ಪೂಜಾ ಹೆಗ್ಡೆ ಸೌತ್ ಇಂಡಿಯಾದ ಸಿನಿಮಾ ಜಗತ್ತಿನಲ್ಲಿ ಸದ್ಯಕ್ಕೆ ಸಖತ್ ಸದ್ದು ಮಾಡುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದಾರೆ. ಈಕೆ ಮೂಲತಃ ಮಂಗಳೂರಿನವರು.
ಇವರು ತೆಲುಗು ಚಿತ್ರದಲ್ಲಿ ಚಿಕ್ಕ ಪಾತ್ರಗಳ ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದರು.
ಇವರು ಅಲ್ಲು ಅರ್ಜುನ್, ಪ್ರಿನ್ಸ್ ಮಹೇಶ್ ಬಾಬು ಇನ್ನಿತರ ಟಾಪ್ ನಟರೊಡನೆ ಕೂಡ ನಟಿಸಿದ್ದಾರೆ.
ಪೂಜಾ ಹೆಗ್ಡೆ ಮತ್ತು ಮಹೇಶ್ ಬಾಬು ರವರ ಇತ್ತೀಚೆಗೆ ಬಿಡುಗಡೆ ಆದ “ಮಹರ್ಷಿ” ಮೂವಿ ಪ್ರಪಂಚದಾದ್ಯಂತ ಬಿಡುಗಡೆ ಆಗಿ ಪ್ರದರ್ಶನ ಪಡೆಯುತ್ತಿದೆ. ಈ ಚಿತ್ರ ಬಿಡುಗಡೆ ಆಗುವ ಮೊದಲೇ ಮೇ 01ನೇ ತಾರೀಕಿನಂದು ಮಹರ್ಷಿ ಚಿತ್ರದ ಪ್ರೀ ರಿಲೀಸ್ ಇತ್ತು .

ಈ ಕಾರ್ಯಕ್ರಮಕ್ಕೆ ಪೂಜಾ ಹೆಗ್ಡೆ ಬಂದಿದ್ದರು. ಅಲ್ಲಿ ಅವರು ಕಾರ್ಯಕ್ರಮ ಮುಗಿದ ನಂತರ ಕಂಠ ಪೂರ್ತಿ ಕುಡಿದು ಪೂಜಾ ಹೆಗ್ಡೆ ಅವರು ಕಾರ್ಯಕ್ರಮ ಮುಗಿದ ನಂತರ ಸ್ವತಃ ತಾವೇ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಆಗ ಇವರು ಪೊಲೀಸ್ ಕೈಗೆ ಸಿಕ್ಕಿಬಿದ್ದರು. ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಪೊಲೀಸ್ ಕೈಗೆ ಸಿಕ್ಕಿಬಿದ್ದ ಪೂಜಾ ಹೆಗ್ಡೆ ಮತ್ತು ಅವರ ಮ್ಯಾನೇಜರ್ ಅನ್ನು ಪೊಲೀಸ್ ಬೇರೆ ಕಾರೊಂದರಲ್ಲಿ ಕಳುಹಿಸಿದ್ದಾರೆ. ಈ ವಿಷಯ ಯಾರಿಗೂ ತಿಳಿಯಬಾರದೆಂದು ಈ ರೀತಿ ಮಾಡಿದ್ದಾರೆ ಎಂದು ಮೀಡಿಯಾ ಗಳು ವರದಿ ಮಾಡಿವೆ ಎಂದು ಹೇಳಲಾಗುತ್ತಿದೆ.