ತನಗಿಂತ ಚಿಕ್ಕವರನ್ನು ಮದುವೆಯಾದ ಟಾಪ್ ಸಿನಿಮಾ ನಟಿಯರು!

0
2485

ನಿಮಗೆಲ್ಲರಿಗೂ ಗೊತ್ತಿರಬಹುದು, ಹಿಂದಿನ ಕಾಲದ ಮದುವೆಯ ನಿಯಮಗಳು ಸಂಪ್ರದಾಯಗಳು ಹೇಗಿತ್ತು ಎಂಬುದು. ಮದುವೆಯಾಗುವ ನವ ಜೋಡಿಗಳಲ್ಲಿ ವಧುಗಿಂತ ವರನು ದೊಡ್ಡವನಾಗಿರಬೇಕು, ಇಲ್ಲವಾದಲ್ಲಿ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಲೇ ಇರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ದಿನಗಳು ಉರುಳಿದಂತೆ ಸಂಪ್ರದಾಯಗಳು ಬದಲಾಗುತ್ತಿವೆ. ಜಾತಿ, ಧರ್ಮ, ವಯಸ್ಸು ಇವ್ಯಾವುದನ್ನು ಲೆಕ್ಕಿಸದೆ ತಾನು ಪ್ರೀತಿಸಿದ ವ್ಯಕ್ತಿಯನ್ನು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿರುತ್ತಾರೆ. ಒಂದು ಕಡೆಯಿಂದ ಯೋಚಿಸುವುದಾದರೆ ಈ ನಿರ್ಧಾರ ಸರಿ ಅನಿಸುತ್ತದೆ ಅಲ್ಲವೇ ??

 

 

ವಿವಾಹ ಎಂಬುದು ಮನುಷ್ಯ ಜೀವಿಯ ಬದುಕಿನಲ್ಲಿ ಮುಖ್ಯವಾದ ಘಟ್ಟವಾಗಿದೆ, ಬ್ರಹ್ಮಚಾರ್ಯವನ್ನು ತ್ಯಜಿಸಿ ತನ್ನ ಬಾಳ ಸಂಗಾತಿಯ ಜೊತೆ ಕೊನೆ ಉಸಿರಿರುವವರೆಗೆ ಬದುಕುವ ಜೀವನಕ್ಕೆ ಕಾಲಿಡುವ ಮುನ್ನಾ ವಿವಾಹವಾಗಬೇಕು. ಈ ಘಟ್ಟದಲ್ಲಿ ತುಂಬಾ ಯೋಚಿಸಿ ತಮ್ಮ ನೆಚ್ಚಿನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಮುಂದಿನ ಜೀವನ ಸುಖಮಯವಾಗಿರುತ್ತದೆ.

 

 

ಈ ವಿವಾಹಕ್ಕೆ ನಮ್ಮ ಹಿರಿಯರು ಸಾಕಷ್ಟು ನಿಯಮಗಳನ್ನು ಕಾಯ್ದಿರಿಸಿದ್ದಾರೆ. ಆದರೆ ಈಗಿನ ಕಾಲದಲ್ಲಿ ಅವನ್ನೆಲ್ಲ ಯಾರು ಕೇಳುತ್ತಾರೆ ಹೇಳಿ ? ಹಳ್ಳಿಗಳಲ್ಲಿ ನಿಯಮಗಳು ಪಾಲನೆ ಆಗುತ್ತಲೇ ಇವೆ ಆದರೆ ನಗರದಲ್ಲಿ ಮತ್ತು ಸ್ಟಾರ್ ನಟಿಯರ ಜೀವನದಲ್ಲಿ ವಯಸ್ಸಿನ ಅಂತರ ದೊಡ್ಡ ವಿಚಾರವೇ ಅಲ್ಲ.

 

 

ಸಿನಿಮಾ ಎಂಬ ಕಲರ್ಫುಲ್ ಲೋಕದ ಬಹುತೇಕ ನಟಿ ಮಣಿಯರ ವೈವಾಹಿಕ ಜೀವನ ತೂತು ಮಡಿಕೆಯಾಗಿರುತ್ತದೆ. ಅಂತೆಯೇ ನಮ್ಮ ದಕ್ಷಿಣ ಭಾರತದ ಆಲ್ಮೋಸ್ಟ್ ಟಾಪ್ ನಟಿಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ವಿವಾಹವಾಗಿದ್ದಾರೆ. ಅವರು ಯಾರ್ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ.

 

 

ಕನ್ನಡದ ಮೋಸ್ಟ್ ಫೇವರಿಟ್ ಸೆಲೆಬ್ರಿಟಿ ಕಪಲ್ಸ್ ಎಂದರೆ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್.. ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಅಪಾರ. ಸತತ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಡಿಸೆಂಬರ್ 9 2016 ರಂದು ಶಾಸ್ತ್ರೋಕ್ತವಾಗಿ ವಿವಾಹವಾಗಿ ಎರಡು ಮಕ್ಕಳಿಗೆ ಜನ್ಮ ನೀಡಿ ಸುಖಕರ ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಯಶ್ ಅವರಿಗಿಂತ ರಾಧಿಕಾ ಪಂಡಿತ್ ಎರಡು ವರ್ಷ ದೊಡ್ಡವರು.

