ಆಹಾರದಲ್ಲಿ ಈ ಪದಾರ್ಥ ಬಳಸಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ..!

0
181

ನಮ್ಮ ದೇಹ ಯಾವುದೇ ರೋಗಗಳಿಗೆ ತುತ್ತಾಗಬಾರದು ಎಂದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಅಂತಹ ಕೆಲವು ಆಹಾರ ಪದಾರ್ಥಗಳ ಲಿಸ್ಟ್ ಇಲ್ಲಿವೆ ನೋಡಿ.

• ಅಣಬೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಿಳಿ ರಕ್ತಕಣಗಳ ಕಾರ್ಯ ಚಟುವಟಿಕೆಗಳನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.

• ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ವಾರದಲ್ಲಿ 6 ಕ್ಕಿಂತ ಹೆಚ್ಚಿನ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕ್ಯಾನ್ಸರ್ ಸಮಸ್ಯೆ ಕಮ್ಮಿ ಆಗುತ್ತದೆಯಂತೆ.

• ವಿಟಮಿನ್ ಇ ಹೊಂದಿರುವ ಕಿವಿ ಹಣ್ಣು ವೈರಲ್ ಹಾಗೂ ಬ್ಯಾಕ್ಟೀರಿಯಾ ಸೋಂಕಿನಿಂದ ದೇಹವನ್ನು ಕಾಪಾಡುತ್ತದೆ.

• ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಪಾಡುವ ಶಕ್ತಿ ಶುಂಠಿಗೆ ಇದೆ.

• ಗೆಣಸು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ ತ್ವಚೆಗೆ ಕೂಡ ಪೋಷಣೆ ನೀಡುತ್ತದೆ. ಇದರಲ್ಲಿರುವ ವಿಟಮಿನ್ ಎ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.

• ಕಿತ್ತಳೆಯಂಥ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ವಿಟಮಿನ್ ಸಿ ಇರುವ ಹಣ್ಣುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇರುತ್ತದೆ. ಅದರಲ್ಲೂ ಕಿತ್ತಳೆ ಹಣ್ಣು ನೆಗಡಿ, ಜ್ವರ ಕಾಡದಂತೆ ಕಾಪಾಡುತ್ತದೆ.

LEAVE A REPLY

Please enter your comment!
Please enter your name here