ನಂಬಿದ ಹುಡುಗನಿಂದ ನಟಿಗೆ ಆಸಿಡ್ ಹಾಕುವುದಾಗಿ ಬೆದರಿಕೆ : ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ ಹೀರೋಯಿನ್!

0
366

ಪ್ರೀತಿ – ಪ್ರೇಮ ಎಂಬ ಬಂಧ ಯಾರನ್ನು ತಾನೇ ಬಿಡುವುದಿಲ್ಲ ಹೇಳಿ. ಅದು ಸಾಮಾನ್ಯರಿಂದ ಸೆಲಿಬ್ರಿಟಿಗಳವರೆಗೂ ಕೂಡ ಈ ಪಾಶದಿಂದ ದೂರ ಉಳಿಯದೇ ಇರಲಾರರು. ಇದಕ್ಕೆ ಹಲವು ನಟ- ನಟಿಯರು ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಂಡಿದ್ದಾರೆ. ಅದರಲ್ಲೂ ತಾವು ಬೀಳುವ ಪ್ರೇಮದ ಪಾಶವೂ ಸಥ್ಯವೋ –ಮಿಥ್ಯವೋ ಎಂಬುದನ್ನು ಸಹ ಗಮನಿಸಿರುವುದಿಲ್ಲ. ಇಂದು ಅದೇ ತೆರನಾದ ಘಟನೆಯಿಂದ ಮಲಯಾಳಂ ನಟಿ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ಅಂಜಲಿ ಅಮೀರ್ ಮೋಸ ಹೋಗಿದ್ದಾರೆ.

 

ಹೌದು, ಅಂಜಲಿ ತಮ್ಮ ಲೀವ್-ಇನ್ ಗೆಳೆಯನಿಂದ ಬೆದರಿಕೆ ಇದೆ ಎಂದು ಸ್ವತಃ ಅವರು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತಾಗಿ ಒಂದು ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಂಜಲಿ ಅಮೀರ್ ಅವರ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದು ಅವರನ್ನು ಪ್ರೀತಿಸುವುದಾಗಿ ನಂಬಿಸಿದ ವ್ಯಕ್ತಿಯೇ ಈಗ ಅವರಿಗೆ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ನಟಿ ತಮ್ಮ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.

 

ಅಂಜಲಿ ಅಮೀರ್ ಓರ್ವ ಮಂಗಳಮುಖಿ ನಟಿ. ಅವರೇ ತಿಳಿಸಿದಂತೆ ನಾನು ನನ್ನ ಹುಡುಗನಿಗೆ ಕಳೆದ ಎರಡು ವರ್ಷದಿಂದ ನಾನು ಅವನ ಜೊತೆ ಸಂಬಂಧದಲ್ಲಿದ್ದೆ. ಇಲ್ಲಿಯವರೆಗೂ ಸುಮಾರು 4 ಲಕ್ಷದ ವರೆಗೂ ಹಣ ಪಡೆದುಕೊಂಡಿದ್ದಾನೆ. ಆತನಿಗೆ ಯಾವುದೇ ಉದದ್ಯೋಗ ಇರಲಿಲ್ಲ. ಪ್ರತಿದಿನದ ಖರ್ಚಿಗೂ ಆತ ನನ್ನನ್ನೇ ಅವಲಂಬಿತವಾಗಿದ್ದ ಎಂದು ನಟಿ ಆರೋಪಿಸಿದ್ದಾಳೆ.

 

ಇನ್ನು ಈ ನಟಿ ಹರಿಬಿಟ್ಟಿರುವ ವಿಡಿಯೋ ಈಗ ವೈರಲ್ ಆಗಿದ್ದು, ಹೆಚ್ಚು ಸದ್ದು ಮಾಡ್ತಿದೆ.ವಿಡಿಯೋದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ನನ್ನನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here