ಇಡೀ ಜಗತ್ತಿನಲ್ಲಿ ಈ ರೈಲು ಮಾರ್ಗ ಬಹಳ ಅಪಾಯಕಾರಿಯಾಗಿದೆ!

0
220

ನೀವು ರೋಮಾಂಚಕಾರಿ ರೈಲು ಮಾರ್ಗಗಳ ಮೂಲಕ ಹೋಗಲು ಇಷ್ಟಪಡುತ್ತಿದ್ದರೆ, ಬಹುಶಃ ಈ ಸುದ್ದಿ ನಿಮಗಿಷ್ಟವಾಗಬಹುದು. ಏಕೆಂದರೆ ಇಂದು ನಾವು ಅಂತಹ ಒಂದು ವಿಶಿಷ್ಟವಾದ ರೈಲು ಮಾರ್ಗದ ಬಗ್ಗೆ ನಿಮಗೆ ಹೇಳಲಿದ್ದೇವೆ. ಈ ರೈಲು ಮಾರ್ಗ ಹೇಗಿದೆಯೆಂದರೆ ಅಲ್ಲಿ ಪ್ರತಿ ಕ್ಷಣವೂ ಸಾವು ಸಮೀಪದಲ್ಲಿ ಇರುವುದಂತೆ ಭಾಸವಾಗುತ್ತದೆ. ಹೌದು, ಇದೇ ಕಾರಣಕ್ಕಾಗಿ ಈ ರೈಲುಮಾರ್ಗವನ್ನು ವಿಶ್ವದ ಅತ್ಯಂತ ಅಪಾಯಕಾರಿ ರೈಲು ಮಾರ್ಗವೆಂದು ಪರಿಗಣಿಸಲಾಗಿದೆ. ಈ ರೈಲು ಮಾರ್ಗ ಭಯಂಕರವಾಗಿರುವುದರ ಜೊತೆಗೆ ಸುಂದರವಾಗಿಯೂ ಇದೆ ಎಂದು ಹೇಳಲಾಗುತ್ತದೆ. ಏಕೆಂದಲ್ಲಿ ಈ ರೈಲು ಮಾರ್ಗದ ಮೂಲಕ ರೈಲು ಹೋಗುತ್ತಿದ್ದರೆ ಸ್ವರ್ಗದಂತೆ ಭಾಸವಾಗುತ್ತದೆ. ಜಗತ್ತನ್ನು ಒಟ್ಟಿಗೆ ನೋಡಿದಾಗ ಹೇಗನಿಸುತ್ತದೆಯೇ ಅದೇ ಭಾವ ಈ ಮಾರ್ಗದಲ್ಲಿ ಉಂಟಾಗುತ್ತದೆ ಎಂದು ಹೇಳಬಹುದು.


ಅಂದಹಾಗೆ ಈ ರೈಲು ಮಾರ್ಗವಿರುವುದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಬಂಡುಂಗ್ ನಡುವೆ. ಇಲ್ಲಿ ರೈಲುಗಳು ಅರ್ಗೋ ಗೆಡೆ ರೈಲ್ರೋಡ್ ಎಂದು ಕರೆಯಲ್ಪಡುವ ಅತ್ಯಂತ ಎತ್ತರದ ಮತ್ತು ಭಯಾನಕ ಸೇತುವೆಯ ಮೂಲಕ ಹಾದು ಹೋಗುತ್ತದೆ. ಈ ಸೇತುವೆಯ ಎರಡೂ ಬದಿಯಲ್ಲಿ ಯಾವುದೇ ಆವರಣಗಳಿಲ್ಲ. ಇದು ಹೆಚ್ಚು ಅಪಾಯಕಾರಿಯಾಗಿದೆ. ಈ ಸೇತುವೆಯ ಮೂಲಕ ವಾಹನವು ಹಾದು ಹೋದ ತಕ್ಷಣ ಪ್ರಯಾಣಿಕರ ಉಸಿರು ತಕ್ಷಣ ನಿಂತಂತೆ ಭಾಸವಾಗುತ್ತದೆ. ಭಯದಿಂದಾಗಿ ಕೆಲವು ಪ್ರಯಾಣಿಕರು ಮಾತನಾಡದೆ ಸುಮ್ಮನಿರುತ್ತಾರೆ. ಆದರೂ ಈ ಭಯದ ಜೊತೆಗೆ, ನೀವು ಸೇತುವೆಯ ಕೆಳಗೆ ನೋಡಿದರೆ ಅದು ನಿಮಗೆ ಖುಷಿಯೂ ಕೊಡಬಹುದು.


