ದೇಶದಲ್ಲಿ ತೀರಾ ಕಡಿಮೆ ನಿರುದ್ಯೋಗ ಸಮಸ್ಯೆ ಹೊಂದಿರುವ ರಾಜ್ಯ ಯಾವುದು ಗೊತ್ತಾ..?

0
145

ನಮ್ಮ ದೇಶದಲ್ಲಿ ಹೆಚ್ಚು ಕೇಳಿಬರುವ ಸುದ್ದಿ ಎಂದರೆ ಅದು ನಿರುದ್ಯೋಗ ಸಮಸ್ಯೆಯಾಗಿದೆ. ಈ ಸಮಸ್ಯೆ ಎಂದಿಗೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ ಎನ್ನಬಹುದು. ಉದ್ಯೋಗ ಹರಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಓಡಾಡುವ ಅನೇಕ ಉದ್ಯೋಗಾಕಾಂಕ್ಷಿಗಳು ಇಂದು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎನ್ನುವುದು ಬೇಸರದ ಸಂಗತಿಯಾಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿಗಳಿಂದ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತಿದ್ದು, ಜಾಗತಿಕ ಮಟ್ಟದಲ್ಲೂ ದೊಡ್ಡ ಸುದ್ದಿಯಾಗಿ ಹರಿದಾಡುತ್ತಿದೆ. ದೇಶದ ಪ್ರತಿ ರಾಜ್ಯದಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚಿದೆ ಹಾಗೂ ಅದರ ಪಟ್ಟಿ ಕೂಡ ಈ ಹಿಂದೆ ಪ್ರಕಟವಾಗಿತ್ತು.

ದೇಶದ ಯಾವ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಹೊಂದಿದೆ ಎಂಬ ಪಟ್ಟಿ ಈಗ ಹೊರಬಿದ್ದಿದ್ದು, ಕರ್ನಾಟಕ ರಾಜ್ಯ ಆ ಸ್ಥಾನವನ್ನು ಅಲಂಕರಿಸಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅದು ಐಟಿ ಸಿಟಿ ಬೆಂಗಳೂರು. ಹೌದು, ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳು ಇದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ನಗರ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗುತ್ತಿದ್ದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಮುಂದಿರುವ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ೦.೭ ಪರ್ಸೆಂಟ್ ಪ್ರತಿಶತಕ್ಕೆ ಇಳಿಕೆ ಕಂಡು ಬಂದಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ ವರದಿಯನ್ನು ನೀಡಿದೆ.

down graph

ಬೆಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚುತ್ತಿದೆ ಹಾಗೂ ಉದ್ಯೋಗ ಹರಸಿಕೊಂಡು ಬರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಸೃಷ್ಟಿ ಮಾಡುತ್ತಿದೆ. ಸುಮಾರು ಒಂದು ಮಿಲಿಯನ್ಗಿಂತ ಹೆಚ್ಚು ಉದ್ಯೋಗಿಗಳಿಗೆ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಕೆಲಸ ದೊರೆತಿದೆ. ಕರ್ನಾಟಕ ಸೇರಿದಂತೆ ಗೋವಾ ಕೂಡ ನಿರುದ್ಯೋಗ ಸಮಸ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here