ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಕನ್ನಡದ 3 ಚಿತ್ರಗಳು !!

0
339

ನೆನ್ನೆ ವರಮಹಾಲಕ್ಷ್ಮಿ ಹಬ್ಬ ಒಂದೆಡೆಯಾದರೆ, ಕುರುಕ್ಷೇತ್ರ ಮತ್ತು ಕೆಂಪೇಗೌಡ-೨ ಹಬ್ಬ ಇನ್ನೊಂದೆಡೆ..
ಹೌದು ಕನ್ನಡದ ಬಹು ನಿರೀಕ್ಷಿತ ಚಿತ್ರಗಳಾದ ಸಿನಿಮಾಗಳು ನೆನ್ನೆ ಬಿಡುಗಡೆಯಾಗಿದ್ದು.ಕನ್ನಡದಲ್ಲಿ ಮಾತ್ರವಲ್ಲದೆ ಇಡೀ ವಿಶ್ವಾದ್ಯಾಂತ ಹೆಸರು ಮಾಡುತ್ತಿವೆ ! ಈ ಸಂಭ್ರಮದ ನಡುವೆಯೇ ಕನ್ನಡ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ! ಅದೇನೆಂದರೆ,66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು, 11 ಕನ್ನಡ ಸಿನಿಮಾಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ !

KGF ಚಾಪ್ಟರ್ ೧ ಚಿತ್ರಕ್ಕೆ 2 ಪ್ರಶಸ್ತಿಗಳು !
ಪ್ರಶಾಂತ್ ನೀಲ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಜಿಎಫ್ ವಿಶ್ವಾದ್ಯಂತ ಹೆಸರು ಮಾಡಿತ್ತು ! ಈ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಂತಾರಾಷ್ಟ್ರೀಯ ನಟರಾಗಿ ಹೊರಹೊಮ್ಮಿದರು !
ಇನ್ನು ಈ ಚಿತ್ರಕ್ಕೆ ಎರಡು ಪ್ರಶಸ್ತಿಗಳು ದೊರೆತಿದೆ !
ಅತ್ಯುತ್ತಮ ವಿಎಫ್‌ಎಕ್ಸ್ ಚಿತ್ರ ಹಾಗೂ ಅತ್ಯುತ್ತಮ ಸಾಹಸ ಸಿನಿಮಾ ಎಂಬ ಪ್ರಶಸ್ತಿಯನ್ನು ಕೆ.ಜಿ.ಎಫ್ ಮುಡಿಗೇರಿಸಿಕೊಂಡಿದೆ !

ಒಂದಲ್ಲ – ಎರಡಲ್ಲ ಚಿತ್ರಕ್ಕೆ ಎರಡು ಪ್ರಶಸ್ತಿಗಳು !
ರಾಮ ರಾಮರೇ ಎಂಬುವ ಸೂಪರ್ ಹಿಟ್ ಸಿನಿಮಾ ನೀಡಿದ್ದ ಡಿ.ಸತ್ಯ ಪ್ರಕಾಶ್ ಅವರು ಒಂದಲ್ಲ ಎರಡಲ್ಲ ಚಿತ್ರವನ್ನು ಸಹ ನಿರ್ದೇಶನ ಮಾಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು!
ಸಾಮಾಜಿಕ ಹಾಸ್ಯ ನಾಟಕವಾದ ಈ ಚಿತ್ರಕ್ಕೆ
ಅತ್ಯುತ್ತಮ ಬಾಲ ಕಲಾವಿದ, ಅತ್ಯುತ್ತಮ ರಾಷ್ಟೀಯ ಏಕತಾ ಸಿನಿಮಾ ಎಂಬ 2 ಪ್ರಶಸ್ತಿಯನ್ನು ಪಡೆದಿದೆ. !

ನಾತಿಚರಾಮಿ ಚಿತ್ರಕ್ಕೆ ಐದು ಪ್ರಶಸ್ತಿಗಳು !

ಸಂಧ್ಯಾ ರಾಣಿ ಯವರ ಕಥೆ ಹಾಗು ಮನ್ಸೂರ್ ನಿರ್ದೇಶಿನದಲ್ಲಿ ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ಮುಖ್ಯ ಭುಮಿಕೆಯಲ್ಲಿ ಅಭಿನಯಿಸಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪುರಸ್ಕಾರ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಮಹಿಳಾ ಗಾಯಕಿ, ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ
ಜೊತೆಗೆ ಶ್ರುತಿ ಹರಿಹರನ್ ಗೆ ಈ ಸಿನಿಮಾದ ನಟನೆಗಾಗಿ ವಿಶೇಷ ಪ್ರಶಸ್ತಿ ದೊರಕಿದೆ

ಉಳಿದಂತೆ’ಮೂಕಜ್ಜಿಯ ಕನಸುಗಳು ಚಿತ್ರಕ್ಕೆ ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗಳು ಲಬಿಸಿದೆ

LEAVE A REPLY

Please enter your comment!
Please enter your name here