ಇತ್ತೀಚಿನ ದಿನಗಳಲ್ಲಿ ಮನುಷ್ಯರು ಮನೆಗಳನ್ನು ನಿರ್ಮಿಸಲು ಮರಗಳನ್ನು ಕಡಿಯುತ್ತಿದ್ದಾರೆ. ಆದರೆ ಇಂದು ನಾವು ನಿಮಗೆ ಹೇಳುತ್ತಿರುವ ಸ್ಟೋರಿ ಇದಕ್ಕಿಂತ ವಿಭಿನ್ನವಾಗಿದೆ. ಹೌದು, ಎಲ್ಲರೂ ಮನೆಗಳನ್ನು ಉರುಳಿಸಿ ಮನೆ ನಿರ್ಮಾಣ ಮಾಡಿದರೆ ಈ ವ್ಯಕ್ತಿ ಮರದ ಮೇಲೆ ಮನೆ ನಿರ್ಮಿಸಿದ್ದಾರೆ. ಇದನ್ನು ಕೇಳಿದ ನಂತರ ನೀವು ನಂಬುವುದಿ, ಆದರೆ ಇದು ನಿಜ. ನಾವು ಮಾತನಾಡುತ್ತಿರುವ ಆ ವ್ಯಕ್ತಿಯ ಹೆಸರು ಕೆ.ಪಿ.ಸಿಂಗ್, ಐಐಟಿ ಪದವೀಧರ, ಉದಯಪುರದಲ್ಲಿ ಸಿವಿಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆ.ಪಿ.ಸಿಂಗ್ ಕಳೆದ 20 ವರ್ಷಗಳ ಹಿಂದೆ ಈ ಮನೆಯನ್ನು ನಿರ್ಮಿಸಿದರು. ಈ ಮನೆಯನ್ನು ನಿರ್ಮಿಸಲು ಅವರಿಗೆ ಬಹಳಷ್ಟು ವರ್ಷಗಳೇ ಬೇಕಾಯಿತಂತೆ. ಏಕೆಂದರೆ ಅವರ ಮನೆ ಸಾಮಾನ್ಯ ಸ್ಥಳದಲ್ಲಿ ಇಲ್ಲ, ಮರದ ಮೇಲೆ ನಿರ್ಮಿಸಲ್ಪಟ್ಟಿದೆ. ಅದು ನಾಲ್ಕು ಅಂತಸ್ತಿನ ಮನೆ. ಈ ಮನೆಯಿಂದ ಮರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕೆ.ಪಿ. ಸಿಂಗ್ ನಂಬಿದ್ದಾರೆ. ಆದ್ದರಿಂದ ಮರವನ್ನು ಕತ್ತರಿಸದಂತೆ ಅವರು ತಮ್ಮ ಮನೆಯನ್ನು ನಿರ್ಮಿಸಿದರು.
ಕೆ.ಪಿ. ಸಿಂಗ್ 2000 ರಲ್ಲಿ ಈ ಮನೆಯನ್ನು ನಿರ್ಮಿಸಿದ್ದು, ಅಂದಿನಿಂದ ಇದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂದಹಾಗೆ ಈ ಮನೆಯು ಮೆಟ್ಟಿಲು, ಅಡುಗೆ ಮಾಡಲು ಅಡುಗೆಮನೆ ಮತ್ತು ಸ್ನಾನಗೃಹ ಇತ್ಯಾದಿಗಳನ್ನು ಹೊಂದಿದೆ. ಮನೆ ನಿರ್ಮಿಸಿದ ಮರವು 87 ವರ್ಷ ಹಳೆಯದು.
ಅಮೆರಿಕದ ಚಿಕಾಗೋದಲ್ಲಿ ಸಹ ಅತಿ ಕಡಿಮೆ ಜಾಗದಲ್ಲಿ ಸುಂದರವಾದ ಮನೆಯನ್ನು ಕಟ್ಟಿರುವುದನ್ನು ನೀವು ನೋಡಬಹುದು. ಮನೆ ನೋಡಲು ತರಕಾರಿಯನ್ನು ಸ್ಲೈಸ್ ಮಾಡಿದಾಗ ಹೇಗೆ ತೆಳುವಾಗಿ ಕಾಣಿಸುತ್ತದೆಯೋ ಹಾಗಿದೆ. ಒಟ್ಟಿನಲ್ಲಿ ನೀವು ಈ ಮನೆಯನ್ನು ಮೊದಲ ಬಾರಿಗೆ ನೋಡಿದರೆ ಇಲ್ಲೊಂದು ಮನೆ ಕೂಡ ಇರಬಹುದೆಂದು ನಂಬುವುದಿಲ್ಲ. ಸ್ಲೈಸ್-ಲುಕ್ ಇರುವ ಈ ಮನೆಗೆ ಪೈ ಹೌಸ್ ಎಂದು ಹೆಸರಿಸಲಾಗಿದೆ. ಇದನ್ನು ಇಲಿನಾಯ್ಸ್ನ ಡೀರ್ ಫೀಲ್ಟ್’ನಲ್ಲಿ 2003 ರಲ್ಲಿ ನಿರ್ಮಿಸಲಾಯಿತು. ಮನೆ ನೋಡಲು ಸ್ಲೈಸ್ ರೀತಿ ಇರುವ ಕಾರಣ ಇಂದು ಇದು ಬಾಂಧವ್ಯದ ಕೇಂದ್ರವಾಗಿ ಮಾರ್ಪಟ್ಟಿದೆ. ವಿಶೇಷವೆಂದರೆ ಸ್ಥಳೀಯ ಪ್ರವಾಸಿಗರು ಸಹ ಈ ಮನೆಯನ್ನು ನೋಡಲು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಮನೆಯ ಫೋಟೋಗಳು ವೈರಲ್ ಆಗುತ್ತಿವೆ. ವಾಸ್ತವವಾಗಿ ಈ ಮನೆಯನ್ನು ಫೋಟೋ ಪ್ರಾಪರ್ಟಿ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಪೋಸ್ಟ್ ಮಾಡಲಾಗಿತ್ತು.