ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬೇಜಾವಾಬ್ದಾರಿ ಹೇಳಿಕೆ..!

0
140

ಉತ್ತರಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿರುವ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ್ದ ಪ್ರಹ್ಲಾದ್ ಜೋಶಿ, “ರಾಜ್ಯ ಸರ್ಕಾರವು ನಮ್ಮನ್ನು ನೆರವು ಕೇಳಿಲ್ಲ, ನೆರವು ಕೇಳಿದರೆ ನೆರವು ನೀಡಲು ತಯಾರಿದ್ದೇವೆ. ಪ್ರವಾಹದಿಂದ ತತ್ತರಿಸುವ ಜಿಲ್ಲೆಗಳಿಗೆ ಯಾವ ರೀತಿಯ ನೆರವು ನೀಡಬೇಕು ಎಂದು ರಾಜ್ಯ ಸರ್ಕಾರ ಈವರೆಗೆ ಕೇಳಿಲ್ಲ, ರಾಜ್ಯದಿಂದ ಮನವಿ ಬಂದ ತಕ್ಷಣ ಸ್ಪಂದಿಸಲಾಗುವುದು. ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸಲು ಕೇಂದ್ರ ಸಿದ್ಧವಿದೆ ಆದರೆ ಯಾವ ರೀತಿಯ ನೆರವು ಬೇಕು ಎಂದು ರಾಜ್ಯ ಕೇಳಬೇಕು” ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಸದರಾಗಿರುವ ಇವರಿಗೆ ಆ ಕುರಿತು ಕನಿಷ್ಠ ಮಾಹಿತಿಯೂ ಇಲ್ಲವೇ ಎಂದು ಜನರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪರಿಸ್ಥಿತಿಯ ಬಗ್ಗೆ ಕರ್ನಾಟಕದವರೆ ಆದ ಕೇಂದ್ರ ಸಚಿವರಿಗೆ ಅರಿವಿಲ್ಲವೇ, ಸರ್ಕಾರ ಕೇಳುವವರೆಗೂ ಅವರು ಕಾಯಬೇಕೆ, ರಾಜ್ಯದ ಸಂಸದರಾಗಿ ಅವರಿಗೆ ಜವಾಬ್ದಾರಿ ಇಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯದ ಜನ ಪ್ರವಾಹದಿಂದ ತತ್ತರಿಸುತ್ತಿರುವುದನ್ನು ರಾಜ್ಯದ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ರಾಜ್ಯ ಸರ್ಕಾರ ತಿಳಿಸಿ ನೆರವಿಗೆ ಮೊರೆ ಇಡಬೇಕಂತೆ. ಇದು ನಮ್ಮ ಸನ್ಮಾನ್ಯ ನರೇಂದ್ರ ಮೋದಿ ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸರ್ಕಾರ ಎಂದು ವ್ಯಂಗ್ಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here