ನಟಿ ಶ್ರುತಿ ಹರಿಹರನ್ ಗೆ ಎರಡೆರಡು ಸಂತಸದ ಸುದ್ದಿ !

0
113

ಸದ್ಯ ವಿವಾದದಿಂದ ಹಾಗೂ ಚಿತ್ರರಂಗದಿಂದ ದೂರ ಉಳಿದಿರುವ ಶ್ರುತಿ ಹರಿಹರನ್,ಕಳೆದ ತಿಂಗಳು ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು !

ನನ್ನೊಳಗಿನ ಹೃದಯ ಬಡಿತವನ್ನು ಜೀವನದಲ್ಲಿ ಆಲಿಸುವಾಗ, ಹೊಸ ಜೀವನದ ಪ್ರಾರಂಭವಾಗುತ್ತಿದೆ ಎಂಬುದು ಅರಿವಾಗುವಾಗ, ಈ ಕ್ಷಣವನ್ನು ಅನುಭವಿಸುವಾಗ, ನಿನ್ನನ್ನು ನೋಡಲು ಹೆಚ್ಚು ಕಾಯಲು ಆಗುತ್ತಿಲ್ಲ’ ಎಂದು ತಮ್ಮ ಬೇಬಿ ಬಂಪ್ ಗೆ ಸಂಬಂಧಿಸಿದ ಫೋಟೋವೊಂದನ್ನು ಹಾಕಿ ಬರೆದುಕೊಂಡಿದ್ದರು..
ಈಗ ಶ್ರುತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ! ಹೌದು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶ್ರುತಿ, ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ! ಇನ್ನೊಂದೆಡೆ ತಮ್ಮ ಚಿತ್ರ ನಾತಿ ಚರಾಮಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೆ ಚಿತ್ರಕ್ಕೆ ಐದು ಪ್ರಶಸ್ತಿಗಳು ಬಂದಿದೆ !

ಹೌದು 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(2018) ಪ್ರಕಟವಾಗಿದ್ದು, ಕನ್ನಡದ ಸಿನಿಮಾ ಗಳಿಗೆ ಹನ್ನೊಂದು ಪ್ರಶಸ್ತಿಗಳು ದೊರೆತಿದೆ. ಇದರಲ್ಲಿ ಶೃತಿ ಹರಿಹರನ್ ರವರ ನಾತಿಚರಾಮಿ ಚಿತ್ರಕ್ಕೆ ಐದು ಪ್ರಶಸ್ತಿಗಳು ಬಂದಿರುವುದು ವಿಶೇಷ !

LEAVE A REPLY

Please enter your comment!
Please enter your name here