ವರಮಹಾಲಕ್ಷ್ಮಿ ಹಬ್ಬ..ಸಿದ್ಧತೆ ಹೀಗಿರಲಿ

0
366

ರಾಜ್ಯದ ಸಮಸ್ತ ವೀಕ್ಷಕರಿಗೆ ಶ್ರೀ ರವಿಶಂಕರ್ ಗುರೂಜಿಯವರು ಹಬ್ಬವನ್ನು ಹೇಗೆ ಆಚರಣೆ ಮಾಡಬೇಕು. ಯಾವ ರೀತಿಯಲ್ಲಿ ಲಕ್ಷ್ಮಿಯನ್ನು ಕೂರಿಸಬೇಕು, ಹೇಗೆ ಪೂಜೆ, ಪುನಸ್ಕಾರವನ್ನು ನೆರವೇರಿಸಬೇಕು ಎಂಬುದನ್ನು ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ.

ಹಬ್ಬದ ಸಿದ್ಧತೆಗಳು ಹೀಗಿರಲಿ

ವರಮಹಾಲಕ್ಷ್ಮಿ ಹಬ್ಬ ಎಂದರೆ ಒಂದು ಪರಿಪೂರ್ಣ ಸ್ವರೂಪ. ಅಂದಿನ ದಿನ ಲಕ್ಷ್ಮಿಯನ್ನು ಮುಂಜಾನೆಯೇ ಕೂರಿಸಬೇಕು, ಏಕೆಂದರೆ ರಾಹುಕಾಲ ಶುರುವಾಗಲಿದೆ. ರಾಹುಕಾಲದ ಪೂಜೆ ಲಕ್ಷ್ಮಿಗೆ ಒಲ್ಲದು.! ಬೆಳಗಿನ ಜಾವವೇ ಎದ್ದೇಳಬೇಕು, ಜೊತೆಗೆ ಹಲವು ಸಿದ್ಧತೆಗಳನ್ನು ಪರಿಪೂರ್ಣವಾಗಿ ಮಾಡಿಕೊಳ್ಳಬೇಕು. ಹಬ್ಬಕ್ಕೆ ಬೇಕಾದ ವಸ್ತು,ತರಕಾರಿಗಳು, ಹಣ್ಣು, ಹೂವು ಖರೀದಿ ಮಾಡುವುದು ಸೂಕ್ತ. ಗುರುವಾರ ಸಂಜೆಯೇ ನೀವು ಬೇಗನೆ ಊಟ ಮುಗಿಸಿ ಮಲಗಬೇಕಾಗಿದೆ. ಶುಕ್ರವಾರ ಬೆಳಗಿನ ಜಾವ ಬೇಗ ಎದ್ದು ಹಬ್ಬಕ್ಕೆ ತಯಾರಿ ಮಾಡಿಕೊಳ್ಳಬೇಕು. ಹಲವರು ಕಳಶ ಇಟ್ಟು ಪೂಜೆ ಮಾಡುತ್ತೀರಿ, ಇನ್ನು ಕೆಲವರು ಮುಖವಾಡ ಇಟ್ಟು ಪೂಜೆ ಮಾಡುತ್ತಾರೆ. ಆದ್ದರಿಂದ ಮೊದಲೇ ಅದಕ್ಕೆ ಸಿದ್ಧತೆಗಳನ್ನು ತಂದಿಟ್ಟುಕೊಳ್ಳುವುದು ಒಳ್ಳೆಯದು. ಲಕ್ಷ್ಮಿಗೆ ಪೂಜೆ ನೆರವೇರಿಸುವುದರ ಜೊತೆಗೆ ಗಣಪನನ್ನು ಇಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ.! ವಿನಾಯಕನಿಗೆ ಗರಿಕೆ ಇಟ್ಟು ಪೂಜೆ ನೆರವೇರಿಸಿದರೆ, ನೀವು ಅಂದುಕೊಂಡಂತಹ ಕೆಲಸಗಳು ಈಡೆರುತ್ತವೆ.

