ಪ್ರೀತಿ, ವಿವಾಹ, ಸಂಸಾರ ಎಂಬುದು ಮನುಜನ ಅವಿಭಾಜ್ಯ ಅಂಶ. ಪ್ರೀತಿ ಯಾವಾಗ.? ಎಲ್ಲಿ.? ಯಾರಿಗೆ ಹೇಗೆ ಆಗುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ.! ಎಲ್ಲೂ ಯಾರನ್ನೋ ಹೇಗೋ ಭೇಟಿಯಾಗುತ್ತೀವಿ, ನಂತರ ಆ ಭೇಟಿ ಪ್ರೇಮಾವಾಗಿ ತಿರುಗುತ್ತದೆ. ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನೆಮ್ಮದಿ ಜೀವನ ನಡೆಸಬೇಕೆಂದು ಆಪ್ತರನ್ನು ಎದುರಾಳಿ ಮಾಡಿಕೊಂಡು ವಿವಾಹವಾಗುತ್ತದೆ. ಆದರೆ ಎಷ್ಟು ಮಂದಿ ಪ್ರೀತಿಸಿ ವಿವಾಹವಾಗಿ ನೆಮ್ಮದಿಯಾಗಿದ್ದಾರೆ ಹೇಳಿ?? ಕೆಲವೊಂದು ಸಂಭಂದಗಳು ನಿಶ್ಚಿತಾರ್ಥದಲ್ಲಿ ಮುರಿದು ಹೋಗುತ್ತದೆ. ಈ ಪೈಕಿ ಸಿನಿಮಾ ನಟ, ನಟಿಯರದ್ದೇ ಹೆಚ್ಚು. ಹೀಗೆ ಮದುವೆಯಾಗದೇ ಕಣ್ಣೀರು ಹಾಕಿದ ಕನ್ನಡ ನಟಿಯರು ಯಾರು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..
ಸೃಜನ್ ಲೋಕೇಶ್ ಮತ್ತು ವಿಜಯಲಕ್ಷ್ಮಿ:
ಸುಮಾರು ಏಳು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದುಕೊಂಡವರು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಕನ್ನಡದ ಬಹು ಸುಂದರ ನಟಿ ವಿಜಯಲಕ್ಷ್ಮಿ, ಹೀಗೆ ಪ್ರೀತಿಸಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಳ್ಳುತ್ತಾರೆ. ಆದರೆ ಅದೇನಾಯಿತೋ ಏನೋ ಇನ್ನೇನು ಮದುವೆಯಾಗಬೇಕು ಅನ್ನು ಕೊಳ್ಳುವಷ್ಟರಲ್ಲಿ ಇಬ್ಬರ ನಡುವೆ ವೈಮನಸ್ಸು ಬಂದು ನಿಶ್ಚಿತಾರ್ಥ ಮುರಿದು ಬೀಳುತ್ತದೆ. ನಂತರ ಸೃಜನ್ ಬೇರೊಬ್ಬರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದರೆ, ವಿಜಯಲಕ್ಷ್ಮಿ ಅವರು ಇನ್ನೂ ಒಬ್ಬಂಟಿಯಾಗಿಯೇ ಇದ್ದಾರೆ ..
ಪೂಜಾ ಗಾಂಧಿ ಮತ್ತು ಆನಂದ ಗೌಡ:
ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಬಿಸಿನೆಸ್ ಮನ್ ಆನಂದ ಗೌಡ ಅವರಿಬ್ಬರಿಗೂ ಪೋಷಕರ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿತ್ತು. ಹಾಗೆಯೇ ಮದುವೆ ಸಿದ್ಧತೆಗಳು ಕೂಡ ನಡೆಯುತ್ತಿತ್ತು ಆದರೆ ನಟಿ ಪೂಜಾ ಗಾಂಧಿ ಅವರ ತಾಯಿ ಆನಂದ್ ಗೌಡ ಅವರ ಬಳಿ ಹೆಚ್ಚು ಹಣವನ್ನು ಕೇಳುತ್ತಿದ್ದಾರೆ ಎಂದು ಮದುವೆಯನ್ನು ಮುರಿದುಕೊಂಡರು ಆನಂದ್ ಗೌಡ.. ಮತ್ತು ಪೂಜಾ ಗಾಂಧಿ ಅವರು ಇಂದು ಕೂಡ ವಿವಾಹವಾಗಿಲ್ಲ ..
