ಹ್ಯಾಟ್ರಿಕ್ ಹಿಟ್ ಕೊಡಲು ರೆಡಿ ಆಗಿದ್ದಾರೆ ಉಪ್ಪಿ_ಚಂದ್ರು ಜೋಡಿ!

0
170

ಆರ್.ಚಂದ್ರು, ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಮತ್ತು ಉತ್ತಮ ಬರಹಗಾರ. 2008 ರಲ್ಲಿ ತಾಜ್‍ಮಹಾಲ್ ಚಿತ್ರದ ಮೂಲಕ ನಿರ್ದೇಶಕನಾಗಿ ಪಾದರ್ಪಣೆ ಮಾಡಿದ ಅವರು ಪ್ರೇಮ ಕಥೆ ಮತ್ತು ಕೌಟಂಬಿಕ ಸಿನಿಮಾಗಳನ್ನು ಮಾಡುವ ಮುಖಾಂತರ ಹೆಸರು ಮಾಡಿದ್ದಾರೆ. ಇಗಾಗಲೆ ರಿಯಲ್‍ಸ್ಟಾರ್ ಉಪೇಂದ್ರ ಮತ್ತು ಚಂದ್ರು ಅವರ ಕಾಂಬಿನೇಷನ್ ಅಲ್ಲಿ ಮೂಡಿಬಂದಿದ್ದ ಎರಡು ಸಿನಿಮಾಗಳು ಬಾಕ್ಸ್ಆಫೀಸ್ ನಲ್ಲಿ ಧೂಳೆಬ್ಬಿಸಿವೆ. ಈಗ ಮತ್ತೊಮ್ಮೆ ಉಪ್ಪಿ ಅವರ ಜೊತೆ ಸಿನಿಮಾ ಮಾಡಲು ಚಂದ್ರು ಮುಂದಾಗಿದ್ದಾರೆ.

ಉಪ್ಪಿ ಅವರ ಸಿನಿಮಾಗಳೆ ಹಾಗೆ ವಿಭಿನ್ನವಾದ ದೃಶ್ಯಾವಳಿಗಳು ಮತ್ತು ತಮ್ಮದೇ ಶೈಲಿಯಲ್ಲಿ ಸಮಾಜದ ಕುರಿತು ಜನರಿಗೆ ಒಂದೊಳ್ಳೆ ಸಂದೇಶ ನೀಡಿರುತ್ತಾರೆ. ಆರ್.ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಬ್ರಹ್ಮ ಸಿನಿಮಾವು ಸಹ ಹಾಗೆಯೆ. ರಾಜಕೀಯದ ವ್ಯವಸ್ತೆ ಕುರಿತು ಹಾಸ್ಯ ರೂಪದಲ್ಲಿ ಮತ್ತು ಕುಟುಂಬ ಸಮೇತರಾಗಿ ಕುಳಿತುಕೊಂಡು ನೋಡುವಂತೆ ಬ್ರಹ್ಮ ಸಿನಿಮಾವನ್ನು ತಯಾರು ಮಾಡಿದ್ದರು. ಈ ಸಿನಿಮಾ ತೆರೆಕಂಡ ಎಲ್ಲ ಚಿತ್ರಮಂದಿರಗಳಲ್ಲೂ ಸಹ ಶತದಿನೋತ್ಸವವನ್ನು ಆಚರಿಸಿತ್ತು ಹಾಗೆಯೆ ಉಪ್ಪಿ ಅವರ ಅಭಿನಯಕ್ಕೂ ಕೂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಐದು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ಐ ಲವ್ ಯೂ ಎಂಬುವ ಸಿನಿಮಾ ತಯಾರು ಮಾಡಿದ್ದರು. ಇದೇ ವರ್ಷ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಉಪ್ಪಿ ಅವರ ಕಾಲೇಜ್ ಲುಕ್, ರಚಿತಾರಾಮ್ ಅವರ ಬೋಲ್ಡ್ ನೆಸ್ ಜೊತೆಗೆ ಒಂದಿಷ್ಟು ಸೆಂಟಿಮೆಂಟ್ ಇಟ್ಟು ಆರ್,ಚಂದ್ರು ಈ ಸಿನಿಮಾವನ್ನು ಗೆಲ್ಲಿಸಿದ್ದರು. ಅಲ್ಲದೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ಧಾರಿಯನ್ನು ತಾವೇ ವಹಿಸಿಕೊಂಡಿದ್ದರು.

ಈಗ ಮತೊಮ್ಮೆ ಈ ಜೋಡಿ ಹ್ಯಾಟ್ರಿಕ್ ಹಿಟ್ ಕೊಡಲು ರೆಡಿಯಾಗಿದೆ. ಇನ್ನು ಈ ಸಿನಿಮಾ ಬರೋಬ್ಬರಿ ಏಳೂ ಬಾಷೆಯಾಲ್ಲಿ ರೆಡಿಯಾಗುತ್ತಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಕೆ.ಜಿ.ಎಫ್ ಚಿತ್ರದ ನಂತರ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಜಾಸ್ತಿಯಾಗುತ್ತಿವೆ. ಆದರೆ ಕೆ.ಜಿ.ಎಫ್ ನಷ್ಟು ಯಾವ ಸಿನಿಮಾಗಳೂ ಹೆಸರುಮಾಡುತ್ತಿಲ್ಲ. ಈಗ ಚಂದ್ರು ಮತ್ತು ಉಪ್ಪಿ ಕಾಂಭಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಮೂವಿ ಯಾವ ಮಟ್ಟಿಗೆ ತಯಾರಾಗುತ್ತದೆ ಕಾದು ನೋಡಬೇಕಾಗಿದೆ.

ಸದ್ಯ ಸಿನಿಮಾದ ಪಸ್ಟ್ ಪೋಸ್ವರ್, ಏಳು ಬಾಷೆಯಲ್ಲಿ ಬಿಡುಗಡೆ ಮಾಡಿದ್ದು ಸಿನಿಮಾಗೆ ಕಬ್ಬ ಎಂದು ಹೆಸರಿಡಲಾಗಿದೆ

LEAVE A REPLY

Please enter your comment!
Please enter your name here