*ಈ ಸಮಯದಲ್ಲಿ ಪೂಜೆ ಆರಂಭಿಸುವುದು ಸೂಕ್ತ

ಬೆಳಗ್ಗೆ ೮:೩೦ರೊಳಗೆ ಒಂದು ದುಷ್ಟ ಮುಹೂರ್ತ ಇದೇ. ಹಾಗಾಗಿ ೮:೩೦ರೊಳಗೆ ನಿಮ್ಮ ಪೂಜೆ ಸಂಪೂರ್ಣವಾಗಿ ಮುಗಿದಿರಬೇಕು! ಯಾಕೆಂದರೆ ಲಕ್ಷ್ಮಿ ಅನುಷ್ಠಾನ ಪ್ರಿಯೆ, ಹಾಗಾಗಿ ನೀವು ಬೆಳಗ್ಗೆ ೮:೩೦ರೊಳಗೆ ಮುಗಿಸಲೇಬೇಕು. ಯಾವುದೇ ರೀತಿಯ ಕಾರಣ ನೀಡುವುದು ಸೂಕ್ತವಲ್ಲ.! ಪೂಜಾ ಸಾಮಗ್ರಿಗಳನ್ನು,ಹಣ್ಣು- ಹಂಪಲು, ಹೂವು ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸೂರ್ಯೋದಯಕ್ಕಿಂತ ಮುನ್ನವೆ ಪೂಜೆ ಪುನಸ್ಕಾರವನ್ನು ನೆರವೇರಿಸಿದರೆ ಇನ್ನಷ್ಟು ಲಾಭವನ್ನು ನೋಡುತ್ತೀರಿ. ಮನೆಯಲ್ಲಿ ಲಕ್ಷ್ಮಿ ಕೂರಿಸಿದವರು, ಮದುವೆಯಾಗದ ಹೆಣ್ಣು ಮಕ್ಕಳಿಂದ ಪೂಜೆ ಮಾಡಿಸಿದರೆ ಬಹಳ ಶ್ರೇಷ್ಠ. ತುಪ್ಪದ ನೈವೇದ್ಯ ಅಮ್ಮನಿಗೆ ತುಂಬಾ ಇಷ್ಟ. ಒಂದು ರಂಗೋಲಿ ಇಲ್ಲದ ಪೂಜೆ ಪೂಜೆಯೆ ಅಲ್ಲ. ಗೋ ಪೂಜೆ ಮಾಡಿದರೆ ಸರ್ವಶ್ರೇಷ್ಠ. ಸಕಲ ವರಮಹಾಲಕ್ಷ್ಮಿ ಹಬ್ಬದ ಪರಿಪೂರ್ಣ ನಿಮ್ಮ ಮೇಲೆ ಇರುತ್ತದೆ. ಒಂದು ಬಾರಿ ಪೂಜೆಗೆ ಕುಳಿತರೆ ಕಟ್ಟುನಿಟ್ಟಾಗಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಮದ್ಯಕ್ಕೆ ಎದ್ದರೆ ನಿಮಗೆ ಕಂಟಕವಾಗಲಿದೆ ಜಾಗೃತ. ನಿಮಗೆ ಇದು ನೆನಪಿರಲಿ ಕಾರಣಾಂತರಗಳಿಂದ ಮನೆಯಲ್ಲಿ ಸೂತಕ, ಭಿನ್ನ ಏನಾದರೂ ಮಹತ್ವ ಕಾರಣಗಳಿದ್ದರೆ ಪರವಾಗಿಲ್ಲ.

ಲಕ್ಷ್ಮಿಗೆ ಈ ಹೂವುಗಳನ್ನು ಇಡಬಾರದು.!!

ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಆದಷ್ಟು ಮಡಿಯಿಂದ ಶುಭ್ರವಾಗಿ ತೆಗೆದುಕೊಂಡು ಬರುವುದು ಸೂಕ್ತ. ಅಂಟು- ನಂಟು ಮಾಡೋದು ಸರಿಯಲ್ಲ. ಅಕಸ್ಮಾತ್ ಸೂತಕ ಆವರಿಸಿದ್ದರೆ, ಎಚ್ಚರವಹಿಸಿ.! ಹಬ್ಬವನ್ನು ನಿಯಮವಾಗಿ ಆಚರಿಸದಿದ್ದರೆ, ಮನೆಯಲ್ಲಿ ಬೆಂಕಿ ಬಿರುಗಾಳಿ ಏಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಪೂಜೆಗೆ ಭಂಗವಾದರೆ ನಿಮಗೆ ಅವಮಾನ,ಅಪಮಾನದ ಸಂಕೇತಗಳು ಉಂಟಾಗಲಿವೆ. ಬುಧವಾರ ರಾತ್ರಿ,ಗುರುವಾರ ರಾತ್ರಿ, ಶುಕ್ರವಾರ ರಾತ್ರಿ ಆದಷ್ಟು ನೆಲದ ಮೇಲೆ ಚಾಪೆ ಹಾಸಿ ಮಲಗುವ ಅಭ್ಯಾಸ ಮಾಡಿಕೊಳ್ಳಿ ಒಳ್ಳೆಯದು. ಮೂರು ದಿನಗಳ ಕಾಲ ಮಂಚದ ಮೇಲೆ ಮಲಗುವ ಅಭ್ಯಾಸ ಬಿಟ್ಟುಬಿಡಿ. ಅಡುಗೆಗೆ ಬೇಕಾದ ವಸ್ತುಗಳನ್ನು ಮುಂಚಿತವಾಗಿ ತಂದಿಟ್ಟುಕೊಳ್ಳಿ. ೮ ಗಂಟೆಯೊಳಗೆ ಊಟ ಉಪಚಾರವನ್ನು ಮುಗಿಸಿಕೊಳ್ಳುವುದು ಸೂಕ್ತ. ಲಕ್ಷ್ಮಿಗೆ ಮಧ್ಯಾಹ್ನದ ಹೊತ್ತು ಪೂಜೆ ಮಾಡಬಾರದು. ಮನೆಯಲ್ಲಿ ಮಾಂಗಲ್ಯ ದೋಷವಿರುವವರು ಯಾವುದೇ ಕಾರಣಕ್ಕೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಬಾರದು. ಯಾರು ಗೋವಿಗೆ ಅವಮಾನ ಮಾಡಿರುತ್ತಾರೆ, ಗೋವನ್ನು ದ್ವೇಷಿಸುತ್ತಾರೆ,ಗೋ ಪೂಜೆ ಮಾಡದೆ ಇರುತ್ತಾರೋ! ಅವರಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವ ಯೋಗ್ಯತೆಯಿಲ್ಲ. ಯಾಕೆಂದರೆ ಲಕ್ಷ್ಮಿ ನಿಂತಿರುವ ಪರಮಪೂಜ್ಯ ಸ್ಥಳ ಅಂದರೆ ಅದು ಹಸುವಿನ ಗೋಮೂತ್ರ ಹೋಗುವಂತ ಸ್ಥಳ. ಮಾಂಗಲ್ಯದಲ್ಲಿ ತಾಯಿ ಜಗನ್ಮಾತೆ ನೆಲೆಸಿದ್ದಾಳೆ. ಹಾಗಾಗಿ ಮಾಂಗಲ್ಯಕ್ಕೆ ಅವಮಾನ ತೋರಿದವರು ಯಾವುದೇ ಕಾರಣಕ್ಕೂ ಪೂಜೆ ಮಾಡುವುದಕ್ಕೆ ಅನರ್ಹರು. ವರಮಹಾಲಕ್ಷ್ಮಿ ಪೂಜೆಗೆ ಮುಳ್ಳಿನ ಹೂವುಗಳನ್ನು, ಒಣಗಿದ ಹೂವನ್ನು, ಕೊಳೆತು ಹೋದ ಹೂವುಗಳನ್ನು, ಆರ್ಟಿಫಿಷಿಯಲ್ ಹೂವುಗಳನ್ನು ಇಡಬೇಡಿ, ಇದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಕಮಲ ಹೂವು ಲಕ್ಷ್ಮಿಗೆ ಶ್ರೇಷ್ಠ.

ಲಕ್ಷ್ಮಿ ಪೂಜೆ ಯಶಸ್ವಿಯಾಗಿ ನೆರವೇರಿಸಲು ಈ ಅಭ್ಯಾಸಗಳನ್ನು ಮಾಡಬಾರದು.!