 

 

ಕನ್ನಡದಲ್ಲಿ ದೂರದರ್ಶನ ನಟಿಯಾಗಿದ್ದ ಛಾಯ ಸಿಂಗ್ ತದನಂತರ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ನಂತರ ತಮಿಳು, ಮಲಯಾಳಂ, ತೆಲುಗು, ಬಂಗಾಳಿ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿ ಕೆಲಸ ಮಾಡಿ ಖ್ಯಾತರಾಗುತ್ತಾರೆ. ಆ ಮೇಲೆ ಚಿತ್ರರಂಗದಿಂದ ಕೊಂಚ ದೂರ ಉಳಿದು ಜೂನ್ 2012 ರಲ್ಲಿ ತಮಿಳು ನಟ ಕೃಷ್ಣ ಅವರನ್ನು ವಿವಾಹವಾಗುತ್ತಾರೆ. ಕೃಷ್ಣ ಅವರಿಗಿಂತ ಛಾಯಾ ಎರಡು ವರ್ಷ ದೊಡ್ಡವರು ಅನ್ನೋದು ವಿಶೇಷ.

 

 

ಮೂಲತಃ ಮಹಾರಾಷ್ಟ್ರದವರಾದ ನಟಿ ಸ್ನೇಹಾ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರರಂಗದಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ನಟ ಪ್ರಸನ್ನ ಅವರನ್ನು 2012 ರಲ್ಲಿ ವಿವಾಹವಾದ ಅವರು ಸುಖಕರ ಜೀವನ ನಡಸುತ್ತಿದ್ದು, ಪ್ರಸನ್ನ ಅವರು ಸ್ನೇಹಗಿಂತ ಒಂದು ವರುಷ ಚಿಕ್ಕವರು.

 

 

ಮಂಗಳೂರಿನ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಅವರು ದಶಕಗಳ ಕಾಲ ಬಾಲಿವುಡ್‌ ನಲ್ಲಿ ಬೇಡಿಕೆಯ ನಟಿಯಾಗಿದ್ದರು. 22 ನವೆಂಬರ್ 2009 ರಂದು ಉದ್ಯಮಿ ರಾಜಕುಂದ್ರ ಅವರನ್ನು ವಿವಾಹವಾದ ಶಿಲ್ಪಾ ಶೆಟ್ಟಿ, ಅವರಿಗಿಂತ ಎರಡು ವರ್ಷ ಚಿಕ್ಕವರಾಗಿದ್ದಾರೆ.

 

 

ವಿಶ್ವ ಸುಂದರಿ, ತುಳುನಾಡಿನ ಬೆಡಗಿ ಐಶ್ವರ್ಯಾ ರೈ ಅವರು ಬಾಲಿವುಡ್ ನ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಏಪ್ರಿಲ್ 20, 2007 ವಿವಾಹವಾಗುತ್ತಾರೆ. ಆದರೆ ಐಶ್ವರ್ಯ ಗಿಂತ ಅಭಿಷೇಕ್ ಅವರು ಎರಡು ವರ್ಷ ಚಿಕ್ಕವರು ಎಂಬುದು ವಿಶೇಷ.

 

 

ಕನ್ನಡದ ಅಭಿನೇತ್ರಿ ಜಯಂತಿ ಅವರ ಪುತ್ರನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನು ಪ್ರಭಾಕರ್ ಅವರು ಅವರಿಂದ ವಿಚ್ಛೇದನ ಪಡೆದುಕೊಂಡು, ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿ ಅವರನ್ನು ಎರಡನೇ ವಿವಾಹವಾಗಿದ್ದಾರೆ.

 

 

ಕನ್ನಡದಲ್ಲಿ ರವಿಚಂದ್ರನ್ ಅವರೊಂದಿಗೆ ಜೋರ ಚಿತ್ತ ಚೋರ ಚಿತ್ರದಲ್ಲಿ ಅಭಿನಯಿಸಿದ ನಮ್ರತಾ ಶಿರೋಡ್ಕರ್, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಈ ಜೋಡಿಯನ್ನು ತೆಲುಗಿನಲ್ಲಿ ಮೋಸ್ಟ್ ಫೇವರಿಟ್ ಜೋಡಿ ಎಂದು ಕರೆಯುತ್ತಾರೆ. ಆದರೆ ವಿಶೇಷವೇನೆಂದರೆ ನಮ್ರತಾ ಅವರಿಗಿಂತ ಮಹೇಶ್ ಬಾಬು ಎರಡು ವರ್ಷ ಚಿಕ್ಕವರು.

 

 

ವಿಶೇಷ ಏನೆಂದರೆ ತನಗಿಂತ ಚಿಕ್ಕವರಾದ ಮದುವೆಯಾದ ಎಲ್ಲ ನಟಿಯರು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾದರೆ ವಯ್ಯಸ್ಸಿನ ಅಂತರವನ್ನು ನೋಡುವುದಿಲ್ಲ. ಈ ಎಲ್ಲ ಜೋಡಿಗಳು ನಿಮಗೆ ಇಷ್ಟವಾದ್ದಲ್ಲಿ ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆಯನ್ನು ತಿಳಿಸಿ.

LEAVE A REPLY

Please enter your comment!
Please enter your name here