ಮೇಡ್ ಇನ್ ಇಂಡಿಯಾ BMW ಬೈಕ್ ನಲ್ಲಿ ಮಿಂಚಿದ ಹಾಲಿವುಡ್ ಸ್ಟಂಟ್ ಧೀರ ಟಾಮ್ ಕ್ರೂಸ್

0
126

ಬೆಂಗಳೂರು: ಹಾಲಿವುಡ್ ನ ಕ್ರೇಸಿಯೆಸ್ಟ್ ಸ್ಟಂಟ್ ವೀರ ಮೇಡ್ ಇನ್ ಇಂಡಿಯಾ ಬೈಕ್ ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಮಿಷನ್ ಇಂಪಾಸಿಬಲ್ ಸರಣಿಯ ಹೊಸ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಮೇಡ್ ಇನ್ ಇಂಡಿಯಾ BMW G310 GS ಬೈಕ್ ಅನ್ನು ಓಡಿಸಿದ್ದಾರೆ. ಚಿತ್ರದ ಸಾಹಸ ಸನ್ನಿವೇಶದ ಶೂಟಿಂಗ್ ವೇಳೆ ಟಾಮ್ ಕ್ರೂಸ್ ಇಟಲಿ ಪೊಲೀಸ್ ಇಲಾಖೆಗೆ ಸೇರಿದ ನೀಲಿ ಬಣ್ಣದ BMW ಬೈಕ್ ಅನ್ನು ಓಡಿಸಿದ್ದಾರೆ.

ಮಿಷನ್ ಇಂಪಾಸಿಬಲ್ ಖ್ಯಾತಿಯ ಟಾಮ್ ಕ್ರೂಸ್ ಸಾಹಸಮಯ ದೃಶ್ಯಗಳಿಗೆ ಹೆಸರುವಾಸಿ. ಟಾಮ್ ರ ಅಸಲಿ ವಯಸ್ಸು 57. ಆದ್ರೂ ಇನ್ನೂ ಯುವಕರು ನಾಚುವಂತೆ ತಮ್ಮ ಬಾಡಿ ಮೆಂಟೈನ್ ಮಾಡಿದ್ದಾರೆ. 1990 ಮತ್ತು 2000 ನೇ ದಶಕದಲ್ಲಿ ತೆರೆಕಂಡ ಮಿಷನ್ ಇಂಪಾಸಿಬಲ್ ಎಂಬ ಸಾಹಸ ಪ್ರಧಾನ ಚಲನಚಿತ್ರ ಸರಣಿಯಲ್ಲಿ ಬೇಹುಗಾರನಾಗಿ ನಟಿಸುವುದರ ಮೂಲಕ ಇದೇ ಶೈಲಿಯನ್ನು ಮುಂದುವರಿಸಿದ್ದರು. ಚಿತ್ರದಲ್ಲಿ ಥ್ರಿಲ್ ಇರ್ಬೇಕು ಅನ್ನೋ ಕಾರಣಕ್ಕೆ ಕಂಪ್ಯೂಟರ್ ಗ್ರಾಫಿಕ್ ಬಳಸದೇ ನೈಜವಾಗಿ ಚಿತ್ರೀಕರಣದ ದೃಶ್ಯಗಳಲ್ಲಿ ಟಾಮ್ ನಟಿಸುತ್ತಾರೆ. ವಿಮಾನವನ್ನು ಓಡಿಸುವ.. ಎತ್ತರ ಕಟ್ಟಡಗಳನ್ನ ಏರುವ ದೃಶ್ಯಗಳಲ್ಲಿ ಟಾಮ್ ಡ್ಯೂಪ್ ಇಲ್ಲದೇ ನಟಿಸುತ್ತಾರೆ.