ಲಕ್ಷ್ಮಿ ಪೂಜೆ ನೆರವೇರಿಸುವುದರಲ್ಲಿ ಎಡವಟ್ಟು ಮಾಡಿಕೊಂಡರೆ ನಿಮ್ಮ ದಾಂಪತ್ಯ ಜೀವನದಲ್ಲಿ ಮೊದಲನೇ ಬಿರುಗಾಳಿ ಉಂಟಾಗುತ್ತದೆ ಎಚ್ಚರ.! ಹಣಕಾಸನ್ನು ಲಕ್ಷ್ಮಿ ಮುಂದೆ ಇಟ್ಟು ಪೂಜೆ ನೆರವೇರಿಸುತ್ತೀರಿ ಅದರ ಫೋಟೋವನ್ನು ಕ್ಲಿಕ್ಕಿಸಬೇಡಿ ಅದು ಶೋಭೆಯಲ್ಲ. ಲಕ್ಷ್ಮಿ ಫೋಟೋ ಕೂಡ ತೆಗೆಯುವ ಹಾಗಿಲ್ಲ ಅದು ಸಮ್ಮತವಲ್ಲ! ನೀವು ಎಷ್ಟು ನಿಯಮವಾಗಿ ಪೂಜೆ ಪುನಸ್ಕಾರವನ್ನು ಪಾಲಿಸುತ್ತೀರಿ, ಅಷ್ಟು ಒಳ್ಳೆಯದಾಗಲಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ನೀವು ಅತಿಥಿಗಳ ಆಗಮನವನ್ನು ನಿರೀಕ್ಷಿಸಬೇಕು. ಬಾಗಿಲನ್ನು ಯಾವುದೇ ಕಾರಣಕ್ಕೂ ಹಾಕಬೇಡಿ. ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿದ್ದೀರಿ ಅಂದರೆ ಸಾಕಷ್ಟು ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಇನ್ನೊಬ್ಬರ ಪೂಜೆಯನ್ನು ವಿಮರ್ಶೆ ಮಾಡಬೇಡಿ, ನಿಮಗೇನು ಅನಿಸುತ್ತದೆ, ನಿಮಗೆ ಎಷ್ಟು ಶಕ್ತಿಯಿದೆ ಅಷ್ಟರ ಮಟ್ಟಿಗೆ ಮಾಡಿ. ಮನೆಯಲ್ಲಿ ತಯಾರಿಸಿದ ಪ್ರಸಾದವನ್ನು ಸ್ವೀಕರಿಸಬೇಕು! ಹೊರಗಡೆ ಹೋಟೆಲ್ ಊಟಗಳನ್ನು ನೀವು ಮಾಡಬಾರದು ಮನೆಯ ಪ್ರಸಾದವನ್ನೇ ಸೇವಿಸಬೇಕು. ಅನಂತರ ಮಲಗುವ ಮುನ್ನ ಒಂದು ಆರತಿ ತೆಗೆದು ಕಳಶವನ್ನು ಕದಲಿಸಬೇಕು, ಸಣ್ಣದಾಗಿ ಮುಖವಾಡವನ್ನು ಕದಲಿಸಬೇಕು. ನಂತರ ಶನಿವಾರ ಬೆಳಗ್ಗೆ ಎದ್ದ ಕೂಡಲೇ ಮತ್ತೊಂದು ಪೂಜೆ ಮಾಡಿ ವಿಸರ್ಜನೆ ಮಾಡಬೇಕು. ವಿಸರ್ಜನೆ ಮಾಡಿದ ಬಳಿಕ ತೀರ್ಥವನ್ನು ನೀವೇ ಸೇವನೆ ಮಾಡಿ, ನಿಮ್ಮ ಕುಟುಂಬದವರು ಸೇವನೆ ಮಾಡುವುದು ಸೂಕ್ತ. ಹಬ್ಬದ ದಿನದಂದು ಒಂದು ಗೋವಿಗೆ ಊಟವನ್ನು ಸಲ್ಲಿಸಿ, ಐದು ಜನ ಮುತ್ತೈದೆಯರಿಗೆ ಪ್ರಸಾದವನ್ನು ಉಣಬಡಿಸಿದರೆ ಮಹಾಲಕ್ಷ್ಮಿಯೇ ನಿಮ್ಮ ಮನೆಗೆ ಬಂದಂತೆ. ಮನೆಗೆ ಯಾವ ಕೆಟ್ಟ ದೃಷ್ಟಿಯೂ ತಾಗುವುದಿಲ್ಲ.!