ಈ ರೈಲು ಮಾರ್ಗವು ಅತ್ಯಂತ ಸುಂದರವಾದ ರೈಲು ಅನುಭವಗಳನ್ನು ನೀಡುತ್ತದೆ. ಸಿಕುರುಟುಗ್ ಪೈಲಾನ್ ಟ್ರೆಸಲ್ ಸೇತುವೆಯ ಉಪೋಷ್ಣವಲಯದ ಕಣಿವೆಯ ಮೇಲೆ ರೈಲು ಚಲಿಸಿದಾಗ ಭಯಾನಕ ಅನುಭವ ಪ್ರಾರಂಭವಾಗುತ್ತದೆ. ರೈಲು ಹಳಿಯ ಕೆಳಗಿರುವ ಆಳವಾದ ಉಪೋಷ್ಣವಲಯದ ಕಣಿವೆಯನ್ನು ನೋಡಿದ ನಂತರ ಅನೇಕ ಜನರು ಭಯಭೀತರಾಗುತ್ತಾರೆ.
ಈ ರೈಲು ಮಾರ್ಗಕ್ಕೆ ‘ದಿ ಡೆತ್ ರೈಲ್ವೆ’ ಎಂಬ ಹೆಸರನ್ನು ಇಟ್ಟಿದ್ದು, ಇದು ಮ್ಯಾನ್ಮಾರ್ನ ಗಡಿ ನಿಯಂತ್ರಣ ರೇಖೆ ಪಕ್ಕದಲ್ಲಿರುವ ಥೈಲ್ಯಾಂಡ್ನ ಕಾಂಚನಬುರಿ ಪ್ರಾಂತ್ಯದಲ್ಲಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಪಾನಿಯರು ಈ ರೈಲುಮಾರ್ಗವನ್ನು ನಿರ್ಮಿಸಿದಾಗ, ಅದರ ನಿರ್ಮಾಣದಿಂದಾಗಿ ಡಜನ್’ಗಟ್ಟಲೆ ಬ್ರಿಟಿಷ್ ಮತ್ತು ಬ್ರಿಟಿಷ್ ಯುದ್ಧ ಕೈದಿಗಳು ಪ್ರಾಣ ಕಳೆದುಕೊಂಡರು. ಈ ರೈಲು ಮಾರ್ಗವು ನದಿಯ ದಡದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಕಾಡುಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಯಾಣಿಕರಿಗೆ ವಿನೋದವನ್ನು ನೀಡುತ್ತದೆ. ಜೊತೆಗೆ ಇಲ್ಲಿನ ಕಾಡು ಭಯಾನಕವಾಗಿ ಭವ್ಯವಾಗಿದೆ.

ಮೂಲತಃ ಥೈಲ್ಯಾಂಡ್-ಬರ್ಮಾ ರೈಲ್ವೆ ಎಂದು ಕರೆಯಲ್ಪಡುವ ಇದು “ಡೆತ್ ರೈಲ್ವೆ” ಎಂಬ ಅಡ್ಡಹೆಸರನ್ನು ಗಳಿಸಿತು. ಏಕೆಂದರೆ 1942 ಮತ್ತು 1943 ರ ನಡುವಿನ 16 ತಿಂಗಳ ನಿರ್ಮಾಣದ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದರು. ಇದು ಪೂರ್ಣಗೊಂಡ ನಂತರ ಥೈಲ್ಯಾಂಡ್’ನ ಬಾನ್ ಪಾಂಗ್ ನಿಂದ ಬರ್ಮಾದ ತನ್ಬುಯುಜಾಯತ್ ವರೆಗೆ 250 ಮೈಲುಗಳಷ್ಟು ವಿಸ್ತರಿಸಿತು.

LEAVE A REPLY

Please enter your comment!
Please enter your name here