ಮನೆ ಖಾಲಿ ಮಾಡಿ ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ಹಲ್ಲೆ

0
710

ಮನೆ ಖಾಲಿ ಮಾಡಿ ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ರೂಮ್ ಮೇಟ್ ಹಲ್ಲೆ ನಡೆಸಿದ್ದಾರೆ.
ನಳಿನಿ ನೇಗಿ ಹಲ್ಲೆಗೊಳಗಾದ ನಟಿ . ನಳಿನಿ ಮನೆ ಖಾಲಿ ಅಡಿ ಎಂದು ತನ್ನ ರೂಮ್ ಮೇಟ್ ಪ್ರೀತಿ ಮತ್ತು ಅವಳ ತಾಯಿಗೆ ಹೇಳಿದಾಗ ಇಬ್ಬರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ನಳಿನಿ ಹೇಳಿದ್ದಾರೆ. ಇದರ ಬಗ್ಗೆ ಮಾತನಾಡಿದ ನಟಿ ನಳಿನಿ, ನಾನು ಹಾಗೂ ಪ್ರೀತಿ ಮೊದಲಿನಿಂದಲೂ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದೀವಿ. ಬಳಿಕ ನಾನು ಒಶಿವಾರಾಗೆ ಶಿಫ್ಟ್ ಆಗಲು ನಿರ್ಧಾರ ಮಾಡಿದೆ. ಪ್ರೀತಿ ಮತ್ತೆ ನನ್ನನ್ನು ಅಲ್ಲಿ ಕೂಡ ಸಂಪರ್ಕಿಸಿ ನನಗೆ ವಾಸಿಸಲು ಮನೆ ಇಲ್ಲ ಎಂದು ಹೇಳಿಕೊಂಡಲು ಅಲ್ಲದೆ ಕೆಲವು ದಿನಗಳವರೆಗೆ ನನ್ನ ಮನೆಯಲ್ಲಿ ವಾಸಿಸಲು ಜಾಗ ನೀಡುವಂತೆ ಕೇಳಿಕೊಂಡಿದ್ದಳು. ಪ್ರೀತಿ ಕೆಲವು ದಿನ ನನ್ನ ಮನೆಯಲ್ಲೇ ವಾಸಿಸುತ್ತಿದ್ದಳು ಎಂದು ನಟಿ ನಳಿನಿ ಹೇಳಿದ್ದಾರೆ.

ನನ್ನ ಪೋಷಕರು ಕೆಲವು ದಿನಗಳ ಕಾಲ ನನ್ನ ಜೊತೆಯಿರಲು ಆಸೆಪಟ್ಟರು. ಹಾಗಾಗಿ ನಾನು ಪ್ರೀತಿಗೆ ಮನೆ ಖಾಲಿ ಮಾಡಲು ಹೇಳಿದೆ. ಇದಕ್ಕೆ ಪ್ರೀತಿ ಒಪ್ಪಿಕೊಂಡಳು. ಆದರೆ ಕೆಲವು ದಿನಗಳ ನಂತರ ಆಕೆಯ ತಾಯಿ ಕೂಡ ನನ್ನ ರೂಮಿಗೆ ಬಂದರು. ಅವರು ಬಂದಾಗ ನಾನು ಮನೆ ಶಿಫ್ಟ್ ಮಾಡಲು ಪ್ರೀತಿಯ ಸಹಾಯಕ್ಕೆ ಬಂದಿದ್ದಾರೆ ಎಂದುಕೊಂಡೆ. ಕಳೆದ ವಾರ ನಾನು ಜಿಮ್‍ಗೆ ಹೋಗುತ್ತಿದ್ದಾಗ ಪ್ರೀತಿಯ ತಾಯಿ ನನ್ನ ಜೊತೆ ಜಗಳವಾಡಲು ಶುರು ಮಾಡಿದರು.

ಬಳಿಕ ಪ್ರೀತಿಯ ತಾಯಿ ನಾನು ಜಗಳವಾಡುತ್ತಿದ್ದೇನೆ ಎಂದು ಪ್ರೀತಿ ಬಳಿ ನನ್ನ ಮೇಲೆ ದೂರು ಹೇಳಿದರು. ಆಗ ಪ್ರೀತಿ ಕೂಡ ನನ್ನ ಜೊತೆ ಜಗಳವಾಡಲು ಮುಂದಾದಳು. ನಾನು ಪ್ರೀತಿಗೆ ಎಲ್ಲವನ್ನು ಹೇಳಲು ಪ್ರಯತ್ನಿಸಿದೆ. ಆದರೆ ಅಷ್ಟರಲ್ಲಿ ಇಬ್ಬರು ಗ್ಲಾಸ್‍ನಿಂದ ನನ್ನ ಮೇಲೆ ಹಲ್ಲೆ ನಡೆಸಿದರು. ಅವರಿಬ್ಬರು ನನ್ನನ್ನು ಕೊಲಲ್ಲು ಪ್ರಯತ್ನಿಸುತ್ತಿದ್ದರು. ಅಷ್ಟೇ ಅಲ್ಲದೆ ನಾನು ನಟಿಯಾಗಿದ್ದರಿಂದ ನನ್ನ ಮುಖವನ್ನು ಗಾಯಗೊಳಿಸಲು ಇಬ್ಬರು ಪ್ಲ್ಯಾನ್ ಮಾಡಿದ್ದರು ಎಂದು ನಳಿನಿ ಹೇಳಿದ್ದಾರೆ. ನಟಿ ನಳಿನಿ ಈಗ ತಮ್ಮ ತಂದೆ-ತಾಯಿಯ ಜೊತೆ ವಾಸಿಸುತ್ತಿದ್ದಾರೆ. ನಳಿನಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾಮಕರಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here