ಲಕ್ಷ್ಮಿಗೆ ಯಾವ ಬಣ್ಣ ಶ್ರೇಷ್ಠ ಗೊತ್ತಾ.?

ಲಕ್ಷ್ಮಿಗೆ ಕೆಂಪು ಅಂದರೆ ಬಹಳ ಇಷ್ಟ, ಹಾಗಾಗಿ ಕೆಂಪು ಸೀರೆ ಉಡಿಸಲು ಯೋಚನೆ ಮಾಡಿ. ಕೆಂಪು ಬಳೆ, ಕೆಂಪು ಪುಷ್ಪಗಳನ್ನು ಲಕ್ಷ್ಮಿಗೆ ಹಾಕುವುದು ಸೂಕ್ತ. ಕೆಂಪು ಅಂದ ಕೂಡಲೇ ಗುಲಾಬಿಯನ್ನೇ ತಂದು ಮುಡಿಸಬೇಡಿ. ಅದರ ಬದಲು ದಾಸವಾಳ, ಶ್ವೇತವರ್ಣದ ಆರು ಅಥವಾ ಒಂದು ಕಮಲವನ್ನು ಇಟ್ಟು ಪೂಜೆ ಮಾಡಿ. ಮನೆಯಲ್ಲಿ ಗೋ ಪ್ರೋಕ್ಷಣೆ ಮಾಡುವುದು ಬಹಳ ಶ್ರೇಷ್ಠ. ಯಾರಾದರೂ ಆಚಾರ್ಯರು ನಿಮ್ಮ ಮನೆಗೆ ಆಕಸ್ಮಿಕವಾಗಿ ಇಂದು ಬಂದರೆ ಅದಕ್ಕಿಂತ ಭಾಗ್ಯೋದಯ ನಿಮಗೆ ಇಲ್ಲ. ನಿಮಗೆ ಎಂಥ ಕಷ್ಟವಿದ್ದರೂ ಅದು ದೂರವಾಗಲಿದೆ. ಸಂಧ್ಯಾಕಾಲ ಆದ ಬಳಿಕ ಒಬ್ಬ ಗುರುವನ್ನು ಮನೆಗೆ ಕರೆಸಿ ತಾಂಬೂಲವನ್ನು ಕೊಟ್ಟು, ಆಶೀರ್ವಾದ ಪಡೆದುಕೊಳ್ಳುವುದರಿಂದ ಪರಿಪೂರ್ಣ ಗಜಕೇಸರಿ ಯೋಗದ ಪರಿಪೂರ್ಣತೆ ನಿಮಗೆ ಲಭಿಸುತ್ತದೆ.
ನಾಡಿನ ಸಮಸ್ತ ಕನ್ನಡಿಗರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ ಒಳ್ಳೆಯದಾಗಲಿ.

ಇನ್ನು ಹಬ್ಬದ ಬಗ್ಗೆ ಹೆಚ್ಚು ಮಾಹಿತಿಗಾಗಿ ಹಾಗೂ ಶ್ರೀ ರವಿಶಂಕರ್ ಗುರೂಜಿ ಅವರ ಕಾರ್ಯಕ್ರಮದ ವಿಶೇಷತೆಗಳನ್ನು ವೀಕ್ಷಿಸಲು ‘ Namma kannada digital media’ youtube channel ‘ಗೆ subscribe ಆಗಿ ಹಾಗೂ ಎಲ್ಲಾ ಮಾಹಿತಿಗಳ ಅಪ್ಡೇಟ್’ಗಳಿಗಾಗಿ ಪಕ್ಕದಲ್ಲೇ ಇರುವ ಬೆಲ್ ಬಟನ್ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here