋವು ವಾಸಿಯಾಗುತ್ತದೆ.

೧೮. ತಲೆ ನೋವು ಇದ್ದರೆ, ಹಸಿ ಶುಂಠಿಯನ್ನು ನೀರಿನಲ್ಲಿ ತೇದು, ಆ ಗಂಧವನ್ನು ಹಣೆಗೆ ಹಚ್ಚಿಕೊಂಡು ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಬೆವರು ಸುರಿದು ತಲೆನೋವು ನಿವಾರಣೆಯಾಗುತ್ತದೆ.

೧೯. ಹಸಿ ಶುಂಠಿಯ ಸಣ್ಣ ಸಣ್ಣ ಚೂರುಗಳೊಂದಿಗೆ ಕಲ್ಲು ಸಕ್ಕರೆ ಚೂರುಗಳನ್ನು ಬೆರೆಸಿ ಜಗಿದು ಹೀರುತ್ತಿದ್ದರೆ ಗಂಟಲು ನೋವು ಕಡಿಮೆಯಾಗುತ್ತದೆ.

೨೦. ನವಿಲು ಕೋಸನ್ನು ಹಸಿಯಾಗಿ ತುರಿದು ಕೋಸಂಬರಿ ಮಾಡಿಕೊಂಡು ಸೇವಿಸಿದರೆ, ದೃಷ್ಟಿಚುರುಕಾಗುತ್ತದೆ . ನವಿಲುಕೋಸಿನ ಪಲ್ಯ ಮಲಬದ್ಧತೆಯನ್ನು ನಿವಾರಿಸುತ್ತದೆ.

೨೧. ಸೌತೆಕಾಯಿಯ ಎಲೆಯನ್ನು ಕುದಿಸಿ ಜೀರಿಗೆಯ ಜೊತೆ ಮಿಶ್ರ ಮಾಡಿ ಹುರಿದು ಪುಡಿ ಮಾಡಿ ಕುಡಿದರೆ, ಗಂಟಲು ನೋವು ವಾಸಿಯಾಗುತ್ತದೆ.

೨೨. ಪ್ರತಿ ದಿನವೂ ಕುಂಬಳಕಾಯಿಯನ್ನು ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುವುದು.

೨೩. ಕುಂಬಳಕಾಯಿ ತೊಟ್ಟನ್ನು ಜೇನುತುಪ್ಪದಲ್ಲಿ ತೇದು ಹಚ್ಚುವುದರಿಂದ ಬಿಕ್ಕಳಿಕೆ ಹೋಗುತ್ತದೆ.

೨೪. ಎಲೆಕೋಸಿನ ರಸ ಮತ್ತು ನಿಂಬೆರಸ ಸೇರಿಸಿದ ಚಹಾ ಕುಡಿಯುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಟ್ಟು ಕೊಳ್ಳಬಹುದು.

೨೫. ಟೊಮೇಟೊ ಹಣ್ಣಿನಲ್ಲಿ ಹೃದಯಾಘಾತವನ್ನು ನಿಲ್ಲಿಸುವ ಪಿ – ಬ ಎಂ ವಸ್ತುವಿದೆ.

ನಿರಂತರ ಸಂಶೋಧನೆ ಹಾಗೂ ಕಠಿಣ ಪರಿಶ್ರಮದಿಂದ ಶ್ರೀ ರವಿಶಂಕರ್ ಗುರೂಜಿಯವರು ತಯಾರಿಸಿರುವ ‘ಶಂಕರಾಮೃತ‘ ಅನೇಕ ಸಮಸ್ಯೆಗಳಿಗೆ ಮದ್ದು. 16 ವರ್ಷ ಮೇಲ್ಪಟ್ಟ ವಯಸ್ಸಿನವರು ಈ ಶಂಕರಾಮೃತವನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡಯಾಬಿಟಿಸ್, ಶೀತ, ಕೆಮ್ಮು ಸೇರಿದಂತೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ‘ಶಂಕರಾಮೃತ’ ರಾಮಬಾಣ. ಏಕೆಂದರೆ ಅಶ್ವಗಂಧ, ನೆಲ್ಲಿಕಾಯಿ, ಅಮೃತಬಳ್ಳಿ, ಶತಾವರಿ, ಬಾಲ, ಮಂಜಿಷ್ಟ, ಕಾಪಿಕಚ್ಚು ಸೇರಿದಂತೆ ಬಹೋಪಯೋಗಿ ಗಿಡಮೂಲಿಕೆಗಳನ್ನು ಬಳಸಿ ಶಂಕರಾಮೃತವನ್ನು ತಯಾರಿಸಲಾಗಿದೆ. ಇದನ್ನು ಬೆಳಗ್ಗೆ ತಿಂಡಿಗೂ ಮುನ್ನ 15 ಮಿಲಿ ರಾತ್ರಿ ಊಟಕ್ಕೂ ಮುನ್ನ 15 ಮಿಲಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಬಹುದು.

ನಿಮಗೆ ಶಂಕರಾಮೃತ,ಬ್ರಹ್ಮಶಂಕರ ಹಸ್ತಾಮೃತ, ಅಷ್ಟದಿಗ್ಭಂಧನ, ಬಾಲಗೃಹ ದೋಷ ನಿವಾರಣಾ ಯಂತ್ರ, ಸೂರ್ಯ ಯಂತ್ರ, ಯಯಾತಿ ಯಂತ್ರ ಬೇಕಾಗಿದ್ದಲ್ಲಿ ಕಮೆಂಟ್ ಮಾಡಿ

LEAVE A REPLY

Please enter your comment!
Please enter your name here