ಗಾಸಿಪ್ ಗೆ ಗುನ್ನ ಕೊಟ್ಟ ಊರ್ವಶಿ ರೌಟೆಲಾ.

0
106

ಊರ್ವಶಿ ರೌಟೆಲಾ, ಬಾಲಿವುಡ್ ಬೆಡಗಿ ಚಂದನವನದಲ್ಲಿ ದರ್ಶನ್ ರವರ ಜೊತೆ ಐರಾವತ ಸಿನಿಮಾದಲ್ಲಿ ನಟಿಸಿರುವ ನಟಿ. ಹಾಗೂ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ರವರ ಮಧ್ಯೆಯ ಸಂಬಂಧವಿದೆ ಎಂಬ ಸುದ್ದಿ ಗಾಳಿ ಬೀಸಿದಂತೆಲ್ಲ ಹರಡುತ್ತಿದೆ, ಆದರೆ ಈ ಬಗ್ಗೆ ಪಾಂಡ್ಯ ಅಥವಾ ಊರ್ವಶಿ ರವರು ಯಾವುದು ಪ್ರತಿಕ್ರಿಯೆಗೆ ನಾಂದಿ ಹಾಡಿರಲಿಲ್ಲ, ಈ ಬಗೆಗೆ ಊರ್ವಶಿ ರೌಟೆಲಾ ರವರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ, ಇದು ಸುಳ್ಳು ಸುದ್ದಿ ಇದನ್ನು ಪ್ರಚಾರ ಮಾಡಿದಿರಿ ಇದರಿಂದ ನನಗೂ ಮತ್ತು ನನ್ನ ಕುಟುಂಬಕ್ಕೆ ನೋವಾಗುತ್ತಿದೆ ಎಂದು ತಿಳಿಸಿದ್ದಾರೆ .

ಈ ರೀತಿಯ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು ಸೆಲೆಬ್ರಿಟಿಗಳಿಗೂ ಮನಸ್ಸಿಗೆ ಅವರಿಗೂ ತಮ್ಮದೇ ಆದ ಖಾಸಗಿ ಜೀವನವಿದೆ .ಹಾಗು ಅದೇನೇ ಆದರೂ ಇಂತಹ ಸುದ್ದಿಗಳಿಂದ ಅವರ ಜೀವನಗಳಿಗೆ ಹಾನಿಯಾಗುತ್ತದೆ ಎಂದು ಮರೆತುಬಿಡುತ್ತಾರೆ.
ಯಾರೇ ಆದರೂ ಪರರನ್ನು ತಮ್ಮಂತೆ ಎಂದು ತಿಳಿಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ.

ಈ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ ಪರರ ಮನೆಯ ಸುದ್ದಿಯಿಂದ ತಮ್ಮ ಮನದ ಆನಂದದ ದೀಪವನ್ನು ಬೆಳಗುತ್ತೇವೆ ಎನ್ನುವ ಭ್ರಮೆಗೆ ಜನರನ್ನು ಸಿಲುಕಿಸಿರುವ ಬುದ್ಧಿವಂತರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದು ಉತ್ತಮ. ಭಾರತೀಯ ಸಂಸ್ಕೃತಿ ಹಗುರವಾಗಿ ಮಾನ ಕಳಚಿದಂತೆ ಕಳೆಗುಂದುತಿರಲು ಹೀನಾ ಸಂತೋಷವೇ ಕಾರಣವಾಗುತ್ತಿದೆ.

LEAVE A REPLY

Please enter your comment!
Please enter your name here