ತಲೆ ನೋವು ಫಟಾಫಟ್ ಹೋಗಲು ಮಾತ್ರೆ ಬಳಸದೆ ಇಲ್ಲಿದೆ ಸರಳ ಪರಿಹಾರಗಳು.!

0
711

ತಲೆ ನೋವು ಮೈಗ್ರೇನ್ ಯಾರಿಗೆ ತಾನೇ ಬರೋಲ್ಲ ಹೇಳಿ. ಈಗಂತೂ ಸಣ್ಣವರಿಂದ ದೊಡ್ಡವರಿಗೂ ತಲೆನೋವು ಕಾಮನ್ ಆಗಿದೆ. ಅದರಲ್ಲೂ ಈ ನೋವು ಬಂದ್ರೆ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತೇವೆ. ಆದರೆ ಅದಕ್ಕೆ ಕಾರಣ ಮಾತ್ರ ತಿಳಿದುಕೊಳ್ಳಲ್ಲ. ನಮಗಾಗುವ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಕ್ಷಣಮಾತ್ರದಲ್ಲಿ ಕಂಡುಕೊಳ್ಳಬಹುದಾದ ಪರಿಹಾರ ಇಲ್ಲಿದೆ.

ಸಾಮಾನ್ಯವಾಗಿ ನಮಗೆ ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತದೆ.. ಅಲ್ಲದೇ ಬಹು ಉಪಯೋಗಿಯಾದ ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು ಕಡಿಮೆ ಮಾಡಬಹುದು ಕೂಡ. ಇಲ್ಲವಾದರೆ ಎಲ್ಲರಿಗೂ ಸುಲಭವಾಗಿ ಸಿಗುವ ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಕ್ಸ್ ಮಾಡಿ ಹಣೆಗೆ ಮಸಾಜ್ ಮಾಡಿ ರಿಲ್ಯಾಕ್ಸ್ ಆಗಿ ಇದರಿಂದ ತಲೆನೋವು ಸುಲಭವಾಗಿ ಕಡಿಮೆಯಾಗುತ್ತದೆ.

 

ತುಳಸಿ ಎಲೆಯ ರಸವನ್ನುಹಿಂಡಿ ಶ್ರೀಗಂಧದ ಪುಡಿ ಜತೆ ಕಲಸಿ ಹಣೆಯ ಮೇಲಿನ ಭಾಗಕ್ಕೆ ಹಚ್ಚಿಕೊಂಡು ಸುಮಾರು 1 ಗಂಟೆ ಬಿಡಬೇಕು ನಂತರ ಮುಖವನ್ನು ತೊಳೆಯುವುದರಿಂದ ತಲೆನೋವು ಮಂಗಮಾಯವಾಗುತ್ತಾದೆ. ಶುಂಠಿ ಎಲ್ಲದಕ್ಕೂ ರಾಮ ಬಾಣವಾಗಿದ್ದು ಶುಂಠಿ ಟೀ ಸೇವನೆ ಮಾಡುವುದರಿಂದ ತಲೆನೋವು ಬಹುಬೇಗ ಕಡಿಮೆಯಾಗುತ್ತಾದೆ. ಇನ್ನು ಬಾಳೆಹಣ್ಣು ತಿಂದು ನೀರು ಕುಡಿದರೆ ತಲೆನೋವು ಮಂಗಮಾಯವಾಗುತ್ತದೆ. ಆದರೆ ಈ ಟ್ರಿಕ್ ಎಲ್ಲ ಸಂದರ್ಭಗಳಲ್ಲೂ ಕೆಲಸಕ್ಕೆ ಬರೋಲ್ಲ ಕೆಲವರಿಗೆ ಮಾತ್ರ ಸರಿ ಹೊಂದುತ್ತದೆ.

 

ಬೆಳ್ಳುಳ್ಳಿ ಸೇವನೆ ಹೆಚ್ಚು ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತಾದೆ. ನೀವು ತಲೆನೋವಿನಿಂದ ಬಳಲುತ್ತಿದ್ದರೆ ಲವಂಗ ಮತ್ತು ಉಪ್ಪನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತಲೆನೋವಿಗೆ ಪರಿಹಾರ ಕಾಣಬಹುದು.ಇತ್ತೀಚಿನ ದಿನಗಳಲ್ಲಿ ತಲೆನೋವು ಎಂಬುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ತಲೆನೋವಿಗೆ ಪ್ರತಿನಿತ್ಯ ನಾವು ಬಳಸುವ ಅಡುಗೆ ಪದಾರ್ಥಗಳನ್ನು ಬಳಸಿ ಮೇಲಿನವುಗಳನ್ನು ಉಪಯೋಗಿಸಿಕೊಂಡು ಸುಲಭ್ವಾಗಿ ಪರಿಹಾರ ಪಡೆಯಬಹುದು. ಆದರೆ ಬಳಕೆಗೂ ಮುನ್ನ ವೈದ್ಯರನ್ನು ಒಮ್ಮೆ ಭೇಟಿಯಾಗುವುದು ಒಳಿತು.

LEAVE A REPLY

Please enter your comment!
Please enter your name here