ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿ ಇದ್ದೀರಾ ಎಂದು ತಿಳಿಸಿದಾಗ ವಾಜಪೇಯಿ ಹೇಳಿದ್ದೇನು ಗೊತ್ತಾ..?

0
241

ಭಾರತೀಯ ರಾಜಕಾರಣದ ಅಜಾತಶತ್ರು, ಶ್ರೇಷ್ಠ ವಾಗ್ಮಿ, ದಾರ್ಶನಿಕ ಎಂದೆಲ್ಲ ಕರೆಸಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 93 ವರ್ಷದ ವಾಜಪೇಯಿ ಅವರು 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದಾಗಿ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಅವರು, ಕಳೆದ ಎರಡು ತಿಂಗಳಿನಿಂದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆಯಷ್ಟೇ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಆರೋಗ್ಯ ವಿಚಾರಿಸಿದ್ದರು. ಮಾದರಿ ಸಂಸತ್​ ಪಟುವಾಗಿದ್ದ ಅವರು ಉತ್ತಮ ವಾಗ್ಮಿಯೂ ಕೂಡ. ಇಡೀ ದೇಶದುದ್ದಗಲಕ್ಕೂ ಸಂಚರಿಸಿ ಹಿಂದು ಸಿದ್ಧಾಂತದಡಿ ಬಿಜೆಪಿಯನ್ನು ಸಂಘಟಿಸಿ ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದ್ದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿರಿಯ ನಾಯಕರಾಗಿದ್ದ ವಾಜಪೇಯಿ, ಬದುಕಿದ್ದಷ್ಟೂ ದಿನ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿದ್ದರು. ಅಧಿಕಾರ, ಹಣಕ್ಕಾಗಿ ಆಸೆ ಪಡಲಿಲ್ಲ. ಭ್ರಷ್ಟಾಚಾರವೆಂಬುದನ್ನು ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಅನಾರೋಗ್ಯದಿಂದ ಹೈರಾಣಿಗದ್ದ ಅವರು, ಈಗ ಅಸುನೀಗಿದ್ದರೂ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ. ಹೀಗೆ ಇವರನ್ನು ಪತ್ರಕರ್ತರೊಬ್ಬರು ಖಾಸಗಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಇವರ ಉತ್ತರ ಕೇಳಿಯೇ ಆತ ಬೆರಗಾಗಿದ್ದ.

ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿ ನೀವಿದ್ದೀರಾ ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ ಅಟಲ್ ಬಿ ವಾಜಪೇಯಿ ಹೇಳುತ್ತಾರೆ, ಸಾವೇ, ಸಾವಿಗೆ ಯಾಕೆ ಹೆದರಬೇಕು ಇಂದಲ್ಲ ನಾಳೆ ಅದು ಬರಲೇಬೇಕು, ಒಂದುವೇಳೆ ಸಾವು ಆತಂಕವಾದಿಗಳಿಂದ ಸಾವು ಸಂಭವಿಸಿದರೆ ಸಾಯುತ್ತಾ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ, ಸಾದ್ಯವಾದರೆ ಮತ್ತೆ ನನ್ನನ್ನು ಇದೆ ದೇಶದಲ್ಲಿ ಹುಟ್ಟಿಸು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿ, ಭಾರತದಿಂದ ಅದನ್ನ ತೊಲಗಿಸಿ ವಿಜಯ ಪಡೆಯುತ್ತೇನೆ ಎಂದಿದ್ದರು. ನೋಡಿದರಲ್ಲ ದೇಶ ಕಂಡ ಅಪ್ರತಿಮ ನಾಯಕನ

LEAVE A REPLY

Please enter your comment!
Please enter your name here