ಏನ್ ಚಳಿಯಪ್ಪಾ….ದೇವರಿಗೂ ಸ್ವೆಟರ್ ತೊಡಿಸಿ, ಬೆಡ್‍ಶೀಟ್ ಹೊದಿಸಿದ ಭಕ್ತರು…!

0
210

ಚಳಿಗಾಲ ಆರಂಭವಾಗಿ ಬಹಳ ದಿನಗಳಾಗಿದ್ದು ಜನರು ಚಳಿಯಿಂದ ರಕ್ಷಿಸಿಕೊಳ್ಳಲು, ಸ್ವೆಟರ್, ಕ್ಯಾಪ್ ತೊಡುವುದು, ಬೆಂಕಿ ಕಾಯಿಸಿಕೊಳ್ಳುವುದು ಮಾಡುತ್ತಿದ್ದಾರೆ. ಇನ್ನು ಕಾಶಿಯಲ್ಲೂ ಹೆಚ್ಚು ಚಳಿ ಇದ್ದು ಭಕ್ತರು ಒಂದು ಹೆಜ್ಜೆ ಮುಂದೆ ಹೋಗಿ ದೇವರಿಗೂ ಸ್ವೆಟರ್ ತೊಡಿಸಿದ್ದಾರೆ.

 

 

ವಾರಣಾಸಿಯ ಲೋಹ್ತಿಯಾ ಬಳಿಯ ದೇವಸ್ಥಾನಗಳಲ್ಲಿ ಭಕ್ತರು ದೇವರ ಮೂರ್ತಿಗಳಿಗೆ ವುಲ್ಲನ್‍ನಿಂದ ತಯಾರಿಸಿದ ಸ್ವೆಟರ್ ತೊಡಿಸಿ, ಬೆಡ್‍ಶೀಟ್ ಹೊದಿಸಿ ಅಲಂಕಾರ ಮಾಡಿದ್ದಾರೆ. ದೇವರು ಕೂಡಾ ನಮ್ಮಂತೆಯೇ ನಮಗೆ ಇಷ್ಟು ಚಳಿಯಾಗುವಾಗ ದೇವರಿಗೆ ಇನ್ನೂ ಹೆಚ್ಚಿನ ಚಳಿಯಾಗುತ್ತದೆ ಎಂಬ ನಂಬಿಕೆಯಿಂದ ದೇವರ ಮೂರ್ತಿಗಳಿಗೆ ಸ್ವೆಟರ್ ತೊಡಿಸಿದ್ದಾರೆ.

 

 

ಇಷ್ಟೇ ಅಲ್ಲ, ಬೇಸಿಗೆಯಲ್ಲಿ ದೇವರಿಗೆ ಶೆಕೆ ಆಗದಿರಲು ಮಂದಿರದೊಳಗೆ ಎಸಿ ಹಾಗೂ ಫ್ಯಾನ್ ಬಳಸಲಾಗುತ್ತದೆ ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ದೇವಸ್ಥಾನದ ಅರ್ಚಕ, ಭಕ್ತರ ಭಾವನೆಗಳಿಗೆ ನಾವು ಅಡ್ಡಿಯುಂಟುಮಾಡುವುದಿಲ್ಲ.

 

 

ಚಳಿಗಾಲದಲ್ಲಿ ದೇವರಿಗೂ ಚಳಿಯಾಗುತ್ತದೆ ಎಂದು ಆಸ್ತಿಕರು ನಂಬಿದ್ದಾರೆ. ಆದ್ದರಿಂದ ಅವರ ಆಸೆಯಂತೆ ನಾವು ದೇವರಿಗೆ ಸ್ವೆಟರ್ ತೊಡಿಸಿದ್ದೇವೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ವಾಯುಮಾಲಿನ್ಯದಿಂದ ದೇವರಿಗೆ ಯಾವ ತೊಂದರೆ ಆಗಬಾರದು ಎಂಬ ಉದ್ದೇಶಕ್ಕೆ ಜನರು ದೇವರ ಮೂರ್ತಿಗಳಿಗೆ ಮಾಸ್ಕ್ ಕೂಡಾ ಹಾಕಿದ್ದರು.

LEAVE A REPLY

Please enter your comment!
Please enter your name here