ಸದ್ಯ ಹೇಗಿದೆ ಕಣಿವೆ ರಾಜ್ಯ ಕಾಶ್ಮೀರ..?! ಫುಲ್ ಡಿಟೇಲ್ಸ್.!

0
111

ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿದ ನಂತರ ಕಾಶ್ಮೀರ ಹೇಗಿದೆ..? ಎಂಬ ಮಾತು ಎಲ್ಲರ ಕುತೂಹಲ ಕೆರಳಿಸಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಕಾಶ್ಮೀರಿಗಳು ತಿರುಗಿ ಬೀಳಬಹುದು ಮತ್ತು ಭೀಕರ ಹಿಂಸಾಚಾರಕ್ಕೆ ಕಾಶ್ಮೀರ ಸಾಕ್ಷಿಯಾಗಬಹುದು ಎಂಬ ವಾದವನ್ನು ಹಲವಾರು ಜನರು ವ್ಯಕ್ತ ಪಡಿಸಿದ್ದರು. ಆದರೆ ಕಾಶ್ಮೀರದಲ್ಲಿ ಸದ್ಯ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಸೇನಾ ಸರ್ಪಗಾವಲು ಹಾಕಲಾಗಿದೆ. ಹೀಗಾಗಿ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಆದರು ಕೆಲ ಮಾಹಿತಿಗಳು ಬಹಿರಂಗವಾಗಿವೆ. ಅದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.

ಇನ್ನು ಕೆಲವು ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿವೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಗಲಾಟೆಯಾಗ್ತಿದೆ, ಕಲ್ಲು ತೂರಾಟ ನಡೆಯುತ್ತಿದೆ, ಅಲ್ಲಿನ ಜನರು ಮನೆಯಿಂದ ಹೊರಬರಲಾರದೇ ಕಷ್ಟಪಡುತ್ತಿದ್ದಾರೆ ಎನ್ನುವ ಫೇಕ್ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಆರ್ಟಿಕಲ್ 370 ರದ್ದು ಪಡಿಸಿದ ಕ್ರಮಕ್ಕೆ ಕಾಶ್ಮೀರಿಗಳು ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ನಂತರವೂ ಶಾಂತಿ ಕಾಪಾಡಿದ್ದ ಅಲ್ಲಿನ ಮಹಾಜನತೆ, ಪಾಕಿಸ್ತಾನ-ಪ್ರತ್ಯೇಕತಾವಾದಿಗಳ ಕನಸನ್ನು ಭಂಗಗೊಳಿಸಿ ಭಾರತ ಮಾತೆಯ ಮಡಿಲಲ್ಲಿ ಶಾಂತಿಯುತ ಹಬ್ಬ ಆಚರಿಸಿದ್ದಾರೆ.

ಹೌದು, ಬಕ್ರಿದ್ ಹಬ್ಬದ ನಿಮಿತ್ತ ಜಮ್ಮು-ಕಾಶ್ಮೀರದ ಜನತೆ ತಮ್ಮ ಮನೆ ಸಮೀಪದ ಮಸೀದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾರ್ಥನೆ ಮಾಡಿ ಹಬ್ಬ ಆಚರಿಸಿದ್ದಾರೆ. ಬರಾಮುಲ್ಲಾದಲ್ಲಿ 10 ಸಾವಿರ ಜನರು ಹಾಗು ಬಂಡಿಪೋರಾದಲ್ಲಿ 5 ಸಾವಿರ ಜನರು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದೆ. ಅನಂತನಾಗ್, ಬರಾಮುಲ್ಲಾ, ಬುಡಗಾಮ್ ಹಾಗೂ ಬಂಡಿಪೋರ್‍ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈದ್ ಆಚರಿಸಲಾಯಿತು. ಕಾಶ್ಮೀರದ ಪರಿಸ್ಥಿತಿ ಬಗ್ಗೆ ಸುಳ್ಳು ಸುದ್ದಿಗಳು, ದುರುದ್ದೇಶಪೂರಿತ ಸುಳ್ಳುಗಳನ್ನು ಪೋಸ್ಟ್ ಮಾಡುವ ಎಲ್ಲಾ ಅಕೌಂಟ್‍ಗಳನ್ನು ಸಸ್ಪೆಂಡ್ ಮಾಡುವಂತೆ ಮಾಹಿತಿ ಕೇಂದ್ರ ಸರ್ಕಾರ ಟ್ವಿಟ್ಟರ್ ಸಂಸ್ಥೆ ಬಳಿ ಮನವಿ ಮಾಡಿದೆ.

ಇನ್ನು ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಜಾಸ್ತಿಯಾಗಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಜಮ್ಮು-ಕಾಶ್ಮೀರ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಕಿಡಿಕಾರಿದ್ದಾರೆ. “ರಾಹುಲ್ ಗಾಂಧಿಯವರಿಗಾಗಿಯೇ ವಿಶೇಷ ಹೆಲಿಕಾಪ್ಟರ್ ಒಂದನ್ನು ಕಳಿಸಿಕೊಡ್ತೇವೆ. ಅದರಲ್ಲಿ ಕಾಶ್ಮೀರಕ್ಕೆ ಬಂದು ಇಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ತಿಳಿದುಕೊಂಡು ನಂತರ ಮಾತನಾಡಲಿ” ಎಂದು ಟಾಂಗ್ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಸದ್ಯಕ್ಕೆ ಕಾಶ್ಮೀರ ಶಾಂತಿಯುತವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here