ಮನಸೆಂಬ ಮಾಯಾವಿಗೆ ಮುಪ್ಪಿಲ್ಲ

0
182

‘ಮನಸ್ಸು ಮಾಡು ಎಲ್ಲಾ ಆಗುತ್ತೆ , ಮನಸ್ಸಿದ್ದರೆ ಮಹಾದೇವ.’
ಮನಸ್ಸಿನ ಕುರಿತ ಹೇಳಿಕೆಗಳ ಮನಸು ಮಾಡಿಯೇ ಅರಿಯಬೇಕು.
ಬೆಳಿಗ್ಗೆ ಎಚ್ಚರಾಗಿ , ರಾತ್ರಿ ಮಲಗುವವರೆಗೆ ಮನಸು ನಿರಂತರ ಆಲೋಚಿಸುತ್ತಲೇ ಇರುತ್ತೆ.

ಮನಸ್ಸು ಕನಿಷ್ಟ ಪ್ರತಿ ದಿನ ಸಾವಿರಾರು ಅಂದಾಜು ಅರವತ್ತು ಸಾವಿರ ಆಆಲೋಚನೆಗಳನ್ನು ಮಾಡುತ್ತದೆಯಂತೆ. ಈ ಆಲೋಚನ ಲಹರಿಗೆ ತಡೆಗೋಡೆ ನಿರ್ಮಿಸುವುದೇ ಧ್ಯಾನ ದೇಹಕ್ಕಾದರೆ ಮಿತಿಯಿದೆ , ದಣಿವಾದರೆ ಮುನಿಸಿ ಮಲಗುತ್ತೆ : ಅನಾರೋಗ್ಯದ ನೆಪದಲ್ಲಿ. ಆದರೆ ಮನಸ್ಸಿಗೆ ದಣಿವು,ಮುಪ್ಪು ಎರಡೂ ಇಲ್ಲ. ಮನಸ್ಸನ್ನು ಮಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. Negative ನಿಂದ Positive ಕಡೆ ಎಳೆಯುವ ಪ್ರಕ್ರಿಯೆ ಅನವರತ,ಅನಂತ.

ಮನಸ್ಸಿನ ಮೂರು ಸ್ಥಿತಿಯನ್ನು ನಾವು ತಿಳಿಯಬೇಕು. Conscious
Unconscious
Subconscious

ಇಡೀ ದಿನ ಎಚ್ಚರವಾಗಿರುವುದು conscious , ಮಲಗಿದ ಮೇಲೆ unconscious , ಎಚ್ಚರವಾಗಿದ್ದಾಗ ಏನೇನೋ ಲೆಕ್ಕ ಹಾಕುತ್ತ ನಮ್ಮನ್ನು ಆಲೋಚನೆಗಳ ಕೂಪಕೆ ದೂಡುವ ಸುಪ್ತಪ್ರಜ್ಞೆ subconscious. ಮನೋಶಾಸ್ತ್ರ ಬೇರೆ, ವೈಜ್ಞಾನಿಕ ನೆಲೆಯಲ್ಲಿ ಹೇಳುತ್ತದೆ ಆದರಿದು ಇದು ನನ್ನ ಗ್ರಹಿಕೆ. ತಪ್ಪಂತು ಅಲ್ಲ. ನಾವು ಹಿಡಿತ ಸಾಧಿಸಬೇಕಾದದ್ದು ನಮ್ಮ ಮನಸ್ಸಿನ ಮೇಲೆ ಮಾತ್ರ.

ಅದರಲ್ಲೂ ವಿಶೇಷವಾಗಿ ನಮ್ಮ ಸುಪ್ತಮನಸ್ಸಿನ ಮೇಲೆ ಹಿಡಿತ ಸಾಧಿಸಿ ಸಕಾರಾತ್ಮಕ ಆದೇಶ ನೀಡುತ್ತಿರಬೇಕು ಅಂದರೆ ಪದೇ ಪದೇ ಅಂದುಕೊಳ್ಳುತ್ತ ಇರಬೇಕು. ಅನಿರೀಕ್ಷಿತ ಕೆಟ್ಟ ಘಟನೆಗಳು ನಡೆಯಲಿಕ್ಕೆ ನಮ್ಮ ಸುಪ್ತಮನಸ್ಸಿನ ಆಲೋಚನಾ ಕ್ರಮವೇ ಕಾರಣ. ಇದರ ಪರಿಣಾಮ, ಯಾರಾದರೂ ಅನಿರೀಕ್ಷಿತ ನೋವು ಕೊಟ್ಟಾಗ ಮನಸ್ಸು ಉಗ್ರರೂಪ ತಾಳುತ್ತದೆ. ದ್ವೇಶಾಸುಯೆ ಉಕ್ಕಿ ಹರಿದು disturb ಆಗಿಬಿಡುತ್ತೇವೆ.

ಇಂತಹ ಅವಮಾನಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಒಳಗಣ್ಣಿನ ಮೂಲಕ ಸುಪ್ತಮನಸಿನ ನೆರವಿನೊಂದಿಗೆ ನಾವೇ ರಮಿಸಿಕೊಂಡು , ಮನಸ್ಸಿನ ಪರದೆಯ ಮೇಲೆ ಸಕಾರಾತ್ಮಕ ಮಾಯಾಲೋಕ ಸೃಷ್ಟಿಸಿಕೊಳಬೇಕು. ಇದನ್ನು ಭ್ರಮೆ ಎಂದು ಭಾವಿಸಬಾರದು.

It is the right way to train our subconscious mind through positive visualisation. We have to repeat until we are consoled.

ಬನ್ನಿ,ಮನಸ್ಸನ್ನು ಬೆಸೆದು,ಅರಳಿಸಿ,ರಮಿಸಿ ಖುಷಿಯಾಗಿಡಲು–

ನಮಗೆ ನಾವೇ ಮಾತಾಡಿಕೊಳ್ಳೋಣ

ಸಿದ್ದು_ಯಾಪಲಪರವಿ.

LEAVE A REPLY

Please enter your comment!
Please enter your name here