ಬಿಗ್ ಬಾಸ್ ಸ್ಪರ್ಧಿ ಜಗನ್ ಮತ್ತು ಅನುಪಮಾ ಗೌಡ:
ಬಿಗ್ ಬಾಸ್ ಆವೃತ್ತಿ ಅಹಿತರ ಸ್ಪರ್ಧಿಗಳಾದ ಜಗನ್ ಮತ್ತು ಅನುಪಮಾ ಗೌಡ ಅವರು ಪ್ರೀತಿಸುತ್ತಿದ್ದು, ಉಂಗುರವನ್ನು ಬದಲಾಯಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ದೂರವಾಗುತ್ತಾರೆ. ಇದೀಗ ಜಗನ್ ಅವರು ವಿವಾಹವಾಗಿದ್ದು, ಅನುಪಮಾ ಗೌಡ ಅವರು ಏಕಾಂಗಿಯಾಗಿಯೇ ಇದ್ದಾರೆ..
ರಿಷಿಕಾ ಸಿಂಗ್ ಮತ್ತು ಸಂದೀಪ್:
ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಅವರು ಸಂದೀಪ್ ಎಂಬುವವನ ಜತೆ ಲಿಂಕೇಜ್ ಮೆಂಟ್ ಮಾಡಿಕೊಂಡು ಪತ್ರಿಕೆಯನ್ನು ಕೂಡ ಹಂಚುತ್ತಿದ್ದರು..ಆದರೆ ಹುಡುಗನ ತಾಯಿ ಮತ್ತು ರಿಷಿಕಾ ಸಿಂಗ್ ಮಧ್ಯೆ ವೈಮನಸ್ಸು ಉಂಟಾಗಿ ವಿವಾಹ ಮುರಿದು ಬಿದ್ದಿತ್ತು ..
ತ್ರಿಷಾ ಮತ್ತು ವರುಣ್:
ದಕ್ಷಿಣ ಭಾರತದ ಆಲ್ಮೋಸ್ಟ್ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿರುವ ನಟಿ ತ್ರಿಷಾ ಮತ್ತು ನಿರ್ಮಾಪಕ ವರುಣ್ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆದರೆ ನಿಶ್ಚಿತಾರ್ಥಕ್ಕೆ ತಮಿಳಿನ ಖ್ಯಾತ ನಟ ಧನುಷ್ ಬಂದಿದ್ದು, ಅಲ್ಲಿ ತ್ರಿಷಾ ಅವರ ನಡುವಳಿಕೆ ಇಷ್ಟವಾಗದ ಕಾರಣ ವಿವಾಹವನ್ನು ಕ್ಯಾನ್ಸಲ್ ಮಾಡುತ್ತಾರೆ ನಿರ್ಮಾಪಕ ವರುಣ್. ನಂತರ ಮದುವೆ ಬಗ್ಗೆ ಯೋಚಿಸದೆ ಈಗಲೂ ಕೂಡ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ನಟಿ ತ್ರಿಷಾ..
ನಯನತಾರಾ ಮತ್ತು ಪ್ರಭುದೇವ :
ನಯನಾ ತಾರಾರನ್ನು ಪ್ರೀತಿಸಿದ ನಟ ಪ್ರಭುದೇವ ಅವರು,ವಿವಾಹವಾಗಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡು ಇಬ್ಬರು ನಿಶ್ಚಿತಾರ್ಥ ವಾಗುತ್ತಾರೆ ..ಕಾರಣಾಂತರಗಳಿಂದ ವಿವಾಹವಾಗದ ಇಬ್ಬರೂ ದೂರಾಗುತ್ತಾರೆ.. ನಯನ ತಾರಾ ಅವರ ಬಗ್ಗೆ ನಿರುತ್ಸಾಹ ತೋರಿಸಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ ..
ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ:
ಕನ್ನಡದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ನಟರಾದ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದ ನಂತರ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಆದರೆ ಕಾರಣವಿಲ್ಲದೆ ಈ ಸಂಬಂಧ ಮುರಿದುಬಿದ್ದಿದೆ. ರಶ್ಮಿಕಾ ಮಂದಣ್ಣ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿ ಲಿಪ್ ಲಾಕ್ ಮಾಡಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ನಿಮ್ಮ ಪ್ರಕಾರ ಯಾವ ಜೋಡಿ ವಿವಾಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ.