ಉಪ್ಪು ನೀರಿನಲ್ಲಿ ಬೆಳೆದ ಕಾಫಿ ಬಗ್ಗೆ ಗೊತ್ತಾ..?

0
242

ಸುತ್ತಲೂ ಸಮುದ್ರದ ನೀರು ಇರುವ ದೇಶಗಳ ಆದಾಯ ಪ್ರವಾಸೋದ್ಯಮದ ಮೇಲೆಯೇ ನಿಂತಿರುತ್ತದೆ. ಆದರೆ ಸರಿ ಸುಮಾರು ಎಂಬತ್ತು ದ್ವೀಪಗಳ ಸಮೂಹ ದೇಶವೊಂದು ಕೃಷಿಯನ್ನೇ ಪ್ರಧಾನವಾಗಿಸಿಕೊಂಡು ಮುನ್ನಡೆಯುತ್ತಿದೆ. ಆಸ್ಟ್ರೇಲಿಯಾ ಖಂಡಕ್ಕೆ ಸೇರಿದ ಈ ದೇಶ ಅತ್ಯುತ್ತಮವಾದ ಕಡಲ ತೀರವನ್ನು ಹೊಂದಿದ್ದು, ಇಂದು ಲಕ್ಷಾಂತರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹವಳ ದಿಬ್ಬಗಳ ಆಕರ್ಷಕ ತೀರಗಳಲ್ಲಿ ರೆಸಾರ್ಟ್‍ಗಳು ಹೆಚ್ಚಾಗಿವೆ. ಆದರೆ ಆಶ್ಚರ್ಯ ಅಂದರೆ ಈ ದೇಶದಲ್ಲಿ ಕೇವಲ ಹತ್ತು ದ್ವೀಪಗಳು ಮಾತ್ರ ದೊಡ್ಡದಾಗಿದ್ದು ಹೆಚ್ಚು ಜನಸಂದಣಿಯನ್ನು ಹೊಂದಿದೆ.

ಈ ದೇಶವನ್ನು ಯುರೋಪಿಯನ್ನರು ‘ನ್ಯೂ ಹೈಬ್ರಿಡ್ಸ್’ ಎಂದು ಕರೆದರೆ, ಆದರೆ ಇಂದು ‘ವನೌತು’ ಎಂದು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. ಏಷ್ಯಾದಿಂದ ಕ್ರಿಸ್ತ ಪೂರ್ವ 300 ರಲ್ಲಿ ವನೌತುಗೆ ಹೋದ ಜನರು ಅಲ್ಲಿಯೇ ನೆಲೆ ನಿಂತರು, ಬಳಿಕ 1606ರ ಸುಮಾರಿಗೆ ಪೋರ್ಚುಗೀಸರು ವನೌತು ಪ್ರವೇಶಿಸಿದ್ರು ಎಂಬುದು ಇತಿಹಾಸದ ಮಾಹಿತಿ. ಬ್ರಿಟಿಷ್ ಯಾತ್ರಿಕನೊಬ್ಬ ಈ ಸುಂದರ ಕಡಲತೀರದ ದ್ವೀಪ ಸಮೂಹಕ್ಕೆ ಬಂದಾಗ ‘ನ್ಯೂ ಹೈಬ್ರಿಡ್ಸ್’ ಎಂದು ಕರೆದ. ಅಲ್ಲಿಂದಿಚೆಗೆ ಬ್ರಿಟಿಷರು ವಿಹಾರಕ್ಕಾಗಿ ಈ ದ್ವೀಪ ಸಮೂಹಗಳನ್ನು ಬಳಸಿಕೊಂಡರು.

ದುರಂತ ಎಂದರೆ 19 ನೇ ಶತಮಾನದಲ್ಲಿ ಇಲ್ಲಿನ ಮೂಲನಿವಾಸಿಗಳು ನಿರ್ನಾಮವಾಗಿ ಹೋದರು. ಮುಂದೆ ವನೌತು ಹಕ್ಕು ಸಾಧನೆಗಾಗಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ಯುದ್ಧವೇ ನಡೆಯಿತು. ಎರಡನೇ ವಿಶ್ವ ಯುದ್ಧದ ಬಳಿಕ ಅಲ್ಲಿನ ಸ್ಥಳೀಯರು ಹೋರಾಟ ಆರಂಭಿಸಿದ್ರು, ಪ್ರಜಾಪ್ರಭುತ್ವ ಸರಕಾರಕ್ಕೆ ಆಗ್ರಹಿಸಿದ್ರು. ಇದರ ಪಲವಾಗಿ 1980ರ ಸುಮಾರಿಗೆ ವನೌತು ತನ್ನದೇ ಸರ್ಕಾರ ರಚಿಸಿಕೊಂಡಿತು. ಸುತ್ತಲೂ ಸಾಗರ ಉಪ್ಪು ನೀರು ಮಧ್ಯದಲ್ಲಿನ ಕೆಲವು ದ್ವೀಪಗಳಲ್ಲಿ ಮಾತ್ರ ಫಲವತ್ತಾದ ಭೂಮಿಯಿದ್ದ ಕಾರಣ ಸ್ಥಳೀಯರು ಕೃಷಿಯಲ್ಲಿ ತೊಡಗಿಕೊಂಡಿದ್ದರು.

ಅತ್ಯುತ್ತಮವಾದ ಕಾಫಿ ಪ್ಲಾಂಟೇಷನ್ ಮತ್ತು ತೆಂಗು, ಬಾಳೆಯ ಕೃಷಿಯನ್ನು ಅವಲಂಭಿಸಿದ್ರು. ಪ್ರವಾಸೋದ್ಯಮ ಮತ್ತು ಸಾಗರೋತ್ಪನ್ನ ಉದ್ಯಮ ಲಾಭದಾಯಕವಾಗಿದ್ದರೂ ಇಲ್ಲಿನ ಜನರ ಮೂಲ ಆದಾಯ ಮಾತ್ರ ಇಂದಿಗೂ ಕೃಷಿಯಲ್ಲಿಯೇ ಇದೆ. ಕೃಷಿಯಲ್ಲಿ ಯಶಸ್ಸು ಪಡೆಯಲು ಹವಣಿಸುತ್ತಿರುವ ಜಗತ್ತಿನ ಅದೆಷ್ಟೋ ದೇಶಗಳು ಸಿಹಿನೀರಿನ ನದಿಗಳನ್ನು ಹೊಂದಿದ್ದರು ಸಾಧನೆ ಮಾಡಲಾಗಿಲ್ಲ ಹಾಗಿದ್ರೂ ಉಪ್ಪು ನೀರಿನಿಂದ ಸುತ್ತುವರಿದ ವನೌತು ಮಾತ್ರ ಕೃಷಿಯಲ್ಲಿ ಸಾಧನೆ ಮಾಡಿ ತೆಂಗು ಬಾಳೆಗಳಿಂದಲೇ ಆದಾಯ ಕಾಣುತ್ತಿರುವುದು ಸ್ಫೂರ್ತಿದಾಯಕ.

LEAVE A REPLY

Please enter your comment!
Please enter your name here