ತಿರುಪತಿ : ಈ ಐದು ದಿನ ವಿಶೇಷ ದರ್ಶನ ರದ್ದು ಪಡಿಸಿದ ಟಿಟಿಡಿ

0
240

ಮುಂದಿನ ವರ್ಷದ ಪ್ರಾರಂಭದ ಹಾಗೂ ಇದೇ ವರ್ಷಾಂತ್ಯದ ಕೊನೆಯ ವಾರದ 5 ದಿನಗಳಲ್ಲಿ ವಿಶೇಷ ದರ್ಶನವನ್ನು ರದ್ದುಗೊಳಿಸಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

 

 

ಇನ್ನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸವರ್ಷ ಮತ್ತು ವೈಕುಂಠ ಏಕಾದಶಿಯ ಸಾಮಾನ್ಯವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ಟಿಟಿಡಿ ಹೇಳಿದೆ. ದೇವಾಲಯದ ವಿಶೇಷ ದಾನಿಗಳು, ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಕಲ್ಪಿಸಲಾಗುತ್ತಿರುವ ಈ ಸ್ಪೆಷಲ್ ದರ್ಶನವನ್ನು ಐದು ದಿನಗಳ ಮಟ್ಟಿಗೆ ರದ್ದು ಪಡಿಸಲಾಗಿದೆ. ಡಿಸೆಂಬರ್ 31, ಜನವರಿ 1, ಜನವರಿ 5 ರಿಂದ 7ರ ಅವಧಿಯಲ್ಲಿ ವಿಶೇಷ ದರ್ಶನ ವ್ಯವಸ್ಥೆ ಇರುವುದಿಲ್ಲ.

 

 

ಜನವರಿ 6 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ.ಈ ಅವಧಿಯಲ್ಲಿ ತಿರುಮಲದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು, ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು ಎಂದು ತಿರುಪತಿ ತಿರುಮಲ ದೇವಸ್ಥಾನ ತಿಳಿಸಿದೆ.

 

 

ಇನ್ನು ಧರ್ಮ ಪ್ರಚಾರದ ಭಾಗವಾಗಿ, ವಿಶೇಷ ವಾರ್ಷಿಕ ಕ್ಯಾಲೆಂಡರ್ ಅನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು. ವಿವಿಧ ರೀತಿಯ ಕ್ಯಾಲೆಂಡರುಗಳು ಸಿದ್ದಗೊಳ್ಳುತ್ತಿವೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ

LEAVE A REPLY

Please enter your comment!
Please enter your name here