ಅಷ್ಟೇ ಅಲ್ಲ, ಸೂಪರ್ ಹಿಟ್ ಸಿನಿಮಾ ಮಿಷನ್ ಇಂಪಾಸಿಬಲ್ ನ ಫಾಲೌಟ್ ಶೂಟಿಂಗ್ ನಲ್ಲಿ ನೇತಾಡುವ ಸನ್ನಿವೇಶದಲ್ಲಿ ಕ್ರೂಸ್ ಗೆ ಗಂಭೀರ ಗಾಯವಾಗಿತ್ತು. ಕೆಲ ದಿನಗಳಲ್ಲಿ ಚೇತರಿಸಿಕೊಂಡು ಬುರ್ಜ್ ಖಲೀಫಾ ಕಟ್ಟಡವನ್ನೇ ಹತ್ತಿದ್ದರು. ಪೈಲೆಟ್ ತರಬೇತಿಯನ್ನೂ ಪಡೆದುಕೊಂಡಿರುವ ಟಾಮ್ ಕ್ರೂಸ್ ಅನೇಕ ಚಿತ್ರಗಳಲ್ಲಿ ವಿಮಾನ, ಹೆಲಿಕಾಪ್ಟರ್ ಓಡ್ಸಿದ್ದಾರೆ. ವಿಶ್ವದಾದ್ಯಂತ ಅಪಾರ ಅಭಿಮಾನಿಗಳು ಇರುವ ಕಾರಣಕ್ಕೆ ಈ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಟಾಮ್. ಇನ್ನು ಶತಕೋಟಿ-ಡಾಲರ್ ಗಳಿಸಬಲ್ಲ ಯಶಸ್ಸಿಗೆ ಖಾತ್ರಿ ನೀಡಬಲ್ಲ ಚಲನಚಿತ್ರ ನಿರ್ಮಾಣ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ನಿರ್ಮಾಪಕರಲ್ಲಿ ಕ್ರೂಸ್ರವರು ಒಬ್ಬರು ಎಂದು ಹಾಲಿವುಡ್ ಪತ್ರಕರ್ತರೊಬ್ಬರು 2005ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಬಾರಿಯ ವಿಶೇಷ ಅಂದ್ರೆ ಹಾಲಿವುಡ್ ನ ಈ ಕ್ರೇಸಿಯೆಸ್ಟ್ ಸ್ಟಂಟ್ ಧೀರ ಭರ್ಜರಿ ಸ್ಟರ್ಟ್ ಜೊತೆ ಮೇಡ್ ಇನ್ ಇಂಡಿಯಾ ಬೈಕ್ ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಮಿಷನ್ ಇಂಪಾಸಿಬಲ್ ಚಿತ್ರದ ಸಾಹಸ ಸನ್ನಿವೇಶದ ಶೂಟಿಂಗ್ ವೇಳೆ ಟಾಮ್ ಕ್ರೂಸ್ ಇಟಲಿ ಪೊಲೀಸ್ ಇಲಾಖೆಗೆ ಸೇರಿದ ನೀಲಿ ಬಣ್ಣದ BMW ಬೈಕ್ ಅನ್ನು ಚಲಾಯಿಸಿದ್ದಾರೆ.

ಹಾಲಿವುಡ್ ನಟ ಟಾಮ್ ಕ್ರೂಸ್ ಶೀಘ್ರದಲ್ಲಿಯೇ ಬಾಹ್ಯಾಕಾಶದಲ್ಲಿ ನಡೆಸಲಾಗುವ ಚಿತ್ರೀಕರಣದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆಯುವ ಕ್ರೂಸ್ ಯೋಚನೆಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಒಪ್ಪಿಗೆ ಸೂಚಿಸಿದೆ. ಈ ಚಿತ್ರದಲ್ಲಿ ನಟಿಸುವ ಮೂಲಕ ಬಾಹ್ಯಾಕಾಶದಲ್ಲಿ ಶೂಟಿಂಗ್ ನಡೆಸಿದ ಮೊದಲ ನಟ ಎಂಬ ಹೆಗ್ಗಳಿಕೆಗೆ ಟಾಮ್ ಕ್ರೂಸ್ ಪಾತ್ರರಾಗಲಿದ್ದಾರೆ.

LEAVE A REPLY

Please enter your comment!
Please enter your name here