ಈ ಗ್ರಾಮದೊಳಗೆ ಪುರುಷರಿಗೆ ಪ್ರವೇಶವಿಲ್ಲ, ಅಪ್ಪಿ ತಪ್ಪಿ ಹೋದರೆ ಏನ್ ಮಾಡ್ತಾರೆ ಗೊತ್ತಾ?

0
208

ಜಗತ್ತಿನಲ್ಲಿ ಮಹಿಳೆಯರು ಮಾತ್ರ ವಾಸಿಸುವ ಹಳ್ಳಿಯೂ ಇದೆ ಎಂದರೆ ನೀವು ನಂಬುತ್ತೀರಾ?, ಇನ್ನು ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಇಲ್ಲಿಗೆ ಪುರುಷರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ.  ಇಷ್ಟು ದಿನ ಕೆಲವು ದೇವಾಲಯಗಳಿಗೆ ಮಹಿಳೆಯರ ಪ್ರವೇಶವಿಲ್ಲ ಎಂದು ಕೇಳಿದ್ದೀರಿ. ಆದರೆ ಇದ್ಯಾವುದಪ್ಪ ಪುರುಷರಿಗೆ ಪ್ರವೇಶವಿಲ್ಲದ ಹಳ್ಳಿ ಎಂದು ನಿಮಗೆ ಆಶ್ಚರ್ಯವಾಗುತ್ತಿದೆಯಾ?, ಹೌದು, ಇದು ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಈ ಹಳ್ಳಿಯ ಹೆಸರು ಉಮೋಜಾ. ಈ ಗ್ರಾಮವು ಕೀನ್ಯಾದ ರಾಜಧಾನಿ ನೈರೋಬಿ ಬಳಿ ಇದೆ. ಇಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಾರೆ. ಅವರದ್ದೇ  ಪಾರುಪತ್ಯ. ಈ ಉಮೋಜಾ ಗ್ರಾಮದ ವಿಶೇಷತೆಯೆಂದರೆ ಇಲ್ಲಿಗೆ ಯಾವುದೇ ಪುರುಷರು ಬರುವ ಹಾಗಿಲ್ಲ. ಇಲ್ಲಿ 48 ಮಹಿಳೆಯರ ಗುಂಪು ತಮ್ಮ ಮಕ್ಕಳೊಂದಿಗೆ ಒಣಹುಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದೆ. ಈ ಗ್ರಾಮದಲ್ಲಿ ಪುರುಷರಿಗೆ ನಿ’ಷೇ’ಧಿಸಲಾಗಿದೆ.  ಒಂದು ವೇಳೆ ಪುರುಷರು ಇಲ್ಲಿಗೆ ಪ್ರವೇಶಿಸಿದರೆ ಆತನ ಮಾಹಿತಿಯನ್ನು ಸ್ಥಳೀಯ ಪೊ’ಲೀಸರಿಗೆ ನೀಡಲಾಗುತ್ತದೆ. ಹೀಗೆ ಮತ್ತೆ ಮಾಡದಂತೆ ಅವನಿಗೆ ಎಚ್ಚರಿಕೆ ನೀಡಲಾಗುತ್ತದೆ.

1990 ರಿಂದ 15 ಮಹಿಳೆಯರ ಗುಂಪಿನೊಂದಿಗೆ ಈ ಗ್ರಾಮ ಪ್ರಾರಂಭವಾಯಿತು. ಸಾಂಬುರು ಮತ್ತು ಇಸಿಯೊಲೊ ಬಳಿ ಇರುವ ವ್ಯಾಪಾರ ಗಡಿಯ ಸಮೀಪದಲ್ಲಿ ಈ ಮಹಿಳೆಯರನ್ನು ಬ್ರಿಟಿಷ್ ಸೈನಿಕರು ಅ’ತ್ಯಾ’ಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಘಟನೆಯ ನಂತರ ಮಹಿಳೆಯರನ್ನು ತಮ್ಮ ಸಮುದಾಯದಲ್ಲಿ ದ್ವೇ’ಷದಿಂದ ಕಾಣುತ್ತಿದ್ದರು. ತಪ್ಪಾಗಿ ನೋಡುತ್ತಿದ್ದರು.  ಅ’ತ್ಯಾ’ಚಾರವಾದ ನಂತರ ಗಂಡಂದಿರು ಅವರನ್ನು ಕುಟುಂಬಕ್ಕೆ ಅಗೌರವ ಎಂದು ಪರಿಗಣಿಸಿ ಮನೆಯಿಂದ ಓಡಿಸಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಅವರೆಲ್ಲರೂ ಸೇರಿ ಈ ಸ್ಥಳಕ್ಕೆ ಬಂದು ಗ್ರಾಮಕ್ಕೆ ಉಮೋಜಾ ಎಂದು ಹೆಸರಿಟ್ಟರು.

ಕ್ರಮೇಣ ಈ ಗ್ರಾಮವು ಆಶ್ರಯ ತಾಣವಾಯಿತು. ಇಲ್ಲಿ, ತಮ್ಮ ಮನೆಗಳಿಂದ ಹೊರಹಾಕಲ್ಪಟ್ಟ ಎಲ್ಲ ಮಹಿಳೆಯರನ್ನು ಸ್ವಾಗತಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ನೊಂದ ಮಹಿಳೆಯರು, ಶೋಷಣೆಯಿಂದ ಬಳಲುತ್ತಿರುವ ಮಹಿಳೆಯರು, ಅ’ತ್ಯಾ’ಚಾರ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಗಂಡಂದಿರ ಮ’ರ’ಣದ ನಂತರ ಅನೇಕ ಮಹಿಳೆಯರು ಇಲ್ಲಿಗೆ ಬರುತ್ತಾರೆ.

ಉಮೋಜಾದಲ್ಲಿ ವಾಸಿಸುವ ಮಹಿಳೆಯರೆಲ್ಲರೂ ಸಾಂಬುರು ಸಂಸ್ಕೃತಿಯವರು. ಎಲ್ಲಾ ವಯಸ್ಸಿನ ಮಹಿಳೆಯರು ಇಲ್ಲಿಗೆ ಬಂದು ವಾಸಿಸಬಹುದು. ಇಲ್ಲಿ 98 ವರ್ಷದ ವಯಸ್ಸಿನ ಹಿರಿಯರಿಂದ ಹಿಡಿದು 6 ತಿಂಗಳ ಶಿಶುಗಳು ವಾಸಿಸುತ್ತಾರೆ. ಗರ್ಭಿಣಿಯಾಗಿದ್ದಾಗ ಅನೇಕ ಮಹಿಳೆಯರು ಇಲ್ಲಿಗೆ ಬಂದು ವಾಸಿಸುತ್ತಿದ್ದಾರೆ. ಉಮೋಜಾ ಗ್ರಾಮದಲ್ಲಿ ಮಹಿಳೆಯರು ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಸಂತೋಷದಿಂದ ಬದುಕುತ್ತಾರೆ. ಅವರು ಇಲ್ಲಿ ಯಾವುದೇ ಕೆಲಸಕ್ಕೆ ಅನುಮತಿ ತೆಗೆದುಕೊಳ್ಳಬೇಕಾಗಿಲ್ಲ. ಈ ಹಳ್ಳಿಯ ಮಹಿಳೆಯರು ವರ್ಣರಂಜಿತ ಮಣಿಗಳನ್ನು ತಯಾರಿಸುತ್ತಾರೆ, ಇದು ಅವರ ಜೀವನ ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here